ಕರ್ನಾಟಕ

karnataka

ಗ್ರಾಹಕರಿಗೆ ಶಾಕ್​ ಮೇಲೆ ಶಾಕ್​: 3 ದಿನದಿಂದ ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ಬೆಲೆ

82 ದಿನಗಳ ಲಾಕ್​​ಡೌನ್ ವಿರಾಮದ ಬಳಿಕ ಭಾನುವಾರದಿಂದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಏರಿಕೆ ಮಾಡುತ್ತ ಬಂದಿದ್ದು, ಇಂದು ಲೀಟರ್​ ಪೆಟ್ರೋಲ್​ಗೆ 54 ಪೈಸೆ ಹಾಗೂ ಡೀಸೆಲ್​ಗೆ 58 ಪೈಸೆ ಹೆಚ್ಚಳವಾಗಿದೆ.

By

Published : Jun 9, 2020, 10:30 AM IST

Published : Jun 9, 2020, 10:30 AM IST

fuel prices
ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಭಾನುವಾರ, ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಿಸಿದ್ದ ತೈಲ ಕಂಪನಿಗಳು ಇಂದೂ ಕೂಡ ಗ್ರಾಹಕರಿಗೆ ಶಾಕ್ ನೀಡಿದೆ.

ಇಂದು ಲೀಟರ್​ ಪೆಟ್ರೋಲ್​ಗೆ 54 ಪೈಸೆ ಹಾಗೂ ಡೀಸೆಲ್​ಗೆ 58 ಪೈಸೆ ಹೆಚ್ಚಳವಾಗಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಪರಿಣಾಮ, 82 ದಿನಗಳ ಲಾಕ್​​ಡೌನ್ ವಿರಾಮದ ಬಳಿಕ ಭಾನುವಾರದಿಂದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಏರಿಕೆ ಮಾಡುತ್ತಾ ಬಂದಿವೆ.

ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 71.86 ರೂ. ಮತ್ತು 69.99 ರೂ, ಸೋಮವಾರ 72.46 ರೂ ಮತ್ತು 70.59 ರೂ ಇತ್ತು. ಇಂದು ಪೆಟ್ರೋಲ್ ದರ 73 ರೂ.ಗೆ ಹಾಗೂ ಡೀಸೆಲ್ ದರ 71.17 ರೂಪಾಯಿಗೆ ಏರಿಕೆಯಾಗಿದೆ. ದೆಹಲಿಯೊಂದಿಗೆ ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್​ಗೂ ಇದು ಅನ್ವಯವಾಗಲಿದೆ.

ಬೆಂಗಳೂರಲ್ಲಿ ಲೀಟರ್​ ಪೆಟ್ರೋಲ್​​​​​ಗೆ ಇಂದು 75.35 ರೂ. ದರವಿದೆ.ಇನ್ನು ಲೀಟರ್​ ಡೀಸೆಲ್​​ಗೆ67.66ರೂ. ನಿಗದಿಯಾಗಿದೆ.

ABOUT THE AUTHOR

...view details