ಕರ್ನಾಟಕ

karnataka

ETV Bharat / business

ಫಿಜರ್ ಲಸಿಕೆ ಸ್ಟೋರೇಜ್​ ಸಮಸ್ಯೆ: ಬೇರೆ ಆಯ್ಕೆಗಾಗಿ ಭಾರತ ಕಾಯಲೇಬೇಕು - ಕಿರಣ್ ಮಜುಂದಾರ್ - ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ಪ್ರಯೋಗ

ಮೂರನೇ ಹಂತದ ಪ್ರಯೋಗದಲ್ಲಿ ಶೇ 90ರಷ್ಟು ಯಶಸ್ಸು ಸಾಧಿಸಿರುವ ಫಿಜರ್ ಅಭಿವೃದ್ಧಿಪಡಿಸಿದ ಕೊರಾನಾ ವೈರಸ್​ ಲಸಿಕೆಯ ಸ್ಟೋರೇಜ್​​ ಹಾಗೂ ವಿತರಣೆ ದುಬಾರಿ ಆಗಲಿದೆ. ಈ ಲಸಿಕೆ ಅನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕಿದೆ. ಫಿಜರ್ ಲಸಿಕೆಯ ವಿತರಣೆ ಮತ್ತು ಸಂಗ್ರಹಿಸಲು ಭಾರತ ಎದುರಿಸಬೇಕಾದ ಸವಾಲುಗಳ ಬಗ್ಗೆ ಮಜುಂದಾರ್ ಶಾ ಪ್ರತಿಕ್ರಿಯಿಸಿದ್ದಾರೆ.

Mazumdar Shaw
ಕಿರಣ್ ಮಜುಂದಾರ್

By

Published : Nov 12, 2020, 4:51 PM IST

ನವದೆಹಲಿ:ಅಸ್ಟ್ರಾಜೆನೆಕಾ, ಜಾನ್ಸನ್ ಆ್ಯಂಡ್​ ಜಾನ್ಸನ್ ಮತ್ತು ಭಾರತ್ ಬಯೋಟೆಕ್‌ನಿಂದ ಬರಲಿರುವ ಸಾಂಪ್ರದಾಯಿಕ ಕೊರೊನಾ ವೈರಸ್ ಲಸಿಕೆಗಳಿಗಾಗಿ ಭಾರತ ಕಾಯುವುದು ಉತ್ತಮ ಎಂದು ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.

ಫಿಜರ್‌ನ ಕೋವಿಡ್​-19 ಲಸಿಕೆಯ ವಿತರಣೆ ಮತ್ತು ಸಂಗ್ರಹಿಸಲು ಭಾರತ ಎದುರಿಸಬೇಕಾದ ಸವಾಲುಗಳ ಬಗ್ಗೆ ಮಜುಂದಾರ್ ಶಾ ಪ್ರತಿಕ್ರಿಯಿಸಿದ್ದಾರೆ.

ಮೂರನೇ ಹಂತದ ಪ್ರಯೋಗದಲ್ಲಿ ಶೇ 90ರಷ್ಟು ಯಶಸ್ವಿ ಆಗಿರುವ ಫಿಜರ್ ಅಭಿವೃದ್ಧಿಪಡಿಸಿದ ಕೊರಾನಾ ವೈರಸ್​ ಲಸಿಕೆಯ ಸ್ಟೋರೇಜ್​​ ಹಾಗೂ ವಿತರಣೆ ದುಬಾರಿ ಆಗಲಿದೆ. ಈ ಲಸಿಕೆ ಅನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕಿದೆ. ಅಂತಹ ಲಾಜಿಸ್ಟಿಕ್ಸ್ ಸ್ಟೋರೇಜ್​ ಭಾರತದಲ್ಲಿ ವ್ಯವಸ್ಥೆ ಮಾಡಲು ಕಷ್ಟವಾಗಬಹುದು ಎಂದು ಏಮ್ಸ್​ ದೆಹಲಿ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದರು.

ಕಿರಣ್ ಮಜುಂದಾರ್ ಶಾ ಟ್ವಿಟ್​

ಈ ಬಳಿಕ ಟ್ವೀಟ್ ಮಾಡಿದ ಶಾ, ಅಮೆರಿಕದ ತಜ್ಞರು ಇದನ್ನು ಭೀಕರ ಸವಾಲು ಎಂದು ವಿವರಿಸಿದ್ದಾರೆ. ಭಾರತವು ದೇಶದಲ್ಲಿ ಇಂತಹ ಲಸಿಕೆಗಾಗಿ ಹೇಗೆ ಆಲೋಚಿಸಬಹುದು? ಎಝ್ಯಡ್, ಜೆ&ಜೆ, ಭಾರತ್ ಬಯೋಟೆಕ್​​ ಇತ್ಯಾದಿಗಳಿಂದ ಬರುವ ಹೆಚ್ಚು ಸಾಂಪ್ರದಾಯಿಕ ಲಸಿಕೆಗಳಿಗಾಗಿ ನಾವು ಕಾಯಬೇಕಾಗಿದೆ ಎಂದು ಬರೆದು ಕೊಂಡಿದ್ದಾರೆ.

ABOUT THE AUTHOR

...view details