ನವದೆಹಲಿ :ಜಿಎಸ್‌ಟಿ ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತರಲು ಮುಂದಿನ 8-10 ವರ್ಷಗಳವರೆಗೆ ಸಾಧ್ಯವಿಲ್ಲ. ವಾರ್ಷಿಕ 2 ಲಕ್ಷ ಕೋಟಿ ರೂ. ಆದಾಯ ನಷ್ಟ ಎದುರಿಸಲು ಯಾವುದೇ ರಾಜ್ಯಗಳು ಸಿದ್ಧವಿಲ್ಲ ಎಂದು ಬಿಜೆಪಿ ಸದಸ್ಯ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಹಣಕಾಸು ಮಸೂದೆ ಬೆಂಬಲಿಸಿ ಮಾತನಾಡಿದ ಬಿಹಾರದ ಮಾಜಿ ಹಣಕಾಸು ಸಚಿವರು, ಜಿಎಸ್‌ಟಿ ಮಂಡಳಿಯಲ್ಲಿ ಈ ವಿಷಯ ಎತ್ತಲು ವಿರೋಧ ವ್ಯಕ್ತಪಡಿಸಿದರು. ಎನ್ಡಿಎ ಆಡಳಿತರಹಿತ ರಾಜ್ಯಗಳ ಯಾವುದೇ ಮುಖ್ಯಮಂತ್ರಿ ಅಥವಾ ಹಣಕಾಸು ಮಂತ್ರಿ ಜಿಎಸ್‌ಟಿ ಕೌನ್ಸಿಲ್ನ ಯಾವುದೇ ನಿರ್ಧಾರ ವಿರೋಧಿಸಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 5 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುತ್ತವೆ ಎಂದು ಮೋದಿ ಹೇಳಿದರು. ಕೆಲ ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ 100 ರೂ. ಗಡಿ ದಾಟ್ಟಿದೆ. ಜಿಎಸ್‌ಟಿ ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತರಬೇಕು ಎಂಬ ಕಾಂಗ್ರೆಸ್ ಮತ್ತು ಇತರ ಕೆಲ ಪಕ್ಷಗಳ ಬೇಡಿಕೆ ಹಿನ್ನೆಲೆ ಈ ಹೇಳಿಕೆ ಮಹತ್ವ ಪಡೆದಿದೆ.