ಕರ್ನಾಟಕ

karnataka

ETV Bharat / business

ಕೇರಳದ ಹುತಾತ್ಮ ಯೋಧನ ಕುಟುಂಬಕ್ಕೆ 25 ಲಕ್ಷ ರೂ., ಮನೆ, ಸರ್ಕಾರಿ ಉದ್ಯೋಗ - business

ಹುತಾತ್ಯೋಮ ಯೋಧನ ಕುಟುಂಬಕ್ಕೆ ₹ 25 ಲಕ್ಷ ರೂ. ನೀಡಲಾಗಿದ್ದು, ಅದರಲ್ಲಿ ₹ 15 ಲಕ್ಷ ಪತ್ನಿಗೆ ಹಾಗೂ ₹ 10 ಲಕ್ಷ ತಾಯಿಗೆ ನೀಡಲು ಕೇರಳ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

Army

By

Published : Feb 19, 2019, 11:04 PM IST

ತಿರುವನಂತಪುರಂ: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾದ 49 ಹುತಾತ್ಮ ಸೈನಿಕರಲ್ಲಿ ಕೇರಳದ ವಯ್ನಾಡ್​​ ಜಿಲ್ಲೆಯ ಲಕ್ಕಿದಿ ಯೋಧ ವಸಂತ್​ಕುಮಾರ್​​ ವಿ.ವಿ. ಸಹ ಒಬ್ಬರು. ಯೋಧನ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಉದ್ಯೋಗ ಮತ್ತು ಹಣಕಾಸಿನ ನೆರವು ನೀಡಿದೆ.

ಸಚಿವ ಸಂಪುಟದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್​ ಅವರು, ಯೋಧನ ಕುಟುಂಬಕ್ಕೆ ₹ 25 ಲಕ್ಷ ರೂ. ನೀಡಲಾಗಿದ್ದು, ಅದರಲ್ಲಿ ₹ 15 ಲಕ್ಷ ಪತ್ನಿಗೆ ಹಾಗೂ ₹ 10 ಲಕ್ಷ ತಾಯಿಗೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಿ ಸರ್ಕಾರಿ ಉದ್ಯೋಗ ಸಹ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಯೋಧನ ಪತ್ನಿಗೆ ವಯನಾಡು ಜಿಲ್ಲೆಯ ಪಶುವೈದ್ಯಕೀಯ ಕಾಲೇಜಿನಲ್ಲಿ ತಾತ್ಕಾಲಿಕ ಹುದ್ದೆ ನೀಡಲಾಗಿದೆ. ಮುಂದೆ ಶಾಶ್ವತ ಉದ್ಯೋಗ ಒದಗಿಸಲಾಗುವುದು. ಸದ್ಯ ಈ ಕುಟುಂಬಸ್ಥರು ಹುತಾತ್ಮ ತಂದೆ ನಿರ್ಮಿಸಿದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರದ ವತಿಯಿಂದ ಒಂದು ಮನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

For All Latest Updates

TAGGED:

business

ABOUT THE AUTHOR

...view details