ಹೈದರಾಬಾದ್: ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ. ಆದರೆ ಭೂಮಿಯ ಮೇಲೆ ಆ ಸಂಬಂಧವನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕಿದೆ.
ಈಗ ಜಗತ್ತಿನಾದ್ಯಂತ ಕೋವಿಡ್ -19 ಸಾಂಕ್ರಾಮಿಕ ರೋಗ ಹಬ್ಬಿದೆ. ಸಾಮಾಜಿಕ ಅಂತರ ಕಾಪಾಡಬೇಕಾದ ಮಾರ್ಗಸೂಚಿಯಿಂದ ಸೀಮಿತ ಆರ್ಥಿಕ ಚಟುವಟಿಕೆ ನಡೆಸಬೇಕಿದೆ. ವಿವಾಹ ಸಮಾರಂಭದ ಮೇಲಿನ ಪ್ರತಿಕೂಲ ಪರಿಣಾಮಗಳ ಹೊರತಾಗಿ ಸಂತೋಷದ ದಾಂಪತ್ಯ ಜೀವನಕ್ಕೆ ಸ್ವಲ್ಪ ಆರ್ಥಿಕ ವಿವೇಕ ಪ್ರದರ್ಶಿಸಬೇಕು. ಸ್ವಲ್ಪ ಆರ್ಥಿಕ ಯೋಜನೆ ಕೈಗೊಳ್ಳಬೇಕು.
ಬ್ಯಾಂಕ್ ಖಾತೆ ವಿವರಗಳಿಂದ ಹಿಡಿದು ಸ್ಮಾರ್ಟ್ ಹೂಡಿಕೆಗಳವರೆಗೆ, ಪಾಲುದಾರರ ಆರ್ಥಿಕ ಪರಿಸ್ಥಿತಿ ನಿರ್ಣಯಿಸುವುದರಿಂದ ಹಿಡಿದು ತುರ್ತು ನಿಧಿ ಸ್ಥಾಪಿಸುವವರೆಗೆ ಭವಿಷ್ಯದ ಯೋಜನೆ ಮುಖ್ಯವಾಗಿದೆ. ಇಲ್ಲಿ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಅಗತ್ಯವಾದ ಮಾರ್ಗದರ್ಶದ ಕೆಲವು ಸಲಹೆಗಳಿವೆ.
ಇಬ್ಬರು ಹಣಕಾಸಿನ ನಿರ್ಣಯ ತೆಗೆದುಕೊಳ್ಳಿ
ನಿಮ್ಮ ಸಂಗಾತಿಯ ಹಣಕಾಸಿನ ಹವ್ಯಾಸಗಳ ಬಗ್ಗೆ ತಿಳಿದು ಕೂಡಲೇ ಆಘಾತಕ್ಕೆ ಒಳಗಾಗಬೇಡಿ. ಹಣದ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ. ನಿಮ್ಮ ಸಂಗಾತಿ ಯಾವುದೇ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಮಿತಿಮೀರಿದ ಪಾವತಿ ಹೊಂದಿದ್ದರೆ ನಿಮ್ಮ ಈಗಿನ ಆದಾಯದಲ್ಲಿ ಹೇಗೆ ನಿಭಾಯಿಸಬೇಕು ಎಂಬುದನ್ನು ಇಬ್ಬರೂ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬನ್ನಿ.
ಸಂಗಾತಿ ಸಾಲದಲ್ಲಿ ಸಿಲುಕಿಕೊಂಡಿದ್ದರೆ, ಅವನು / ಅವಳು ಸಾಲವನ್ನು ಹೇಗೆ ಮರುಪಾವತಿಸಬಹುದು ಎಂಬುದರ ಯೋಜನೆ ಹಾಕಿಕೊಳ್ಳಿ. ಇದನ್ನು ಬಹಿರಂಗವಾಗಿ ಮುಕ್ತವಾಗಿ ಮಾತನಾಡಿ. ಸಾಲ ಮರುಪಾವತಿ ಮತ್ತು ಕ್ರೆಡಿಟ್ ಕಾರ್ಡ್ ಸಾಲ ಪಾವತಿ ನಿಮ್ಮ ಮೊದಲ ಆದ್ಯತೆಯಾಗಿರಬೇಕು.
ಬ್ಯಾಂಕ್ ಖಾತೆ ವಿವರಗಳು
ಮದುವೆ ಆದ ಬಳಿಕ ನೀವು ನಿಮ್ಮ ಹಣಕಾಸನ್ನು ನಿರ್ವಹಿಸುವ ಹಕ್ಕನ್ನು ಕಳೆದುಕೊಂಡಂತೆ ಅಲ್ಲ. ನೀವು ಹೊಂದಿರುವ ಹಣದ ಏಕೈಕ ಮಾಲೀಕತ್ವ ನಿಮ್ಮ ಸಂಗಾತಿಯೂ ಹೊಂದಿರುತ್ತಾರೆ. ದೈನಂದಿನ ಖರ್ಚುಗಳನ್ನು ನೋಡಿಕೊಳ್ಳಲು ಅಥವಾ ಆಸ್ತಿಯಲ್ಲಿ ಜಂಟಿ ಹೂಡಿಕೆ ಮಾಡಲು ನಿಮ್ಮ ಸಂಗಾತಿಯೊಂದಿಗೆ ಜಂಟಿ ಖಾತೆ ತೆರೆಯಬಹುದು.
ಜಂಟಿ ಖಾತೆಯನ್ನು ತೆರೆಯುವುದರಿಂದ ನೀವು ಪರಸ್ಪರರ ಹಣಕಾಸಿನ ಬಗ್ಗೆ ನಿಗಾ ಇಡಲು ಸಹಾಯವಾಗುತ್ತದೆ. ಮನೆಯ ಜವಾಬ್ದಾರಿ ಜಂಟಿಯಾಗಿ ಹಂಚಿಕೊಳ್ಳಲು ನಿಮ್ಮಿಬ್ಬರಿಗೂ ಸುಲಭವಾಗುತ್ತದೆ. ಭವಿಷ್ಯದ ಹಣಕಾಸಿನ ಘರ್ಷಣೆ ತಪ್ಪಿಸಲು ಮದುವೆಗೆ ಮುನ್ನ ಜಂಟಿ ಖಾತೆ ತೆರೆಯಲು ನಿರ್ಧರಿಸಿ.
ಪರಸ್ಪರರ ಆರ್ಥಿಕ ಗುರಿಗಳನ್ನು ಲೆಕ್ಕಹಾಕಿ
ನೀವು ಹಣ ಕೂಡಿಡುವ ಮೊದಲು, ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರರ ಆರ್ಥಿಕ ಗುರಿಗಳ ಬಗ್ಗೆ ತಿಳಿದಿರಬೇಕು. ಏಕೆಂದರೆ, ಇದು ನಿಮ್ಮ ಸಂಗಾತಿಯ ಹಣಕಾಸು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ನೀವು ಕೂಡ ಅತ್ತ ಕಡೆ ಗಮನಹರಿಸಬಹುದೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ.
ಉದಾ: ನಿಮ್ಮ ಸಂಗಾತಿ ಮುಂದಿನ 5 ವರ್ಷಗಳಲ್ಲಿ ಮನೆ ಖರೀದಿಸಲು ಯೋಜಿಸುತ್ತಿದ್ದರೆ. ನೀವು ಮುಂದಿನ 7 ವರ್ಷಗಳಲ್ಲಿ ಯುರೋಪ್ ಪ್ರವಾಸಕ್ಕೆ ಹೋಗಲು ಇಚ್ಛಿಸಿರುತ್ತೀರಾ. ನೀವಿಬ್ಬರೂ ಒಂದೇ ಹಾದಿಯಲ್ಲಿದ್ದೀರಾ ಎಂಬುದನ್ನು ಅರ್ಥೈಸಿಕೊಳ್ಳಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಹಣಕಾಸು ಯೋಜನೆ ನಿಯೋಜಿಸಬಹುದು.
ತುರ್ತು ನಿಧಿ ಸಂಗ್ರಹಿಸಿ
ನೀವು ಮದುವೆ ಬಗ್ಗೆ ಯೋಚಿಸುವ ಮೊದಲು ಮಾಡಬೇಕಾದ ಮತ್ತೊಂದು ಪೂರ್ವ ನಿಯೋಜಿತ ಕೆಲಸ ತುರ್ತು ನಿಧಿ ಹೊಂದುವುದು. ನಿಧಿಯ ಹಣವನ್ನು ನಿರುದ್ಯೋಗ, ಆಸ್ಪತ್ರೆಯ ಬಿಲ್, ಅಪಘಾತ ಮತ್ತು ಆರ್ಥಿಕ ತೊಂದರೆಯಲ್ಲಿ ಸಿಲುಕಿಸುವಂತಹ ಇತರ ಹಣಕಾಸಿನ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಬಳಸಬಹುದು. ನಿಮ್ಮ ತುರ್ತು ನಿಧಿಯಲ್ಲಿ ನಿಮ್ಮ ಉಳಿತಾಯದ ಕನಿಷ್ಠ 6 ತಿಂಗಳು ಹೊಂದಿರಬೇಕು.
ಹೆಚ್ಚಿನ ವಿವಾಹಿತ ದಂಪತಿಗೆ ಸಾಮಾನ್ಯ ಪ್ರಶ್ನೆ ಎಂದರೆ ಎಲ್ಲಿ ಹೂಡಿಕೆ ಮಾಡಬೇಕು. ಹೂಡಿಕೆಯ ಅಪಾಯ ಮತ್ತು ಗುರಿಗಳನ್ನು ಅವಲಂಬಿಸಿ. ಪಿಪಿಎಫ್, ಮ್ಯೂಚುವಲ್ ಫಂಡ್, ವಿಮೆ ಮತ್ತು ಇತರ ಹೂಡಿಕೆ ತಾಣಗಳಲ್ಲಿ ಹೂಡಿಕೆ ಮಾಡಬಹುದು. ಇಬ್ಬರೂ ಅಪಾಯದ ಮುನ್ನೋಟ ಗಮನದಲ್ಲಿ ಇಟ್ಟುಕೊಂಡು ಮುಂದಾಗಿ.
ಉದಾ: ಟಿವಿ ಅಥವಾ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವುದು ಅಲ್ಪಾವಧಿಯ ಗುರಿಯಾಗಬಹುದು. ಕಾರು ಅಥವಾ ಮನೆ ಖರೀದಿಸುವುದು ಅಥವಾ ಮಗು/ಮಗಳ ಮದುವೆ ದೀರ್ಘಾವಧಿಯ ಗುರಿಯಾಗಬಹುದು. ನಿಮ್ಮ ಗುರಿಯ ಅವಧಿಗೆ ಅನುಗುಣವಾಗಿ ಆದಾಯ, ಸವಾಲು ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಹೂಡಿಕೆ ಯೋಜನೆ ಇರಿಸಿಕೊಳ್ಳಿ. ರಿಟರ್ನ್ ಠೇವಣಿಗಳ ಸಮಯದಲ್ಲಿ ಸ್ಥಿರ ಠೇವಣಿಗಳು ಸುರಕ್ಷಿತೆಯ ಹೂಡಿಕೆ ಆಯ್ಕೆಯೆಂದು ಪರಿಗಣಿಸಬಹುದು. ನೀವು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು. ಇತರ ಹೂಡಿಕೆ ಆಯ್ಕೆಗಳಿಗೆ ಹೋಲಿಸಿದರೆ ದೀರ್ಘಾವಧಿಯಲ್ಲಿ ನಿಮಗೆ ಉತ್ತಮ ಲಾಭ ಬರುತ್ತದೆ.
ಹಣಕಾಸಿನ ಖರ್ಚು-ವೆಚ್ಚ ಯಾರು ನಿಭಾಯಿಸುತ್ತಾರೆ ಎಂಬುದನ್ನು ನಿರ್ಧರಿಸಿ. ನೀವಿಬ್ಬರೂ ಗಳಿಸುತ್ತಿದ್ದರೆ ಯಾವ ಖರ್ಚುಗಳನ್ನು ಯಾರು ನಿರ್ವಹಿಸುತ್ತಾರೆ ಎಂಬುದನ್ನು ತೀರ್ಮಾನಿಸಿ. ಉದಾ: ನೀವು ಮನೆಯ ವೆಚ್ಚಗಳನ್ನು ನಿರ್ವಹಿಸಿದರೆ ನಿಮ್ಮ ಸಂಗಾತಿ ಸಾಲ ಇಎಂಐ ಪಾವತಿಗಳನ್ನು ನಿಭಾಯಿಸಬಹುದು.
ಆರೋಗ್ಯ ವಿಮೆ ಖರೀದಿಸಿ. ನೀವು ಮತ್ತು ನಿಮ್ಮ ಸಂಗಾತಿ ಕಂಪನಿ ಕಲ್ಪಿಸಿದ ಆರೋಗ್ಯ ವಿಮೆ ಹೊಂದಿದ್ದರೆ ನೀವು ನಿಮ್ಮದೇ ಆದ ಪ್ರತ್ಯೇಕ ಆರೋಗ್ಯ ವಿಮಾ ಪಾಲಿಸಿ ಖರೀದಿಸಬೇಕು. ನೀವು ಅಥವಾ ಸಂಗಾತಿ ಕೆಲಸ ತೊರೆದರೆ, ಆರೋಗ್ಯ ರಕ್ಷಣೆ ಸ್ಥಗಿತವಾಗುತ್ತದೆ. ಹೆಚ್ಚುತ್ತಿರುವ ಆರೋಗ್ಯ ವೆಚ್ಚ ಮತ್ತು ಹಣದುಬ್ಬರದ ಕಾರಣ ಆರೋಗ್ಯ ವಿಮಾ ಪಾಲಿಸಿ ಖರೀದಿಸಬೇಕು. ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮಾ ಯೋಜನೆ ಮಾಡಿಸುವುದರಿಂದ ನಿಮಗೆ, ನಿಮ್ಮ ಪೋಷಕರು, ಸಂಗಾತಿ ಮತ್ತು ನಿಮ್ಮ ಮಕ್ಕಳಿಗೆ ಕವರೇಜ್ ಸಿಗುತ್ತದೆ. ಮೇಲಿನ ಸಲಹೆಗಳು ನೀವು ಮತ್ತು ನಿಮ್ಮ ಸಂಗಾತಿಯು ಹಣಕಾಸಿನ ಸಮಸ್ಯೆಗಳಿಂದಾಗಿ ಯಾವುದೇ ವೈವಾಹಿಕ ವಿವಾದಕ್ಕೆ ಸಿಲುಕುವುದಿಲ್ಲ ಎಂಬುದನ್ನು ಖಚಿತಪಡಿಸುತ್ತವೆ.
- ವೈರಲ್ ಭಟ್ (ಹಣಕಾಸು ತಜ್ಞರ ವೈಯಕ್ತಿಕ ಅನಿಸಿಕೆಗಳು)
ಮೇಲೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಕೇವಲ ಲೇಖಕರದ್ದೇ ಹೊರತು ಈಟಿವಿ ಭಾರತ ಅಥವಾ ಅದರ ನಿರ್ವಹಣೆದಾರರು ಜವಾಬ್ದಾರರಲ್ಲ. ವೈಯಕ್ತಿಕ ಹಣಕಾಸುಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ನೀವು ಹೊಂದಿದ್ದರೆ, ತಜ್ಞರಿಂದ ಉತ್ತರಿಸಲು ನಾವು ಪ್ರಯತ್ನಿಸುತ್ತೇವೆ. ಸಂಪೂರ್ಣ ವಿವರಗಳೊಂದಿಗೆ businessdesk@etvbharat.comಗೆ ಸಂಪರ್ಕಿಸಿ.