ನವದೆಹಲಿ: ಇದೇ ಸೆಪ್ಟೆಂಬರ್ನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ 'ಹೌಡಿ ಮೋದಿ' ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಈ ಬಗ್ಗೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರು ಮತ್ತೆ ಅಣಕವಾಡಿದ್ದಾರೆ.
'ಹೌಡಿ ಮೋದಿ' ಸಮಾವೇಶದಿಂದ ಆರ್ಥಿಕ ಅವ್ಯವಸ್ಥೆ ಮುಚ್ಚಿಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ಅಣಕು - ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ
ಸೆಪ್ಟೆಂಬರ್ 22ರಂದು ಅಮೆರಿಕದ ಹ್ಯೂಸ್ಟನ್ನಲ್ಲಿ ನಡೆಯಲ್ಲಿರುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಭಾರತೀಯ- ಅಮೆರಿಕನ್ನರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದು, ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದಾರೆ. ನಿನ್ನೆ ಕೂಡ ಇದೇ ಸಮಾವೇಶವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ವ್ಯಂಗ್ಯ ಮಾಡಿದ್ದರು.
ಸಾಂದರ್ಭಿಕ ಚಿತ್ರ
"ಪಿಎಂ ಅವರ 'ಹೌಡಿ ಇಂಡಿಯನ್ ಎಕಾನಮಿ' ಉತ್ಸವದಂದು ಷೇರು ಮಾರುಕಟ್ಟೆ ಬಂಪರ್ ವಹಿವಾಟು ನಡೆಸಲೇನೋ ಸಿದ್ಧವಾಗಿದೆ. 1.4 ಲಕ್ಷ ಕೋಟಿ ರೂ. ವೆಚ್ಚದ ವಿಶ್ವದ ಅತ್ಯಂತ ದುಬಾರಿ ಸಮಾವೇಶ ಇದಾಗಲಿದೆ! ಆದರೆ, ಯಾವುದೇ ''ಹೌಡಿಮೋಡಿ"ಯಂತಹ ಸಮಾವೇಶ ಆರ್ಥಿಕ ಅವ್ಯವಸ್ಥೆಯ ವಾಸ್ತವತೆಯನ್ನು ಮರೆಮಾಚಲು ಸಾಧ್ಯವಿಲ್ಲ' ಎಂದು ಅವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.