ಕರ್ನಾಟಕ

karnataka

By

Published : Jun 16, 2020, 10:45 AM IST

Updated : Jun 16, 2020, 11:33 AM IST

ETV Bharat / business

ಸತತ 10 ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿದೆ ಪೆಟ್ರೋಲ್‌, ಡೀಸೆಲ್ ದರ

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗಳು ದೇಶದ ಬಹುಭಾಗ ಪೆಟ್ರೋಲಿಯಂ ಮತ್ತು ಡೀಸೆಲ್‌ ಸಗಟು ಮಾರಾಟ ಕೇಂದ್ರಗಳನ್ನು ಹೊಂದಿವೆ.

Petrol, diesel prices rise
ಪೆಟ್ರೋಲ್, ಡೀಸೆಲ್​

ನವದೆಹಲಿ: ಇಂದು ದೇಶಾದ್ಯಂತ ಲೀಟರ್​ ಪೆಟ್ರೋಲ್​ಗೆ 47 ಪೈಸೆ ಹಾಗೂ ಡೀಸೆಲ್​ಗೆ 93 ಪೈಸೆ ಹೆಚ್ಚಳವಾಗಿದೆ. ​ವಿಮಾನ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಇಂಧನ (ATF) ದರ ಕೂಡ ಶೇ.16.3 ರಷ್ಟು ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಅಧಿಕವಾಗಿದ್ದು, 82 ದಿನಗಳ ಲಾಕ್​ಡೌನ್​ ಬಳಿಕ ಸತತ 10 ದಿನಗಳಿಂದ ತೈಲ ಕಂಪನಿಗಳು ಇಂಧನ ಬೆಲೆ ಏರಿಸುತ್ತಿವೆ. ಇದೀಗ ಲೀಟರ್​ ಪೆಟ್ರೋಲ್ ಮೇಲೆ ಒಟ್ಟು 5.47 ರೂ. ಹಾಗೂ ಡೀಸೆಲ್ ಮೇಲೆ 5.8 ರೂ. ಹೆಚ್ಚಳವಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂಧನ ದರ: (ಪ್ರತಿ ಲೀಟರ್​ಗೆ ರೂಪಾಯಿಗಳಲ್ಲಿ)

ನಗರ ಪೆಟ್ರೋಲ್ ಡೀಸೆಲ್
ದೆಹಲಿ 76.73 75.19
ಬೆಂಗಳೂರು 79.2 79.2
ಕೋಲ್ಕತ್ತಾ 78.55 70.84
ಮುಂಬೈ 83.62 73.75
ಚೆನ್ನೈ 80.37 73.17

ಒಂದೇ ತಿಂಗಳಲ್ಲಿ ಎರಡು ಬಾರಿ ATF ದರ ಹೆಚ್ಚಳ:

ರಾಷ್ಟ್ರ ರಾಜಧಾನಿಯಲ್ಲಿ ಕಿಲೋ ಲೀಟರ್​ಗೆ​ (ಸಾವಿರ ಲೀಟರ್​) 5,494.5 ರೂ. ಇದ್ದ ವಿಮಾನ ಇಂಧನಕ್ಕೆ ಇದೀಗ 39,069.87 ರೂ. ಆಗಿದೆ. ಜೂನ್​ 1 ರಂದು ATF ದರ ಶೇ. 56.5 ರಷ್ಟು ಹೆಚ್ಚಳವಾಗಿತ್ತು. ಇದೀಗ ಮತ್ತೆ ಶೇ.16.3 ರಷ್ಟು ಹೆಚ್ಚಳವಾಗಿದ್ದು, ಒಂದೇ ತಿಂಗಳಲ್ಲಿ ಎರಡು ಬಾರಿ ಏರಿಕೆಯಾದಂತಾಗಿದೆ.

Last Updated : Jun 16, 2020, 11:33 AM IST

ABOUT THE AUTHOR

...view details