ಕರ್ನಾಟಕ

karnataka

ETV Bharat / business

ಜನ ಸಾಥ್ ಕೊಟ್ಟರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಏನು ಮಹಾ: ಮೋದಿ -

ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಹಲವು ವಿಮರ್ಶಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದ್ದೇಶಿತ ಸಂಕಲ್ಪಗಳಿಗೆ ಎದರಾಗಲಿರುವ ತೊಂದರೆಗಳನ್ನು ನಿವಾರಿಸಲು ಸರ್ಕಾರ ಬಲಿಷ್ಠವಾಗಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jul 6, 2019, 3:33 PM IST

ವಾರಣಾಸಿ:ಭಾರತದ ಈಗಿನ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್​ ಆರ್ಥಿಕತೆಯತ್ತ ಕೊಂಡೊಯ್ಯುವ ಉದ್ದೇಶ, ದೇಶದಲ್ಲಿರುವ ಪ್ರತಿಕುಟಂಬ ಸದಸ್ಯರ ಜೀವನ ಬದಲಾಯಿಸುವುದು ಮತ್ತು ಆರ್ಥಿಕತೆಯಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಣಾಸಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಕೇಕ್ ಗಾತ್ರ ದೊಡ್ಡದಾದಷ್ಟು ತಿನ್ನುವವರ ಪಾಲು ಕೂಡ ದೊಡ್ಡದಾಗುತ್ತದೆ. ಈ ಮಾದರಿಯಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್​ಗೆ ವಿಸ್ತಿರಿಸಲಿದ್ದೇವೆ. ಈ ಸಂಪತ್ತಿನ ಉದ್ದೇಶ ಕೇವಲ ಕುಟುಂಬ ಆದಾಯ ಹೆಚ್ಚಿಸುವುದಲ್ಲ. ಅದರ ಜೊತೆಗೆ ಜನರು ಜೀವನ ಮಟ್ಟದಲ್ಲಿ ಸುಧಾರಣೆ ತರುವುದೂ ಒಳಗೊಂಡಿದೆ' ಎಂದು ವಿವರಿಸಿದರು.

ಆರ್ಥಿಕತೆಯ ಹಿನ್ನೆಡೆಗೆ ಕಾರಣವಾಗುವ ಕಡಿಮೆ ಆದಾಯ, ಕಡಿಮೆ ಖರ್ಚಿನ ಚಕ್ರವ್ಯೂಹದ ಮಾನಸಿಕ ಬಡತನದ ಬಲೆಯಿಂದ ಭಾರತ ಹೊರಬರಬೇಕಿದೆ ಎಂದು ಪ್ರಧಾನಿ ಹೇಳಿದರು.

ಕಾಶಿ ಪುತ್ರರು ಪ್ರತಿಯೊಬ್ಬರ ಮನೆ ಮನೆಗೆ ತೆರಳಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸರ್ಕಾರದ ಕನಸಿನ ನೈಜ ಅರ್ಥವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಹಲವು ವಿಮರ್ಶಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದ್ದೇಶಿತ ಸಂಕಲ್ಪಗಳಿಗೆ ಎದರಾಗಲಿರುವ ತೊಂದರೆಗಳನ್ನು ನಿವಾರಿಸಲು ಸರ್ಕಾರ ಬಲಿಷ್ಠವಾಗಿದೆ. 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಹಿಂದೆ ‘ಹೊಸ ಭಾರತ’ ಕಟ್ಟುವ ಕನಸಿದೆ. ನಮ್ಮೆಲ್ಲರ ಹೊಸ ಬದ್ಧತೆ, ಹೊಸ ಶಕ್ತಿ ಮತ್ತು ಹೊಸ ದೃಷ್ಟಿಯಿಂದ ಈ ಗುರಿ ಸಾಧಿಸಬಲ್ಲೆವು ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನರ ಸಹಭಾಗಿತ್ವ ಇಲ್ಲದೆ ಸರ್ಕಾರ ಯಾವುದೇ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿಯಾಗುವುದಿಲ್ಲ. ಸ್ವಚ್ಛ ಭಾರತ್ ಮಿಷನ್ ಯಶಸ್ವಿಯಾಗಲು ಜನರ ಪಾಲ್ಗೊಳ್ಳುವಿಕೆ ಪ್ರಧಾನವಾದದ್ದು. ನಾವು ಮೊದಲು ನಂಬಿಕೆ ಹೊಂದಿರಬೇಕು. ಬಳಿಕ ಕನಸನ್ನು ಸಾಧಿಸುವತ್ತ ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details