ಕರ್ನಾಟಕ

karnataka

ETV Bharat / business

ಎರಡು ದಿನಗಳ ವಿರಾಮದ ನಂತರ ಮತ್ತೆ ತೈಲ ಬೆಲೆ ಹೆಚ್ಚಳ: ದೇಶದ ಮೆಟ್ರೋ ನಗರಗಳಲ್ಲಿ ಹೀಗಿದೆ ದರ.. - ಎರಡು ವಾರಗಳಲ್ಲಿ ಪೆಟ್ರೋಲ್ 14 ನೇ ಬಾರಿ ಏರಿಕೆ ಕಂಡ ಪೆಟ್ರೋಲ್​ ಬೆಲೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶುಕ್ರವಾರ ದೇಶಾದ್ಯಂತ ಮತ್ತೆ ಏರಿಕೆ ಕಂಡಿದೆ. ಎರಡು ವಾರಗಳಲ್ಲಿ ಪೆಟ್ರೋಲ್ ಬೆಲೆಯನ್ನು 14 ನೇ ಬಾರಿ ಏರಿಸಲಾಗಿದ್ದು, ಡೀಸೆಲ್ ದರ ಮೂರು ವಾರಗಳಲ್ಲಿ 17 ಪಟ್ಟು ಹೆಚ್ಚಾಗಿದೆ.

ಎರಡು ವಾರಗಳಲ್ಲಿ ಪೆಟ್ರೋಲ್ 14 ನೇ ಬಾರಿ ಏರಿಕೆ ಕಂಡ ಪೆಟ್ರೋಲ್​ ಬೆಲೆ
ಎರಡು ವಾರಗಳಲ್ಲಿ ಪೆಟ್ರೋಲ್ 14 ನೇ ಬಾರಿ ಏರಿಕೆ ಕಂಡ ಪೆಟ್ರೋಲ್​ ಬೆಲೆ

By

Published : Oct 15, 2021, 9:06 AM IST

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶುಕ್ರವಾರ ದೇಶಾದ್ಯಂತ ಮತ್ತೆ ಹೆಚ್ಚಾಗಿದೆ. ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹0.35 ಪೈಸೆ ಏರಿಕೆಯಾಗಿದ್ದು ₹105.14 ತಲುಪಿದೆ. ಡೀಸೆಲ್ ಬೆಲೆ ₹93.87 ಆಗಿದೆ.

ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹0.34 ಏರಿಕೆಯಾಗಿದ್ದು ₹111.09 ಗೆ ತಲುಪಿದೆ. ಡೀಸೆಲ್ ದರವನ್ನು ₹0.37 ಏರಿಕೆ ಕಂಡು, ₹101.78 ಕ್ಕೆ ತಲುಪಿದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ₹105.76 ಮತ್ತು ₹ 96.98 ಆಗಿದೆ. ಚೆನ್ನೈನಲ್ಲಿ ₹102.40 ಮತ್ತು ₹98.26 ಗೆ ತಲುಪಿದೆ.

ಬೆಂಗಳೂರಿನಲ್ಲಿ ತೈಲ ಬೆಲೆ ಹೀಗಿದೆ..

ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹108.80 ಮತ್ತು ಡೀಸೆಲ್ ₹99.63 ಮತ್ತು ಹೈದರಾಬಾದ್‌ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹109.37 ಮತ್ತು ಡೀಸೆಲ್ ಬೆಲೆ ₹102.42 ತಲುಪಿದೆ.

ದೇಶದ ಬಹುತೇಕ ಭಾಗಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ಲೀಟರ್​ಗೆ ₹100 ಗಿಂತ ಹೆಚ್ಚಿದ್ದರೆ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಬಿಹಾರ, ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಡೀಸೆಲ್ ದರ ನೂರರ ಗಡಿ ದಾಟಿದೆ.

ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಅಂತಾರಾಷ್ಟ್ರೀಯ ಬೆಂಚ್‌ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 84 ಡಾಲರ್‌ ಏರಿಕೆಯಾಗಿದೆ. ಭಾರತವು ತೈಲದ ನಿವ್ವಳ ಆಮದುದಾರನಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತರಾಷ್ಟ್ರೀಯ ದರಗಳಿಗೆ ಸಮನಾಗಿರುತ್ತವೆ.

ಇದನ್ನೂ ಓದಿ:ಸೆಪ್ಟೆಂಬರ್‌ನಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ.10.66ಕ್ಕೆ ಇಳಿಕೆ: 6 ತಿಂಗಳಲ್ಲೇ ಕನಿಷ್ಠ

ABOUT THE AUTHOR

...view details