ನವದೆಹಲಿ:ಕೋವಿಡ್ ಲಾಕ್ಡೌನ್ ವೇಳೆಯಲ್ಲಿ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಭಾರತೀಯ ರೈಲ್ವೆ ಇಲಾಖೆಯು ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿತ್ತು. ಇದಕ್ಕಾಗಿ ಬರೋಬ್ಬರಿ 2,142 ಕೋಟಿ ರೂ. ವೆಚ್ಚ ಮಾಡಿತ್ತು. ಇದಕ್ಕೆ ಪ್ರತಿಯಾಗಿ ರೈಲ್ವೆ ಇಲಾಖೆ ಗಳಿಸಿದ್ದು 429 ಕೋಟಿ ರೂ. ಆದಾಯ ಮಾತ್ರ.
ಗುಜರಾತ್ ಹಾಗೂ ಮಹಾರಾಷ್ಟ್ರದಿಂದಲೇ ಹೆಚ್ಚು ಮಂದಿ ವಲಸಿಗರು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಗುಜರಾತ್ನಿಂದಲೇ 15 ಲಕ್ಷ ಕಾರ್ಮಿಕರನ್ನು ಕರೆದೊಯ್ಯಲು 1,027 ರೈಲುಗಳು ಓಡಾಟ ನಡೆಸಿದ್ದು, 102 ಕೋಟಿ ಶುಲ್ಕವನ್ನು ರಾಜ್ಯ ರೈಲ್ವೆ ಪಾವತಿಸಿದೆ. 12 ಲಕ್ಷ ವಲಸಿಗರಿಗಾಗಿ ಮಹಾರಾಷ್ಟ್ರವು 844 ರೈಲುಗಳಿಂದ 85 ಕೋಟಿ ರೂ., 4 ಲಕ್ಷ ವಲಸಿಗರಿಗಾಗಿ ತಮಿಳುನಾಡು 271 ರೈಲುಗಳಿಂದ 34 ಕೋಟಿ ರೂ. ಪಾವತಿಸಿದೆ. ಉಳಿದಂತೆ ಉತ್ತರ ಪ್ರದೇಶ 21 ಕೋಟಿ, ಬಿಹಾರ 8 ಕೋಟಿ ಹಾಗೂ ಪಶ್ಚಿಮ ಬಂಗಾಳ 64 ಲಕ್ಷ ರೂ. ಪಾವತಿಸಿದೆ.