ನವದೆಹಲಿ: ಪ್ರಯಾಣಿಕರ ವಾಹನಗಳ (ಪಿವಿ) ಚಿಲ್ಲರೆ ಮಾರಾಟದಲ್ಲಿ ಶೇಕಡಾ 28.39ರಷ್ಟು ಏರಿಕೆ ಕಂಡು ಬಂದಿದ್ದು, 2,79,745 ಯುನಿಟ್‌ಗಳಿಗೆ ತಲುಪಿದೆ ಎಂದು ಆಟೋಮೊಬೈಲ್ ವಿತರಕರ ಸಂಸ್ಥೆ ಎಫ್‌ಡಿಎ ಗುರುವಾರ ತಿಳಿಸಿದೆ.
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಪ್ರಕಾರ, ಪಿವಿ ಮಾರಾಟವು ಮಾರ್ಚ್ 2020ರಲ್ಲಿ 2,17,879 ಯುನಿಟ್‌ಗಳಷ್ಟಿತ್ತು.
ಆದರೆ, ದ್ವಿಚಕ್ರ ವಾಹನಗಳ ಮಾರಾಟವು ಕಳೆದ ತಿಂಗಳು ಶೇಕಡಾ 35.26ರಷ್ಟು ಕುಸಿದು 11,95,445ಕ್ಕೆ ತಲುಪಿದೆ. 2020ರ ಮಾರ್ಚ್‌ನಲ್ಲಿ ಇದು 18,46,613 ಯುನಿಟ್‌ಗಳಷ್ಟಿತ್ತು.