ಕರ್ನಾಟಕ

karnataka

ETV Bharat / business

ಆ್ಯಕ್ಸಿಜನ್ ವಾರ್.. ಸಿಎಂ ಠಾಕ್ರೆ ನಾಚಿಕೆಯಿಲ್ಲದ ರಾಜಕಾರಣ ಬಿಟ್ಟು ತನ್ನ ಜವಾಬ್ದಾರಿ ನಿರ್ವಹಿಸಲಿ - ಗೋಯಲ್ - ಮೋದಿಗೆ ಠಾಕ್ರೆ ಪತ್ರ

ವೈದ್ಯಕೀಯ-ದರ್ಜೆಯ ಆಮ್ಲಜನಕವನ್ನು ನಿರ್ಣಾಯಕ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಮತ್ತು ಉಸಿರಾಟ ಸಂಬಂಧಿಕ ಕಾಯಿಲೆಗಳ ಇತರ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಗೋಯಲ್ ಸರಣಿ ಟ್ವೀಟ್ ಮಾಡಿ, ಮಹಾರಾಷ್ಟ್ರ ಈವರೆಗೆ ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಆಮ್ಲಜನಕ ಪಡೆದಿದೆ..

Piyush Goyal
Piyush Goyal

By

Published : Apr 17, 2021, 7:12 PM IST

ನವದೆಹಲಿ :ರಾಜ್ಯದಲ್ಲಿ ಆಮ್ಲಜನಕ ಲಭ್ಯತೆಯ ವಿಷಯವಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರವು ಭಾರತದಲ್ಲಿ ಈವರೆಗೆ ಅತಿಹೆಚ್ಚು ಆ್ಯಕ್ಸಿಜನ್​ ಪಡೆದಿದೆ. ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅವರ ಅಗತ್ಯಗಳನ್ನು ಪೂರೈಸುತ್ತಿದೆ ಎಂದರು.

ಮಹಾರಾಷ್ಟ್ರವು ಅಸಮರ್ಥ ಮತ್ತು ಭ್ರಷ್ಟ ಸರ್ಕಾರದಿಂದ ಬಳಲುತ್ತಿದೆ. ಕೇಂದ್ರವು ಜನರಿಗಾಗಿ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರದ ಜನ 'ಮಾಜಾ ಕುಟುಂಬ್, ಮಾಝಿ ಜವಾಬದಾರಿ'(ನನ್ನ ಮನೆ ನನ್ನ ಜವಾಬ್ದಾರಿ)ಯಂತೆ ಕರ್ತವ್ಯದಿಂದ ಅನುಸರಿಸುತ್ತಿದ್ದಾರೆ. ಮುಖ್ಯಮಂತ್ರಿ ಕೂಡ ತಮ್ಮ ಕರ್ತವ್ಯಗಳನ್ನು ಅನುಸರಿಸುವ ಸಮಯ 'ಮಾಜಾ ರಾಜ್ಯ, ಮಾಜಿ ಜವಾಬದಾರಿ' ಇದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಠಾಕ್ರೆ, ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕದ ಅವಶ್ಯಕತೆ ಇದೆ. ಏಪ್ರಿಲ್ ಅಂತ್ಯದ ವೇಳೆಗೆ ದಿನಕ್ಕೆ 2,000 ಮೆಟ್ರಿಕ್ ಟನ್ ತಲುಪುವ ನಿರೀಕ್ಷೆಯಿದೆ ಎಂದಿದ್ದರು. ನೆರೆಯ ರಾಜ್ಯಗಳಿಂದ ವೈದ್ಯಕೀಯ ಆಮ್ಲಜನಕದ ಸಾಗಣೆಯಲ್ಲಿನ ವ್ಯವಸ್ಥಾಪನಾ ಅಡೆತಡೆಗಳನ್ನು ಉಲ್ಲೇಖಿಸಿ, ದೇಶದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿನ ಉಕ್ಕಿನ ಸ್ಥಾವರಗಳಿಂದ ಆಮ್ಲಜನಕವನ್ನು ವಿಮಾನಯಾನ ಮೂಲಕ ತರಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅನುಮತಿ ನೀಡುವಂತೆ ಕೋರಿದ್ದರು.

ವೈದ್ಯಕೀಯ-ದರ್ಜೆಯ ಆಮ್ಲಜನಕವನ್ನು ನಿರ್ಣಾಯಕ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಮತ್ತು ಉಸಿರಾಟ ಸಂಬಂಧಿಕ ಕಾಯಿಲೆಗಳ ಇತರ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಗೋಯಲ್ ಸರಣಿ ಟ್ವೀಟ್ ಮಾಡಿ, ಮಹಾರಾಷ್ಟ್ರ ಈವರೆಗೆ ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಆಮ್ಲಜನಕ ಪಡೆದಿದೆ.

ಅವರ ಅಗತ್ಯಗಳನ್ನು ನಿರ್ಣಯಿಸಲು ಮತ್ತು ಅವರಿಗೆ ಸಾಧ್ಯವಾದಷ್ಟು ಉತ್ತಮ ರೀತಿ ಸಹಾಯ ಮಾಡಲು ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಪ್ರತಿದಿನ ಸಂಪರ್ಕದಲ್ಲಿದೆ ಎಂದರು. ಈ ಬಿಕ್ಕಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಿನರ್ಜಿಯೊಂದಿಗೆ ಕೆಲಸ ಮಾಡಬೇಕೆಂದು ಪ್ರಧಾನಿ ತಮ್ಮ ಪರಿಶೀಲನೆ ಸಭೆಯಲ್ಲಿ ತಿಳಿಸಿದ್ದಾರೆ ಎಂದರು. ಉದ್ಧವ್ ಠಾಕ್ರೆ ಮಾಡುತ್ತಿರುವ ಸಣ್ಣತನದ ರಾಜಕಾರಣ ನೋಡಿ ಮೋದಿ ಆಘಾತಕ್ಕೊಳಗಾಗಿದ್ದಾರೆ ಮತ್ತು ದುಃಖಿತರಾಗಿದ್ದಾರೆ. ಅವರು ತಮ್ಮ ನಿತ್ಯದ ನಾಚಿಕೆಯಿಲ್ಲದ ರಾಜಕಾರಣ ನಿಲ್ಲಿಸಿ ತಮ್ಮ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ.

ಅವರ ಆಮ್ಲಜನಕದ ಕುತಂತ್ರಗಳನ್ನು ನೋಡಿ ದುಃಖಿತವಾಗಿದೆ. ಎಲ್ಲಾ ಪಾಲುದಾರರೊಂದಿಗೆ ಭಾರತದಲ್ಲಿ ಗರಿಷ್ಠ ಆಮ್ಲಜನಕದ ಉತ್ಪಾದನೆ ಖಾತ್ರಿಪಡಿಸುತ್ತಿದೆ. ನಾವು ಪ್ರಸ್ತುತ 110 ಪ್ರತಿಶತದಷ್ಟು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದೇವೆ. ಲಭ್ಯವಿರುವ ಎಲ್ಲಾ ಆಮ್ಲಜನಕವನ್ನು ಕೈಗಾರಿಕಾ ಬಳಕೆಯಿಂದ ವೈದ್ಯಕೀಯ ಬಳಕೆಗೆ ತಿರುಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ABOUT THE AUTHOR

...view details