ಕರ್ನಾಟಕ

karnataka

ETV Bharat / business

ವಾಹನ ಸವಾರರ ಜೇಬಿಗೆ ಕತ್ತರಿ: ಪೆಟ್ರೋಲ್‌ ಲೀ. 35 ಪೈಸೆ, ಡೀಸೆಲ್‌ ಲೀ. 28 ಪೈಸೆ ಏರಿಕೆ - ಪೆಟ್ರೋಲ್‌ ಲೀ. 35 ಪೈಸೆ ಏರಿಕೆ

ದೇಶದಲ್ಲಿ ಇಂದು ಕೂಡ ಪೆಟ್ರೋಲ್‌ ಪ್ರತಿ ಲೀಟರ್‌ಗೆ 35 ಪೈಸೆ ಹಾಗೂ ಡೀಸೆಲ್‌ ಲೀಟರ್‌ಗೆ 28 ಪೈಸೆ ಹೆಚ್ಚಿಸಲಾಗಿದೆ.

Petrol, diesel prices today on June 29: Prices at historic high again after further hike, check rates in your city
ವಾಹನ ಸವಾರರ ಜೇಬಿಗೆ ಕತ್ತರಿ; ಪೆಟ್ರೋಲ್‌ ಲೀ. 35 ಪೈಸೆ, ಡೀಸೆಲ್‌ ಲೀ. 28 ಪೈಸೆ ಏರಿಕೆಯಾಗಿ ಹೊಸ ದಾಖಲೆ

By

Published : Jun 29, 2021, 9:46 AM IST

ನವದೆಹಲಿ: ದೇಶದಲ್ಲಿ ಮತ್ತೆ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಾಗಿದೆ. ತೈಲ ಬೆಲೆ ಏರಿಕೆಯಾಗಿದ್ದು ಸದ್ಯಕ್ಕಂತೂ ಬೆಲೆಗಳು ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ.

ಇಂದು ಪೆಟ್ರೋಲ್‌ ಪ್ರತಿ ಲೀಟರ್‌ಗೆ 35 ಪೈಸೆ ಹಾಗೂ ಡೀಸೆಲ್‌ ಲೀಟರ್‌ಗೆ 28 ಪೈಸೆ ಹೆಚ್ಚಿಸಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಮೇ 4 ರ ನಂತರವೇ ಹೆಚ್ಚಾಗತೊಡಗಿತ್ತು. ಅಲ್ಲಿಂದ ಇಲ್ಲಿಯವರೆಗೆ 32 ಬಾರಿ ದರ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿರುವ ಪೆಟ್ರೋಲ್‌ ಲೀಟರ್‌ಗೆ 107.75 ರೂಪಾಯಿ ಇದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ಬೆಲೆಯಲ್ಲಿ ತೀವ್ರ ಏರಿಕೆಯಾಗಿದ್ದು, ಬ್ಯಾರೆಲ್‌ಗೆ 74 ಡಾಲರ್‌ ಹೆಚ್ಚಾಗಿದೆ. ಇದು ಭಾರತದಲ್ಲಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಗರಿಷ್ಠ ಮಟ್ಟಕ್ಕೇರಲು ಕಾರಣವಾಗಿದೆ.

ಇಂದಿನ ದರ, ನಿನ್ನೆಯ ದರ (ಕ್ರಮವಾಗಿ)

  • ಬೆಂಗಳೂರು 107.75 ₹ 101.75
  • ನವದೆಹಲಿ ₹ 98.81 ₹ 98.46
  • ಕೋಲ್ಕತ್ತ ₹ 98.64 ₹ 98.30
  • ಮುಂಬೈ ₹ 104.90 ₹ 104.56
  • ಚೆನ್ನೈ ₹ 99.82 ₹ 99.49

ABOUT THE AUTHOR

...view details