ಕರ್ನಾಟಕ

karnataka

ETV Bharat / business

ಮುಂಬೈನಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್​ ಬೆಲೆ... ಬೆಂಗಳೂರಲ್ಲಿ ಎಷ್ಟಿದೆ? - ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ

ಪ್ರತಿ ಲೀಟರ್‌ ಪೆಟ್ರೋಲ್​ಗೆ ಇಂದು 25 ಪೈಸೆ ಹಾಗೂ ಡೀಸೆಲ್​ಗೆ 30 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್​​ ಪೆಟ್ರೋಲ್​ ಬೆಲೆ 97.07 ರೂ. ಹಾಗೂ ಡೀಸೆಲ್​ ಬೆಲೆ 89.99 ರೂ.ಗೆ ಹೆಚ್ಚಳವಾಗಿದೆ.

fuel price in India
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ

By

Published : May 29, 2021, 11:47 AM IST

ಮುಂಬೈ: ದೇಶದ ಜನರು ಕೋವಿಡ್​ ಎರಡನೇ ಅಲೆಯಲ್ಲಿ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ವೇಳೆಯಲ್ಲಿ ದಿನದಿಂದ ದಿನಕ್ಕೆ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಬೆಲೆಯನ್ನು ಹೆಚ್ಚಿಸುತ್ತಲೇ ಇವೆ. ಒಂದೇ ತಿಂಗಳಲ್ಲಿ 16 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ.

ಇಂದು ಮತ್ತೆ ಲೀಟರ್‌ ಪೆಟ್ರೋಲ್​ಗೆ 25 ಪೈಸೆ ಹಾಗೂ ಡೀಸೆಲ್​ಗೆ 30 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ ನೂರು ರೂಪಾಯಿ ಗಡಿ ದಾಟಿದ್ದು, ಇತರ ಮೆಟ್ರೋ ನಗರಗಳಿಗಿಂತ ಮುಂಬೈನಲ್ಲೇ ಡೀಸೆಲ್ ಬೆಲೆ ಅಧಿಕವಾಗಿದೆ.​ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 93.94 ರೂ. ಹಾಗೂ ಡೀಸೆಲ್​ ಬೆಲೆ 84.89 ರೂ.ಗೆ ಏರಿಕೆಯಾಗಿದೆ.

ಈ ಬೆಲೆ ಏರಿಕೆ ಬೆಳವಣಿಗೆಯು ದೇಶದ ಮೆಟ್ರೋ ನಗರಗಳಿಗೆ ಅನ್ವಯವಾಗಲಿದ್ದು, ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂದಿನ ಇಂಧನ ಬೆಲೆ ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 97.07 ರೂ. 89.99 ರೂ.
ದೆಹಲಿ 93.94 ರೂ. 84.89 ರೂ.
ಕೋಲ್ಕತ್ತಾ 93.97 ರೂ. 87.74 ರೂ.
ಮುಂಬೈ 100.19 ರೂ. 96.55 ರೂ.
ಚೆನ್ನೈ 95.51 ರೂ. 89.65 ರೂ.

ABOUT THE AUTHOR

...view details