ಕರ್ನಾಟಕ

karnataka

ETV Bharat / business

250 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ತಲುಪಿದ ಫೋನ್​​ಪೇ - ಇ-ಕಾಮರ್ಸ್ ಕಂಪನಿಗಳು

ಇ-ಕಾಮರ್ಸ್ ಕಂಪನಿ ಫೋನ್​ಪೇ ಈಗ 250 ಮಿಲಿಯನ್​ ನೋಂದಾಯಿತ ಬಳಕೆದಾರರನ್ನು ಹೊಂದುವ ಮೂಲಕ ದಾಖಲೆ ನಿರ್ಮಿಸಿದೆ.

PhonePe
ಫೋನ್​​ಪೇ

By

Published : Nov 2, 2020, 3:54 PM IST

Updated : Nov 2, 2020, 4:35 PM IST

ನವದೆಹಲಿ: ಫ್ಲಿಪ್​ಕಾರ್ಟ್​ ಮಾಲೀಕತ್ವದ ಇ ಕಾಮರ್ಸ್​​​ ಸಂಸ್ಥೆ ಫೋನ್​​ಪೇ ಈಗ ಒಟ್ಟು 250 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿ ದಾಖಲೆ ನಿರ್ಮಿಸಿದೆ ಎಂದು ಅಧಿಕೃತ ಹೇಳಿಕೆ ನೀಡಿದೆ.

ಸೆಪ್ಟೆಂಬರ್​​ನಲ್ಲಿ 750 ಮಿಲಿಯನ್ ವಹಿವಾಟುಗಳನ್ನು ನಡೆಸಲಾಗಿದ್ದು, ಅಕ್ಟೋಬರ್​ನಲ್ಲಿ 100 ಮಿಲಿಯನ್ ಸಕ್ರಿಯ ಬಳಕೆದಾರರರೊಂದಿಗೆ 925 ಮಿಲಿಯನ್ ವಹಿವಾಟುಗಳನ್ನು ನಡೆಸಲಾಗಿದ್ದು, ಇದು ದಾಖಲೆ ಮಟ್ಟದ್ದಾಗಿದೆ ಎಂದು ಫೋನ್​ಪೇ ಹೇಳಿದೆ.

ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮೀರ್ ನಿಗಮ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಡಿಸೆಂಬರ್ 2022ರ ವೇಳೆಗೆ 500 ಮಿಲಿಯನ್ ಮಂದಿ ನೋಂದಾಯಿತ ಬಳಕೆದಾರರನ್ನು ಹೊಂದುವುದು ತಮ್ಮ ಗುರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದರ ಜೊತೆಗೆ ''ಕರ್ತೆ ಜಾ, ಬಡ್ತೇ ಜಾ'' ಎಂಬ ಘೋಷಣೆಯಡಿಯಲ್ಲಿ ನಾವು ಹಲವಾರು ಹೊಸ ಮತ್ತು ಆವಿಷ್ಕಾರಕ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತೇವೆ. ಪ್ರತಿ ಹಳ್ಳಿ ಹಾಗೂ ಪಟ್ಟಣದಲ್ಲಿ ಪ್ರತಿಯೊಬ್ಬರಿಗೂ ಫೋನ್​ಪೆ ತಲುಪುವ ಹಾಗೆ ನೋಡಿಕೊಳ್ಳುತ್ತೇವೆ ಎಂದು ಸಮೀರ್ ನಿಗಮ್ ಹೇಳಿದ್ದಾರೆ.

ಇನ್ನು ಫೋನ್​ಪೆ ಆನ್​ಲೈನ್ ಮೂಲಕ ಹಣ ವರ್ಗಾವಣೆ ಆ್ಯಪ್ ಆಧಾರಿತ ಸೇವೆಯಾಗಿದ್ದು, ಪೇಟಿಯಂ, ಮೊಬಿಕ್ವಿಕ್, ಗೂಗಲ್ ಪೇ ಮುಂತಾದ ಸ್ಪರ್ಧಿಗಳನ್ನು ಹೊಂದಿದೆ. ಹಣ ವರ್ಗಾವಣೆಯ ಜೊತೆಗೆ ಚಿನ್ನವನ್ನು ಕೊಳ್ಳುವ ಅವಕಾಶವನ್ನೂ ಫೋನ್​ಪೆ ನೀಡುತ್ತಿದೆ.

ಈಗ ಸದ್ಯಕ್ಕೆ ದೇಶದ 500 ನಗರಗಳಲ್ಲಿರುವ ಫೋನ್​ಪೆ ಸ್ವಿಚ್​ ಎಂಬ ಫ್ಲಾಟ್​ಫಾರ್ಮ್​ ಅನ್ನು ಬಿಡುಗಡೆಗೊಳಿಸಿದ್ದು,ಈ ಮೂಲಕ ಹಲವು ಆಫರ್​ಗಳನ್ನು ನೀಡುತ್ತಿದೆ.

Last Updated : Nov 2, 2020, 4:35 PM IST

ABOUT THE AUTHOR

...view details