ನವದೆಹಲಿ:ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿನ ಅದ್ಭುತ ಪ್ರಗತಿ ಈಗ ವೆಬ್ ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆ ಪರಿಚಯಿಸಲು ಕಾರ್ಯ ಸಾಧ್ಯವಾಗಿಸಿದೆ.
ಸರಕು ಮತ್ತು ಪೂರಕ ಶುಲ್ಕಗಳು ಸೇರಿದಂತೆ ಎಲ್ಲ ರೀತಿಯ ಶುಲ್ಕಗಳನ್ನು ಸರಳ, ಅನುಕೂಲಕರ, ವೇಗ ಹಾಗೂ ಪಾರದರ್ಶಕ ಪಾವತಿ ಪ್ರಕ್ರಿಯೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಗ್ರಾಹಕರು ನಾನಾ ವಿಧದ ಶುಲ್ಕ ಪಾವತಿ ಆಯ್ಕೆ ವೆಬ್‌ನಲ್ಲಿ ಪಡೆಯಬಹುದು.
ರೈಲ್ವೆ ಸಚಿವಾಲಯ ಇಂದು ಸರಕು ಶುಲ್ಕಗಳ ಆನ್‌ಲೈನ್ ಪಾವತಿ ವ್ಯವಸ್ಥೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಎಸ್‌ಬಿಐನ ಪಾವತಿ ಗೇಟ್‌ವೇ ಮೂಲಕ ಸರಕು ವ್ಯವಹಾರ ಅಭಿವೃದ್ಧಿ (ಎಫ್‌ಬಿಡಿ) ಪೋರ್ಟಲ್ ಮೂಲಕ ಒದಗಿಸಲಾಗುತ್ತಿದೆ.
ಇದು ಸರಕು ಸಂಗ್ರಹಣೆ ಮತ್ತು ಎಲ್ಲಾ ರೀತಿಯ ಪೂರಕ ಶುಲ್ಕಗಳನ್ನು ಸಂಗ್ರಹಿಸುವ ಸೌಲಭ್ಯ ಒದಗಿಸುತ್ತದೆ. ಉದಾ. ಪ್ರೀಮಿಯಂ ಚಾರ್ಜ್, ವ್ಯಾಗನ್ ನೋಂದಣಿ ಶುಲ್ಕ, ವಿಳಂಬ ಶುಲ್ಕ, ಸೈಡಿಂಗ್ ಚಾರ್ಜ್, ಶಂಟಿಂಗ್ ಚಾರ್ಜ್, ರೀಬುಕಿಂಗ್ ಚಾರ್ಜ್, ಡೈವರ್ಷನ್ ಚಾರ್ಜ್ ಸೇರಿದಂತೆ ಇತರ ಶುಲ್ಕಗಳನ್ನು ಎಫ್‌ಬಿಡಿ ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆಯಡಿ ವಾರದ 24 ಗಂಟೆಗಳ ಕಾಲ ಲಭ್ಯವಿರುತ್ತದೆ. ಇದು 2021ರ ಜೂನ್ 1ರಿಂದ ಜಾರಿಗೆ ಬರುತ್ತದೆ.
ಸರಕು ಶುಲ್ಕಗಳಿಗಾಗಿ ಆನ್‌ಲೈನ್ ಪಾವತಿ ವ್ಯವಸ್ಥೆಗಾಗಿ ರೈಲ್ವೆ ಸಚಿವಾಲಯ ಹೊರಡಿಸಿದ ಯುಡ್‌ಲೈನ್‌ಗಳು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಒಳಗೊಂಡಿವೆ