ನವದೆಹಲಿ: ರೈಲ್ವೆ ಸೇವೆಗಳ ವಿಲೀನದಿಂದಾಗಿ ನೌಕರರ ಹಿರಿತನಕ್ಕೆ ಧಕ್ಕೆ ಆಗಲಿದೆ ಎಂಬ ಆತಂಕವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ನಿವಾರಿಸಿದ್ದಾರೆ.
ಅಧಿಕಾರಿಯ ಕೇಡರ್ ಆಧಾರದ ಮೇಲೆ ಹುದ್ದೆಗಳನ್ನು ನಿಗದಿಪಡಿಸಲಾಗುವುದಿಲ್ಲ. ಮೆರಿಟ್ ಕಮ್ ಹಿರಿತನದ ಆಧಾರದ ಮೇಲೆ ಅಧಿಕಾರಿಗಳಿಗೆ ಸಮಾನ ಅವಕಾಶ ನೀಡುವುದು ರೈಲ್ವೆ ಮಂಡಳಿಯ ಭಾಗವಾಗಿದೆ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
'ಎಲ್ಲ 8,400 ಅಧಿಕಾರಿಗಳ ಬಡ್ತಿ ಮತ್ತು ಹಿರಿತನವನ್ನು ರಕ್ಷಿಸಲು ನಾವು ಪರ್ಯಾಯ ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿದ್ದೇವೆ' ಎಂದು ಸಚಿವರು ಮತ್ತೊಂದು ಟ್ವಿಟ್ಟರ್ನಲ್ಲಿ ಸುಳಿವು ನೀಡಿದ್ದಾರೆ.
ಕೇಡರ್ ಬಗೆಗಿನ ವಿಧಾನಗಳನ್ನು ರೂಪಿಸುವವರೆಗೆ ಎಲ್ಲ ಅಧಿಕಾರಿಗಳು ತಮ್ಮ ವಿಶೇಷ ಸೇವೆಗಳಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ. ತಮ್ಮ ವೃತ್ತಿಜೀವನದ ಪ್ರಗತಿಯಲ್ಲಿ ಒಬ್ಬ ಅಧಿಕಾರಿಗೂ ಸಹ ಅನಾನುಕೂಲವಾಗದಂತೆ ರೈಲ್ವೆ ಮಂಡಳಿಯ ಅಭಯ ನೀಡುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.