ಕರ್ನಾಟಕ

karnataka

ETV Bharat / business

Scrap ನೀತಿ: ಅವಧಿ ಮುಗಿದು ಬಳಕೆಯಲ್ಲಿಲ್ಲದ ವಾಹನಗಳ ಮರುಬಳಕೆ - ಸ್ಕ್ರ್ಯಾಪ್ ನೀತಿ 2021

2025ರ ವೇಳೆಗೆ ದೇಶದಲ್ಲಿ ಎರಡು ಕೋಟಿಗೂ ಹೆಚ್ಚು ಬಳಕೆಯಲ್ಲಿಲ್ಲದ ವಾಹನಗಳು ಇರಲಿವೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರವು ವಾಹನ ಸ್ಕ್ರ್ಯಾಪ್​ ನೀತಿ ಪರಿಚಯಿಸಲಿದೆ. ಹೀಗಾಗಿ, ಬಳಕೆಯಲ್ಲಿ ಇಲ್ಲದ ವಾಹನಗಳಿಗೆ ಮರುಬಳಕೆ ಸೌಲಭ್ಯಗಳನ್ನು ದೇಶಾದ್ಯಂತ ಸ್ಥಾಪಿಸುವುದಾಗಿ ರಾಂಕಿ ಎನ್ವಿರೋ ಎಂಜಿನಿಯರ್‌ ತಿಳಿಸಿದೆ.

Scrap
Scrap

By

Published : Jun 8, 2021, 1:38 PM IST

ಹೈದರಾಬಾದ್​: ಬಳಕೆಯಲ್ಲಿ ಇಲ್ಲದ ವಾಹನಗಳಿಗೆ ಮರುಬಳಕೆ ಸೌಲಭ್ಯಗಳನ್ನು ದೇಶಾದ್ಯಂತ ಸ್ಥಾಪಿಸುವುದಾಗಿ ಹೈದರಾಬಾದ್ ಮೂಲದ ರಾಂಕಿ ಎನ್ವಿರೋ ಎಂಜಿನಿಯರ್‌ ಘೋಷಿಸಿದೆ.

ಮೊದಲ ಹಂತದಲ್ಲಿ ಹೈದರಾಬಾದ್, ದೆಹಲಿ, ಮುಂಬೈ, ಬೆಂಗಳೂರು, ಆದಿತ್ಯಪುರ, ಚೆನ್ನೈ ಮತ್ತು ಇತರ ಇಪ್ಪತ್ತಕ್ಕೂ ಹೆಚ್ಚು ನಗರಗಳಲ್ಲಿ ಮರುಬಳಕೆ ಸೌಲಭ್ಯ ಸ್ಥಾಪಿಸಲಾಗುವುದು. ಇದಕ್ಕಾಗಿ ರಾಂಕಿ ಪ್ರಯಾಣಿಕ-ಸರಕು ವಾಹನ ತಯಾರಕರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದನ್ನು ಸಹ ಬಹಿರಂಗಪಡಿಸಲಾಗಿದೆ.

ಇದನ್ನೂ ಓದಿ: IBPS,RRB, PO ಕ್ಲರ್ಕ್​ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಕೆ, ಶುಲ್ಕ, ವಯಸ್ಸಿನ ಮಾಹಿತಿ ಇಲ್ಲಿದೆ...

2025ರ ವೇಳೆಗೆ ದೇಶದಲ್ಲಿ ಎರಡು ಕೋಟಿಗೂ ಹೆಚ್ಚು ಬಳಕೆಯಲ್ಲಿಲ್ಲದ ವಾಹನಗಳು ಇರಲಿವೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರವು ವಾಹನ ಸ್ಕ್ರ್ಯಾಪ್​ ನೀತಿ ಪರಿಚಯಿಸಲಿದೆ. ಈ ವಾಹನಗಳನ್ನು ಸರಿಯಾಗಿ ಮರುಬಳಕೆ ಮಾಡದಿದ್ದರೆ ವಾಯು ಮಾಲಿನ್ಯ ಹೆಚ್ಚಾಗುತ್ತದೆ ಎಂದು ಹೇಳಿದೆ. ಇತ್ತೀಚಿನ ತಂತ್ರಜ್ಞಾನ, ಯಂತ್ರೋಪಕರಣಗಳು ಮತ್ತು ಕಾರ್ಯವಿಧಾನಗಳೊಂದಿಗೆ ನಿರ್ವಹಿಸಲಾಗುವುದು ಎಂದು ರಾಂಕಿ ತಿಳಿಸಿದೆ.

ABOUT THE AUTHOR

...view details