ಮುಂಬೈ:ಕೆನಡಾದ ಸಂಸ್ಥೆಯ ಸಹಯೋಗದೊಂದಿಗೆ ಕ್ಲೀನ್-ಟೆಕ್ ಸ್ಟಾರ್ಟ್ಅಪ್ ಎಚ್ 2 ಇ ಪವರ್ ಸಿಸ್ಟಮ್ಸ್ ಬೆಂಬಲದೊಂದಿಗೆ ದೇಶದ ಮೊದಲ ಸಂಯೋಜಿತ ಹೈಡ್ರೋಜನ್ ಚಾಲಿತ ತ್ರಿಚಕ್ರ ವಾಹನ ಅಭಿವೃದ್ಧಿಪಡಿಸುತ್ತಿರುವುದಾಗಿ ಸಿರಂ ಸಂಸ್ಥೆ ಮುಖ್ಯಸ್ಥ ಆದರ್ ಪೂನವಾಲ್ಲಾ ತಿಳಿಸಿದ್ದಾರೆ.
ಹೈಡ್ರೋಜನ್ ತ್ರಿಚಕ್ರ ವಾಹನ ಪರಿಕಲ್ಪನೆಯು ನಗರ ಸಾರ್ವಜನಿಕ ಮತ್ತು ಸರಕು ಸಾಗಣೆ ಗುರಿಯಾಗಿರಿಸಿಕೊಂದೆ. ಎಚ್ 2ಇ ಇಂಧನ ಕೋಶ ತಂತ್ರಜ್ಞಾನವನ್ನು ಕಡಿಮೆ-ವೆಚ್ಚ ಮತ್ತು ಕಡಿಮೆ ಒತ್ತಡದ ಹೈಡ್ರೋಜನ್ ಸಿಲಿಂಡರ್‌ನೊಂದಿಗೆ ಸಂಯೋಜಿಸುತ್ತದೆ. ಈ ತಂತ್ರಜ್ಞಾನವನ್ನು ಕೆನಡಾದ ಸಂಸ್ಥೆ ಹೈಡ್ರೋಜನ್ ಇನ್ ಮೋಷನ್ ಅಭಿವೃದ್ಧಿಪಡಿಸಿದೆ.
ಈ ತಂತ್ರಜ್ಞಾನವು ಶೂನ್ಯ ಹೊಗೆ ಹೊರಸೂಸುವ ಸಾರ್ವಜನಿಕ ಸಾರಿಗೆ ವಾಹನ ಹೊರ ತರಲು ನೆರವಾಗುತ್ತದೆ. ಇದು ಇತರ ತಂತ್ರಜ್ಞಾನಗಳೊಂದಿಗೆ ವೆಚ್ಚದ ಮೇಲೆ ಸ್ಪರ್ಧಾತ್ಮಕವಾಗಿ ಸಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಈ ಯೋಜನೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಜಂಟಿ ಉತ್ತೇಜಕವಾಗಿ ಜಿಐಟಿಎ ಭಾಗಶಃ ಹಣ ಒದಗಿಸುತ್ತದೆ.
ಭಾರತವು ಒಂದು ದೊಡ್ಡ ಇ - ಮೊಬಿಲಿಟಿ ಕ್ರಾಂತಿಯ ಹಾದಿಯಲ್ಲಿದೆ. ನಾವು ಸಾಂಪ್ರದಾಯ ಆಧಾರಿತ ಚಲನಶೀಲತೆಯಿಂದ ಬ್ಯಾಟರಿಗಳು ಮತ್ತು ಹೈಡ್ರೋಜನ್‌ನತ್ತ ವೇಗವಾಗಿ ಸಾಗುತ್ತಿದ್ದೇವೆ. ನಾವು ಈಗಾಗಲೇ ನಮ್ಮ ವಿದ್ಯುದ್ವಿಚ್ಛೋದ್ಯಗಳಿಂದ ಹಸಿರು ಹೈಡ್ರೋಜನ್ ಉತ್ಪಾದಿಸುತ್ತಿದ್ದೇವೆ. ಈಗ ಅಂತರ ನಗರಕ್ಕಾಗಿ ತ್ರಿಚಕ್ರ ಪರಿಕಲ್ಪನೆ ಅಭಿವೃದ್ಧಿಪಡಿಸುತ್ತಿದ್ದೇವೆ. ಹಸಿರು ಹೈಡ್ರೋಜನ್ ಬಳಸಿ ಸಾರ್ವಜನಿಕ ಮತ್ತು ಸರಕು ಸಾಗಣೆಗೆ ನೆರವಾಗಲಾಗುವುದು ಎಂದು ಎಚ್ 2 ಇ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಆರ್ ಮಯೂರ್ ಹೇಳಿದರು.
ಈ ಯೋಜನೆಯನ್ನು ಬೆಂಬಲಿಸುತ್ತಿರುವ ಜಿಟಾ ಭಾರತದಲ್ಲಿ ಶೂನ್ಯ ಹೊರಸೂಸುವಿಕೆ ವಾಹನ ಪರಿಕಲ್ಪನೆಯನ್ನು ವರ್ಧಿಸುವ ಭರವಸೆ ನೀಡಿದೆ ಎಂದರು.