ಕರ್ನಾಟಕ

karnataka

ETV Bharat / business

ಮೇ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಭಾರೀ ಕುಸಿತ - ವಾಣಿಜ್ಯ ವಾಹನ ಮಾರಾಟ

1,497 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) 1,294 ಕಚೇರಿಗಳಿಂದ ವಾಹನ ನೋಂದಣಿ ಡೇಟಾ ಸಂಗ್ರಹಿಸಿದ ಎಫ್‌ಎಡಿಎ, ಪಿವಿ ಮಾರಾಟವು ಈ ವರ್ಷದ ಏಪ್ರಿಲ್‌ನಲ್ಲಿ 2,08,883 ಯುನಿಟ್‌ ಆಗಿತ್ತು. ದ್ವಿಚಕ್ರ ವಾಹನಗಳ ಮಾರಾಟವೂ ಕಳೆದ ತಿಂಗಳು ಶೇ 53ರಷ್ಟು ಕುಸಿದು 4,10,757ಕ್ಕೆ ತಲುಪಿದ್ದು, ಏಪ್ರಿಲ್‌ನಲ್ಲಿ 8,65,134 ಯುನಿಟ್‌ ಮಾರಾಟ ಆಗಿದ್ದವು ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ತಿಳಿಸಿದೆ.

PV retail
PV retail

By

Published : Jun 10, 2021, 1:14 PM IST

ನವದೆಹಲಿ:ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಪ್ರಯಾಣಿಕರ ವಾಹನ (ಪಿವಿ) ಚಿಲ್ಲರೆ ಮಾರಾಟವು ಮೇ ತಿಂಗಳಲ್ಲಿ ಶೇ 59ರಷ್ಟು ಕುಸಿದು 85,733 ಯುನಿಟ್‌ಗಳಿಗೆ ತಲುಪಿದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ತಿಳಿಸಿದೆ. ರಾಜ್ಯಗಳಾದ್ಯಂತ ಕೋವಿಡ್​ ಸಂಬಂಧಿತ ಲಾಕ್​ಡೌನ್​ ವಿಧಿಸಿದ್ದರಿಂದ ಮಾರಾಟಕ್ಕೆ ತೀವ್ರ ಅಡಚಣೆ ಆಗಿದೆ ಎಂದು ಹೇಳಿದೆ.

1,497 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) 1,294 ಕಚೇರಿಗಳಿಂದ ವಾಹನ ನೋಂದಣಿ ದತ್ತಾಂಶ ಸಂಗ್ರಹಿಸಿದ ಎಫ್‌ಎಡಿಎ, ಪಿವಿ ಮಾರಾಟವು ಈ ವರ್ಷದ ಏಪ್ರಿಲ್‌ನಲ್ಲಿ 2,08,883 ಯುನಿಟ್‌ ಆಗಿತ್ತು. ದ್ವಿಚಕ್ರ ವಾಹನಗಳ ಮಾರಾಟವೂ ಕಳೆದ ತಿಂಗಳು ಶೇ 53ರಷ್ಟು ಕುಸಿದು 4,10,757ಕ್ಕೆ ತಲುಪಿದ್ದು, ಏಪ್ರಿಲ್‌ನಲ್ಲಿ 8,65,134 ಯುನಿಟ್‌ ಮಾರಾಟ ಆಗಿದ್ದವು.

ವಾಣಿಜ್ಯ ವಾಹನಗಳ ಮಾರಾಟವೂ ಕಳೆದ ತಿಂಗಳು ಶೇ 66ರಷ್ಟು ಕುಸಿದು 17,534 ಯೂನಿಟ್​ಗಳಿಗೆ ತಲುಪಿದ್ದು, ಏಪ್ರಿಲ್‌ನಲ್ಲಿ 51,436 ಯುನಿಟ್‌ಗಳಷ್ಟಿತ್ತು. ಮೂರು ವೀಲರ್ ಮಾರಾಟವು ಕಳೆದ ತಿಂಗಳು ಶೇ 76ರಷ್ಟು ಕುಸಿದು 5,215ಕ್ಕೆ ತಲುಪಿದ್ದು, ಈ ವರ್ಷದ ಏಪ್ರಿಲ್‌ನಲ್ಲಿ 21,636 ಯುನಿಟ್‌ಗಳಷ್ಟಿತ್ತು.

ಇದನ್ನೂ ಓದಿ: 1 ಡಾಲರ್‌ ಆದಾಯ ತೆರಿಗೆಯನ್ನೂ ಪಾವತಿಸದ ಜಾಗತಿಕ ಕುಬೇರರಿವರು..!

ಟ್ರ್ಯಾಕ್ಟರ್ ಮಾರಾಟವು ಕಳೆದ ತಿಂಗಳು ಶೇ 57ರಷ್ಟು ಕುಸಿದು 16,616ಕ್ಕೆ ತಲುಪಿದ್ದು, ಏಪ್ರಿಲ್‌ನಲ್ಲಿ 38,285 ಯುನಿಟ್ ಮಾರಾಟವಾಗಿದೆ. ಏಪ್ರಿಲ್‌ನಲ್ಲಿ 11,85,374 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ತಿಂಗಳು ವಿಭಾಗಗಳ ಒಟ್ಟು ನೋಂದಣಿ ಶೇ 55ರಷ್ಟು ಇಳಿದು 5,35,855ಕ್ಕೆ ತಲುಪಿದೆ.

ಕೋವಿಡ್​ ಎರಡನೇ ಅಲೆಯು ಇಡೀ ದೇಶವನ್ನು ಧ್ವಂಸಗೊಳಿಸಿದೆ. ನಗರ ಮಾರುಕಟ್ಟೆಗಳ ಹೊರತಾಗಿ, ಈ ಸಮಯದಲ್ಲಿ ಗ್ರಾಮೀಣ ಪ್ರದೇಶಗಳೂ ಸಹ ತೀವ್ರವಾಗಿ ಹಾನಿಗೊಳಗಾದವು. ಹೆಚ್ಚಿನ ರಾಜ್ಯಗಳಲ್ಲಿ ಲಾಕ್​ಡೌನ್ ಮುಂದುವರೆದಿದೆ ಎಂದು ಎಫ್​ಎಡಿಎ ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ.

ABOUT THE AUTHOR

...view details