ಕರ್ನಾಟಕ

karnataka

ETV Bharat / business

ಎರಡು ದಿನಗಳ ನಂತರ ಮತ್ತೆ ಪೆಟ್ರೋಲ್‌-ಡೀಸೆಲ್‌ ದರದಲ್ಲಿ ಏರಿಕೆ - ಬೆಂಗಳೂರು ಪೆಟ್ರೋಲ್‌-ಡೀಸೆಲ್‌ ದರ

ಮತ್ತೆ ಇಂದು ಲೀಟರ್‌ ಪೆಟ್ರೋಲ್​ಗೆ 26 ಪೈಸೆ ಹಾಗೂ ಡೀಸೆಲ್​ಗೆ 34 ಪೈಸೆ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 94.30 ರೂ. ಹಾಗೂ ಡೀಸೆಲ್​ ಬೆಲೆ 86.64 ರೂ.ಗೆ ಏರಿಕೆಯಾಗಿದೆ.

Price of petrol & diesel in metro cities
ಎರಡು ದಿನಗಳ ನಂತರ ಮತ್ತೆ ಪೆಟ್ರೋಲ್‌-ಡೀಸೆಲ್‌ ದರದಲ್ಲಿ ಏರಿಕೆ

By

Published : May 10, 2021, 9:07 AM IST

ಮುಂಬೈ:ಇಂಧನ ಬೆಲೆ ಏರಿಕೆಗೆ ಎರಡು ದಿನಗಳ ಬ್ರೇಕ್​ ಕೊಟ್ಟಿದ್ದ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಮತ್ತೆ ಇಂದು ಲೀಟರ್‌ ಪೆಟ್ರೋಲ್​ಗೆ 26 ಪೈಸೆ ಹಾಗೂ ಡೀಸೆಲ್​ಗೆ 34 ಪೈಸೆ ಹೆಚ್ಚಳ ಮಾಡಿವೆ.

ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 91.53 ರೂ. ಹಾಗೂ ಡೀಸೆಲ್​ ಬೆಲೆ 82.06 ರೂ.ಗೆ ಏರಿಕೆಯಾಗಿದೆ. ಇದೇ ನಿಯಮ ದೇಶದ ಎಲ್ಲಾ ಮೆಟ್ರೋ ನಗರಗಳಿಗೂ ಅನ್ವಯವಾಗುತ್ತದೆ. ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂಧನ ಬೆಲೆ ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 94.30 ರೂ. 86.64 ರೂ.
ದೆಹಲಿ 91.53 ರೂ. 82.06 ರೂ.
ಕೋಲ್ಕತ್ತಾ 91.66 ರೂ. 84.90 ರೂ.
ಮುಂಬೈ 97.86 ರೂ. 89.17 ರೂ.
ಚೆನ್ನೈ 93.38 ರೂ. 86.96 ರೂ.

ABOUT THE AUTHOR

...view details