ನವದೆಹಲಿ: ವೈರ್ಲೆಸ್ ಟೆಕ್ನಾಲಜಿ ಲೀಡರ್ ಕ್ವಾಲ್ಕಾಮ್ ಕಂಪನಿಯು ಜಿಯೋದಲ್ಲಿ ಶೇ.0.15ರಷ್ಟು (₹ 730 ) ಪಾಲು ಖರೀದಿಸಲು ನಿರ್ಧರಿಸಿದೆ. ಈ ಮೂಲಕ ಏಪ್ರಿಲ್ನಿಂದ ಈವರೆಗೂ ಮುಖೇಶ್ ಅಂಬಾನಿಯ ರಿಲಯನ್ಸ್ ಕಂಪನಿಗೆ ₹ 1.18 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ.
ಭಾರತದಲ್ಲಿ ಸುಧಾರಿತ 5ಜಿ ತಂತ್ರಜ್ಞಾನ ಮೂಲಸೌಕರ್ಯಗಳ ಮತ್ತು ಸೇವೆಗಳ ಅಭಿವೃದ್ಧಿಗೆ ಈ ಹೂಡಿಕೆ ಮಾಡಲು ಜಿಯೋದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದೊಂದಿಗೆ, ರಿಲಯನ್ಸ್ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನಲ್ಲಿ ಶೇ 25.24ರಷ್ಟು ಪಾಲನ್ನು ಮಾರಾಟ ಮಾಡಿದೆ. ದೃಢ ಹೆಜ್ಜೆ ಇಟ್ಟಿರುವ ರಿಲಯನ್ಸ್ ಜಿಯೋ ಪಾಲು ಮಾರಾಟ ಮಾಡುವ ಮೂಲಕ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳುತ್ತಿದೆ.
ರಿಲಾಯನ್ಸ್ ಜಿಯೋದಲ್ಲಿ ಖರೀದಿ ಮಾಡುತ್ತಿರುವುದು ಇದು 10ನೇ ಸಂಸ್ಥೆ. ಫೇಸ್ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ ಮತ್ತು ಈಗ ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ ಸಂಸ್ಥೆ ಈವರೆಗೆ ಜಿಯೋದಲ್ಲಿ ಹೂಡಿಕೆ ಮಾಡಿವೆ. ಈ 10 ಸಂಸ್ಥೆಗಳ ಒಪ್ಪಂದಗಳಿಂದ ರಿಲಯನ್ಸ್ ಜಿಯೋಗೆ ಒಟ್ಟು ₹ 1,18,318.45 ಕೋಟಿ ಬಂಡವಾಳ ಹರಿದು ಬಂದಿದೆ.
ಈವರೆಗೂ ಜಿಯೋದಲ್ಲಿ ಮಾಡಲಾಗಿರುವ ಹೂಡಿಕೆ
- ಫೇಸ್ಬುಕ್: 43,573 ಕೋಟಿ (ಶೇ.9.99)
- ಸಿಲ್ವರ್ ಲೇಕ್ ಪಾರ್ಟ್ನರ್: ₹ 10,202.55 ಕೋಟಿ (ಶೇ.2.08)
- ವಿಸ್ಟಾ ಈಕ್ವಿಟಿ ಪಾರ್ಟ್ನರ್: ₹ 11,367 ಕೋಟಿ (ಶೇ.2.32)
- ಜನರಲ್ ಅಟ್ಲಾಂಟಿಕ್: ₹ 6,598.38 ಕೋಟಿ (ಶೇ.1.34)
- ಕೆಕೆಆರ್: ₹ 11,367 ಕೋಟಿ (ಶೇ.2.32)
- ಮುಬಾದಲ: ₹ 9,093.60 ಕೋಟಿ (ಶೇ.1.85 )
- ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ: ₹ 17050.50 ಕೋಟಿ (ಶೇ.3.48)
- ಟಿಪಿಜಿ: ₹ 4,546.80 ಕೋಟಿ (ಶೇ.0.93 )
- ಎಲ್ ಕ್ಯಾಟರ್ಟನ್: ₹ 1,894.50 ಕೋಟಿ (ಶೇ.0.39)
- ಕ್ವಾಲ್ಕಾಮ್ ಕಂಪನಿ: ₹ 730 ಕೋಟಿ (ಶೇ.0.15)