ಕರ್ನಾಟಕ

karnataka

By

Published : Nov 21, 2019, 4:54 PM IST

ETV Bharat / business

ಜಿಎಸ್​ಟಿಆರ್​ 3ಬಿ ರಿಟರ್ನ್ಸ್​ ದಾಖಲೆ ಪ್ರಮಾಣದಲ್ಲಿ ಏರಿಕೆ..!

ತಿಂಗಳಿಂದ ತಿಂಗಳಿಗೆ ಸಲ್ಲಿಕೆದಾರರ ಪ್ರಮಾಣದಲ್ಲಿ ಶೇ 50ರಷ್ಟು ಏರಿಕೆ ಕಂಡುಬಂದಿದ್ದು, ನವೆಂಬರ್​ 20ರ ಒಂದೇ ದಿನದಲ್ಲಿ ಒಟ್ಟು 18.27 ಲಕ್ಷ ಜಿಎಸ್​​ಟಿಆರ್​​ 3ಬಿ ರಿಟರ್ನ್ಸ್​ ಸಲ್ಲಿಕೆಯಾಗಿವೆ. ಕಳೆದ ತಿಂಗಳ ಇದೇ ಅವಧಿಯಲ್ಲಿ 12.2 ಲಕ್ಷ ರಿಟರ್ನ್ಸ್​ ಬಂದಿದ್ದವು. ಅಕ್ಟೋಬರ್​ ತಿಂಗಳಲ್ಲಿ 64.83 ಲಕ್ಷ ಜಿಎಸ್​ಟಿಆರ್ 3ಬಿ ಸಲ್ಲಿಕೆಯಾಗಿದ್ದರೇ ಅದರ ಹಿಂದಿನ ಮಾಸಿಕದಲ್ಲಿ 59.9 ಲಕ್ಷ ಪ್ರಮಾಣದಷ್ಟು ಇದ್ದವು.

ಜಿಎಸ್​ಟಿಆರ್​

ನವದೆಹಲಿ:ಅಕ್ಟೋಬರ್​ ತಿಂಗಳ ಜಿಎಸ್​​ಟಿಆರ್​ 3ಬಿ ರಿರ್ಟರ್ನ್ಸ್​ ಸಲ್ಲಿಕೆದಾರರ ಪ್ರಮಾಣ ಬುಧವಾರದಂದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ತಿಂಗಳಿಂದ ತಿಂಗಳಿಗೆ ಸಲ್ಲಿಕೆದಾರರ ಪ್ರಮಾಣದಲ್ಲಿ ಶೇ 50ರಷ್ಟು ಏರಿಕೆ ಕಂಡುಬಂದಿದ್ದು, ಒಂದೇ ದಿನದಲ್ಲಿ ಒಟ್ಟು 18.27 ಲಕ್ಷ ಜಿಎಸ್​​ಟಿಆರ್​​ 3ಬಿ ರಿಟರ್ನ್ಸ್​ ಸಲ್ಲಿಕೆಯಾಗಿವೆ. ಕಳೆದ ತಿಂಗಳ ಇದೇ ಅವಧಿಯಲ್ಲಿ 12.2 ಲಕ್ಷ ರಿಟರ್ನ್ಸ್​ ಬಂದಿದ್ದವು.

ಅಕ್ಟೋಬರ್​ ತಿಂಗಳಲ್ಲಿ 64.83 ಲಕ್ಷ ಜಿಎಸ್​ಟಿಆರ್ 3ಬಿ ಸಲ್ಲಿಕೆಯಾಗಿದ್ದರೇ ಅದರ ಹಿಂದಿನ ಮಾಸಿಕದಲ್ಲಿ 59.9 ಲಕ್ಷ ಪ್ರಮಾಣದಷ್ಟು ರಿಟರ್ನ್ಸ್​ ಇದ್ದವು.

ಕಳೆದ ಕೆಲವು ದಿನಗಳ ಹಿಂದೆ ರಿಟರ್ನ್ಸ್ ಫೈಲಿಂಗ್ಸ್​ನ ಜಿಎಸ್​ಟಿಎನ್​ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬರುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೂರು ಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ಜಿಎಸ್​ಟಿಎನ್​, 'ಅರ್ಜಿ ದಟ್ಟಣೆ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡಬರುವುದು ಸಾಮಾನ್ಯ ಎಂದಿತ್ತು'.

ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ತನ್ನ ದತ್ತಾಂಶಗಳ ಮೂಲಕ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಎಸ್​​ಟಿಎನ್​ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ದಾಖಲಾಗಿರುವ ರಿಟರ್ನ್ಸ್​ಗಳೇ ಸಾಕ್ಷಿ ಎಂದು ಹೇಳಿದೆ.

ABOUT THE AUTHOR

...view details