ಮುಂಬೈ: 2021ರ ಬಜೆಟ್‌ನಲ್ಲಿ ಘೋಷಿಸಲಾದ ಅನುತ್ಪಾದಕ ಆಸ್ತಿ (ಎನ್‌ಪಿಎ) ನಿರ್ವಹಣೆ ಉದ್ದೇಶಿತ ಆಸ್ತಿ ಪುನರ್ನಿರ್ಮಾಣ ಕಂಪನಿ (ಎಆರ್‌ಸಿ) ಬಾಹ್ಯವಾಗಿ ಅಸ್ತಿತ್ವದಲ್ಲಿ ಇರುವ ಉದ್ಯಮಿಗಳ ಚಟುವಟಿಕೆಗಳನ್ನು 'ಅಪಾಯಕ್ಕೆ ಒಳಪಡಿಸುವುದಿಲ್ಲ' ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಭರವಸೆ ನೀಡಿದರು.
ಕೇಂದ್ರ ಬಜೆಟ್ 2021 ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಸ್ತಿತ್ವದಲ್ಲಿ ಇರುವ ಒತ್ತಡದ ಸಾಲಗಳನ್ನು ಕ್ರೋಢೀಕರಿಸಲು ಮತ್ತು ಸ್ವಾಧೀನಪಡಿಸಿಕೊಳ್ಳಲು ಹಾಗೂ ಅವುಗಳನ್ನು ನಿರ್ವಹಿಸಲು ಆಸ್ತಿ ಪುನರ್ನಿರ್ಮಾಣ ಕಂಪನಿ ಮತ್ತು ಆಸ್ತಿ ನಿರ್ವಹಣಾ ಕಂಪನಿ ಸ್ಥಾಪಿಸುವುದಾಗಿ ಪ್ರಸ್ತಾಪಿಸಿದ್ದರು.
ಯಾವುದೇ ರೀತಿಯಲ್ಲಿ ಇದು ಪ್ರಸ್ತಾವಿತ ಎಆರ್‌ಸಿ ಅಸ್ತಿತ್ವದಲ್ಲಿ ಇರುವ ಎಆರ್‌ಸಿಗಳ ಚಟುವಟಿಕೆಗಳಿಗೆ ಅಪಾಯವನ್ನುಂಟು ಮಾಡುವುದಿಲ್ಲ. ಮತ್ತೊಂದು ಸದೃಢವಾದ ಎಆರ್‌ಸಿ ಹೊಂದಲು ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ ಎಂದು ಬಾಂಬೆ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗವರ್ನರ್ ಹೇಳಿದ್ದಾರೆ.
ದೇಶದಲ್ಲಿ ಸದ್ಯ ಸುಮಾರು 28 ಆಸ್ತಿ ಪುನರ್ನಿರ್ಮಾಣ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಎಆರ್‌ಸಿ ಸ್ಥಾಪಿಸುವ ಪ್ರಸ್ತಾವನೆಯನ್ನು ಸಾರ್ವಜನಿಕ ವಲಯದ ಬ್ಯಾಂಕ್ಗಳು ಸರ್ಕಾರಕ್ಕೆ ನೀಡಿದ್ದು, ಅದನ್ನು ಒಪ್ಪಿಕೊಂಡು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ದಾಸ್ ಹೇಳಿದ್ದಾರೆ.