ನವದೆಹಲಿ :ಈ ತಿಂಗಳ ಆರಂಭದಲ್ಲಿ 25 ರೂ. ಏರಿಕೆಯಾಗಿದ್ದ ಅಡುಗೆ ಅನಿಲ ಬೆಲೆ ಇದೀಗ ಮತ್ತೆ 50 ರೂಪಾಯಿಯಷ್ಟು ಏರಿಕೆಯಾಗಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ಒಂದೇ ತಿಂಗಳಲ್ಲಿ ಒಟ್ಟು 75 ರೂ. ಹೆಚ್ಚಳವಾಗಿದೆ. ಇದು ಜನರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.
ಸೋಮವಾರ ಅಂದರೆ ನಾಳೆಯಿಂದ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಮೆಟ್ರೋ ನಗರಗಳಲ್ಲಿ ಈ ದರ ಅನ್ವಯವಾಗಲಿದೆ. ದೆಹಲಿಯಲ್ಲಿ ಜನರು ಎಲ್‌ಪಿಜಿ ಸಿಲಿಂಡರ್‌ಗೆ 769 ರೂ. ನೀಡಬೇಕಿದೆ. ಬೆಂಗಳೂರಿನಲ್ಲಿ 722 ರಿಂದ 772ರೂ.ಗೆ ಬೆಲೆ ಏರಿಕೆಯಾಗಿದೆ.