ಕರ್ನಾಟಕ

karnataka

ETV Bharat / business

ಪ್ರೋತ್ಸಾಹ ಯೋಜನೆಯಿಂದ ಕೇಂದ್ರಕ್ಕೆ ಹರಿದು ಬರಲಿದೆ 40 ಲಕ್ಷ ಕೋಟಿ ರೂ. ಆದಾಯ - ಆರ್ಥಿಕ ಚೇತರಿಕೆ

ಪಿಎಲ್ಐ ಒದಗಿಸಿದ ಬೆಂಬಲದೊಂದಿಗೆ ಮುಂದಿನ 24-30 ತಿಂಗಳಲ್ಲಿ ಉತ್ಪಾದನೆ ಪ್ರಾರಂಭವಾಗಲಿದೆ. ಬಂಡವಾಳ ವೆಚ್ಚ ಸುಮಾರು 2-2.7 ಲಕ್ಷ ಕೋಟಿ ರೂ.ಯಷ್ಟು ಇರಲಿದೆ. ಐಟಿ ಹಾರ್ಡ್‌ವೇರ್, ಟೆಲಿಕಾಂ ಉಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಫೋನ್‌ಗಳಂತಹ ಕ್ಷೇತ್ರಗಳಲ್ಲಿ ದೇಶೀಯ ಉತ್ಪಾದನೆ ದುರ್ಬಲವಾಗಿತ್ತು. ಇತ್ತೀಚಿನ ಪಿಎಲ್‌ಐಗಳಿಂದಾಗಿ ಈ ಕ್ಷೇತ್ರಗಳಲ್ಲಿನ ಬಂಡವಾಳ ವೆಚ್ಚವು ಶೇ 3.5ರಷ್ಟು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

PLI scheme
PLI scheme

By

Published : Mar 10, 2021, 6:30 PM IST

ನವದೆಹಲಿ: ದೇಶೀಯ ಉತ್ಪಾದನೆ ಉತ್ತೇಜಿಸಲು ಕೇಂದ್ರ ಸರ್ಕಾರ ವಿಶೇಷ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ (ಪಿಎಲ್ಐ) ಘೋಷಿಸಿದೆ.

ಇತ್ತೀಚಿನ ಅಧ್ಯಯನದ ವರದಿ ಪ್ರಕಾರ, ಪಿಎಲ್​ಐ ಘೋಷಣೆಯ ಅನುಷ್ಠಾನವು ಆದಾಯದಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಬಹುದು. ಮುಂದಿನ ಐದು ವರ್ಷಗಳಲ್ಲಿ ಸುಮಾರು 14 ವಲಯಗಳು ಹೆಚ್ಚುವರಿಯಾಗಿ 35-40 ಲಕ್ಷ ಕೋಟಿ ರೂ. ಆದಾಯ ತಂದುಕೊಡಬಹುದು.

ಸಾಂಕ್ರಾಮಿಕ ಸಂಕಷ್ಟದ ಸಮಯದಲ್ಲಿ ಚೀನಾ ತೊರೆದ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಕೇಂದ್ರವು ವಿಶೇಷ ಪಿಎಲ್ಐಗಳನ್ನು ಪ್ರಾರಂಭಿಸಿದೆ. ಸುಮಾರು 1.8 ಲಕ್ಷ ಕೋಟಿ ರೂ. ಮೌಲ್ಯದ ಸಬ್ಸಿಡಿ ಮತ್ತು ಪ್ರೋತ್ಸಾಹ ಧನ ಘೋಷಿಸಲಾಗಿದೆ.

ಇದನ್ನೂ ಓದಿ: ಏಪ್ರಿಲ್-ಜೂನ್‌ನಲ್ಲಿ ನೇಮಕಾತಿ ಚುರುಕಿನಿಂದ ಶುರು: ಈಗಲೇ ರೆಸ್ಯೂಮ್ ಸಿದ್ಧಪಡಿಸಿ!

ಪಿಎಲ್ಐ ಒದಗಿಸಿದ ಬೆಂಬಲದೊಂದಿಗೆ ಮುಂದಿನ 24-30 ತಿಂಗಳಲ್ಲಿ ಉತ್ಪಾದನೆ ಪ್ರಾರಂಭವಾಗಲಿದೆ. ಬಂಡವಾಳ ವೆಚ್ಚ ಸುಮಾರು 2-2.7 ಲಕ್ಷ ಕೋಟಿ ರೂ.ಯಷ್ಟಿರಲಿದೆ. ಐಟಿ ಹಾರ್ಡ್‌ವೇರ್, ಟೆಲಿಕಾಂ ಉಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಫೋನ್‌ಗಳಂತಹ ಕ್ಷೇತ್ರಗಳಲ್ಲಿ ದೇಶೀಯ ಉತ್ಪಾದನೆ ದುರ್ಬಲವಾಗಿತ್ತು. ಇತ್ತೀಚಿನ ಪಿಎಲ್‌ಐಗಳಿಂದಾಗಿ ಈ ಕ್ಷೇತ್ರಗಳಲ್ಲಿನ ಬಂಡವಾಳ ವೆಚ್ಚವು ಶೇ 3.5ರಷ್ಟು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಕೈಗಾರಿಕಾ ಹೂಡಿಕೆಯ ಬಂಡವಾಳ ವೆಚ್ಚದ ಪಾಲು 2022ರ ವೇಳೆಗೆ ಶೇ 45-50ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಶೇ 35ರಷ್ಟು ಕುಗ್ಗಿದೆ ಎಂದು ತಿಳಿದುಬಂದಿದೆ. ಬ್ಯಾಂಕ್ ಸಾಲಗಳ ಬೇಡಿಕೆಯೂ ಹೆಚ್ಚಾಗುತ್ತದೆ. ಈ ಬೆಳವಣಿಗೆಗಳು ಆರ್ಥಿಕತೆಗೆ ವರದಾನವಾಗಲಿದೆ ಎಂದು ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ.

ABOUT THE AUTHOR

...view details