ಕರ್ನಾಟಕ

karnataka

ETV Bharat / business

ಸತತ ರೆಪೊ ದರ ಕಡಿತದ ಹಿಂದಿನ ರಹಸ್ಯ ಬಿಚ್ಚಿಟ್ಟ ಆರ್​ಬಿಐನ ಗವರ್ನರ್​! - ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್

ಫೆಬ್ರವರಿಯಲ್ಲಿ ಕೋವಿಡ್-19 ಆರಂಭವಾದಾಗಿನಿಂದ ಆರ್‌ಬಿಐ, ರೆಪೊ ದರವನ್ನು 135 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್​​ ಎಸ್​ಬಿಐನ 7ನೇ ಬ್ಯಾಂಕಿಂಗ್ ಹಾಗೂ ಅರ್ಥಶಾಸ್ತ್ರ ಕಾನ್​ಕ್ಲೇವ್​ನಲ್ಲಿ 'ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ಕೊರೊನಾದ ಪ್ರಭಾವ' ಕುರಿತು ಮಾಡಿದ ಭಾಷಣದಲ್ಲಿ ಹೇಳಿದರು.

shakthikanth das
shakthikanth das

By

Published : Jul 11, 2020, 2:18 PM IST

Updated : Jul 11, 2020, 4:35 PM IST

ಮುಂಬೈ: ವಿತ್ತೀಯ ಒತ್ತಡವನ್ನು ನಿವಾರಣೆಗೆ ಮತ್ತು ಆರ್ಥಿಕತೆಯಲ್ಲಿ ಸ್ಥಿರತೆ ಕಾಪಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2019ರಿಂದ ಇಲ್ಲಿವರೆಗೆ ರೆಪೊ ದರದಲ್ಲಿ 250 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿದೆ ಎಂದು ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಕೋವಿಡ್-19 ಆರಂಭವಾದಾಗಿನಿಂದ ಆರ್‌ಬಿಐ ರೆಪೊ ದರವನ್ನು 135 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಲಾಗಿದೆ ಎಂದು ವಿವರಿಸಿದರು.

ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಯಾಕೆ ಕಡಿಮೆ ಮಾಡಲಾಯಿತು ಎಂಬುದಕ್ಕೆ ವಿವರಣೆ ಕೊಟ್ಟ ಅವರು, ಆರ್ಥಿಕತೆಯ ಮಂದಗತಿಯ ಬೆಳವಣಿಗೆಗೆ ಚೇತರಿಕೆ​ ನೀಡಲು ಹಾಗೂ ಹಣದ ಹರಿವು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ರೆಪೊ ದರ ಇಳಿಕೆ ಮಾಡಲಾಯಿತು ಎಂದು ದಾಸ್ ಸ್ಪಷ್ಟನೆ ನೀಡಿದರು.

ಕೋವಿಡ್-19 ಅತ್ಯಂತ ಕೆಟ್ಟ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಾಗಿದ್ದು, ಉತ್ಪಾದನೆ ಹಾಗೂ ಉದ್ಯೋಗದ ಮೇಲೆಯೂ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಿದೆ. ಇದು ಜಗತ್ತಿನಾದ್ಯಂತ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದೆ ಎಂದು ಎಸ್​ಬಿಐನ ' 7ನೇ ಬ್ಯಾಂಕಿಂಗ್ ಹಾಗೂ ಅರ್ಥಶಾಸ್ತ್ರ ಕಾನ್​ಕ್ಲೇವ್​'ನಲ್ಲಿ ಮಾತನಾಡಿ ಕಳವಳ ವ್ಯಕ್ತಪಡಿಸಿದರು.

Last Updated : Jul 11, 2020, 4:35 PM IST

ABOUT THE AUTHOR

...view details