ಮುಂಬೈ:ಮತ್ತೆ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿದ್ದು, ಮೇ 4ರಿಂದ ಒಂದು ವಾರದ ಅವಧಿಯಲ್ಲಿ ಆರು ಬಾರಿ ಇಂಧನ ಬೆಲೆಯನ್ನು ಹೆಚ್ಚಿಸಿವೆ.
ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ: ಬೆಂಗಳೂರಲ್ಲಿ ಇಂಧನ ಬೆಲೆ ಎಷ್ಟು ಗೊತ್ತೇ? - oil marketing companies
ಪ್ರತಿ ಲೀಟರ್ ಪೆಟ್ರೋಲ್ಗೆ ಇಂದು 27 ಪೈಸೆ ಹಾಗೂ ಡೀಸೆಲ್ಗೆ 30 ಪೈಸೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 94.85 ರೂ. ಹಾಗೂ ಡೀಸೆಲ್ ಬೆಲೆ 87.31 ರೂ.ಗೆ ಹೆಚ್ಚಳವಾಗಿದೆ.
ಒಂದೇ ವಾರದಲ್ಲಿ ಆರು ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಇಂದು ಲೀಟರ್ ಪೆಟ್ರೋಲ್ಗೆ 27 ಪೈಸೆ ಹಾಗೂ ಡೀಸೆಲ್ಗೆ 30 ಪೈಸೆ ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.53 ರೂ. ಹಾಗೂ ಡೀಸೆಲ್ ಬೆಲೆ 82.06 ರೂ.ಗೆ ಏರಿಕೆಯಾಗಿದೆ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ.
ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂದಿನ ಇಂಧನ ಬೆಲೆ ಈ ಕೆಳಕಂಡಂತಿದೆ.
ನಗರ | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 94.85 ರೂ. | 87.31 ರೂ. |
ದೆಹಲಿ | 91.80 ರೂ. | 82.36 ರೂ. |
ಕೋಲ್ಕತ್ತಾ | 91.92 ರೂ. | 85.20 ರೂ. |
ಮುಂಬೈ | 98.12 ರೂ. | 89.48 ರೂ. |
ಚೆನ್ನೈ | 93.62 ರೂ. | 87.25 ರೂ. |