ನವದೆಹಲಿ: ಹಣದುಬ್ಬರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದು, ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ ಎಂದು ಇಂಧನ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಗರಿಷ್ಠ ಮಟ್ಟ ತಲುಪಿದ ಇಂಧನ ಬೆಲೆ: ಕೇಂದ್ರದ ವಿರುದ್ಧ ರಾಗಾ ವಾಗ್ದಾಳಿ
ದೇಶದಲ್ಲಿ ಒಂದೇ ವಾರದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಕೇಂದ್ರದ ವಿರುದ್ಧ ರಾಗಾ ವಾಗ್ದಾಳಿ
ದೇಶದಲ್ಲಿ ಒಂದೇ ವಾರದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಹೆಚ್ಚಳವಾಗಿದ್ದು, ಇಂಧನ ಬೆಲೆ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಗಾ, "ಮೋದಿಜೀ ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಮಾಡಿ ಜಿಡಿಪಿಯಲ್ಲಿ ಭಾರಿ ಬೆಳವಣಿಗೆಯನ್ನು ತೋರಿಸಿದ್ದಾರೆ" ಎಂದು ಹೇಳಿದ್ದಾರೆ.
ವಿವಿಧ ನಗರಗಳಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ:
- ಬೆಂಗಳೂರು: ಪೆಟ್ರೋಲ್ 88.59 ರೂ. ಮತ್ತು ಡೀಸೆಲ್ 80.20 ರೂ.
- ನವದೆಹಲಿ: ಪೆಟ್ರೋಲ್ 85.70 ರೂ. ಮತ್ತು ಡೀಸೆಲ್ 75.88 ರೂ.
- ಮುಂಬೈ: ಪೆಟ್ರೋಲ್ 92.28 ರೂ. ಮತ್ತು ಡೀಸೆಲ್ 82.40 ರೂ.
- ಚೆನ್ನೈ: ಪೆಟ್ರೋಲ್ 76.07 ರೂ. ಮತ್ತು ಡೀಸೆಲ್ 81.14 ರೂ.
- ಹೈದರಾಬಾದ್: ಪೆಟ್ರೋಲ್ 88.89 ರೂ. ಮತ್ತು ಡೀಸೆಲ್ 82.53 ರೂ