ನವದೆಹಲಿ:ಸತತ ಎಂಟು ದಿನಗಳಿಂದ ಇಂಧನ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗುತ್ತಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 62 ಪೈಸೆ ಹಾಗೂ ಡೀಸೆಲ್ಗೆ 64 ಪೈಸೆ ಹೆಚ್ಚಳವಾಗಿದೆ.
ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ಗೆ ಇದು ಅನ್ವಯವಾಗಲಿದೆ. ಆದರೆ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ ಪ್ರಮಾಣದ ಮೇಲೆ ಆಯಾ ರಾಜ್ಯಗಳಲ್ಲಿ ದರ ನಿಗದಿಯಾಗುತ್ತದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 75.78 ರೂ. ಮತ್ತು 74.03 ರೂ. ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ಗೆ 78.23 ರೂ ಹಾಗೂ ಡೀಸೆಲ್ಗೆ 70.39 ರೂಪಾಯಿ ಇದೆ.
ಜೂನ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 5 ರೂ. ವರೆಗೂ ಏರಿಕೆಯಾಗಬಹುದು ಎಂದು ಈ ಹಿಂದೆ ಹೇಳಲಾಗಿತ್ತು. 82 ದಿನಗಳ ಲಾಕ್ಡೌನ್ ಬಳಿಕ ಜೂನ್ 7 ರಿಂದ ತೈಲ ಕಂಪನಿಗಳು ಇಂಧನ ಬೆಲೆ ಹೆಚ್ಚಿಸಿದ್ದವು. ಇದೀಗ ಎಂಟು ದಿನಗಳಲ್ಲೇ ಲೀಟರ್ ಪೆಟ್ರೋಲ್ ಮೇಲೆ 4.52 ರೂ ಹಾಗೂ ಡೀಸೆಲ್ಗೆ 4.64 ರೂ. ಏರಿಕೆಯಾದಂತಾಗಿದೆ.