ಕರ್ನಾಟಕ

karnataka

ETV Bharat / business

ಜೂನ್‌ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ 38ರಷ್ಟು ಕುಸಿತ - ಭಾರತದಲ್ಲಿ ವಾಹನ ಮಾರಾಟ

ಕೋವಿಡ್​-19 ಖರೀದಿದಾರರ ಮನೋಭಾವದ ಮೇಲೆ ಪರಿಣಾಮ ಬೀರುತ್ತಿದೆ. 1,440 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) 1,230 ವಾಹನ ನೋಂದಣಿಯ ಡೇಟಾ ಸಂಗ್ರಹಿಸಿದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಪ್ರಕಾರ, 2019ರ ಜೂನ್‌ನಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು 2,05,011 ಯುನಿಟ್‌ಗಳಾಗಿವೆ ಎಂದಿದೆ. 2020ರ ಜೂನ್‌ನಲ್ಲಿ ಒಟ್ಟು ಮಾರಾಟವು ಶೇ 42ರಷ್ಟು ಕುಸಿದು 9,84,395 ಯೂನಿಟ್​ಗೆ ತಲುಪಿದೆ.

Passenger vehicle
ಪ್ರಯಾಣಿಕ ವಾಹನ

By

Published : Jul 21, 2020, 4:01 PM IST

ನವದೆಹಲಿ: ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್​ ಮಾಸಿಕದಲ್ಲಿ ಶೇ 38.34ರಷ್ಟು ಕುಸಿದು 1,26,417 ಯೂನಿಟ್​ಗೆ ತಲುಪಿದೆ.

ಕೋವಿಡ್​-19 ಖರೀದಿದಾರರ ಮನೋಭಾವದ ಮೇಲೆ ಪರಿಣಾಮ ಬೀರುತ್ತಿದೆ. 1,440 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) 1,230 ವಾಹನ ನೋಂದಣಿಯ ಅಂಕಿ-ಅಂಶ ಸಂಗ್ರಹಿಸಿದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಪ್ರಕಾರ, 2019ರ ಜೂನ್‌ನಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು 2,05,011 ಯುನಿಟ್‌ಗಳಾಗಿವೆ ಎಂದಿದೆ.

ದ್ವಿಚಕ್ರ ವಾಹನಗಳ ಮಾರಾಟವು ಕಳೆದ ತಿಂಗಳು ಶೇ 40.92ರಷ್ಟು ಕುಸಿದು 7,90,118 ಯೂನಿಟ್​ಗಳಿಗೆ ತಲುಪಿದೆ. 2019ರ ಜೂನ್‌ನಲ್ಲಿ 13,37,462 ಯುನಿಟ್‌ಗಳು ಮಾರಾಟ ಆಗಿದ್ದವು. ವಾಣಿಜ್ಯ ವಾಹನಗಳ ಮಾರಾಟವು ಶೇ 83.83ರಷ್ಟು ಕುಸಿದು 10,509 ಯೂನಿಟ್​ಗಳಿಗೆ ತಲುಪಿದೆ.

ಪ್ರಯಾಣಿಕ ವಾಹನ

ತ್ರಿಚಕ್ರ ಮಾರಾಟವು ಕಳೆದ ತಿಂಗಳು ಶೇ 75.43ರಷ್ಟು ಕುಸಿದು 11,993ಕ್ಕೆ ತಲುಪಿದೆ. 2019ರ ಜೂನ್‌ನಲ್ಲಿ ಇದು 48,804 ಯುನಿಟ್‌ಗಳಷ್ಟಿತ್ತು. 2020ರ ಜೂನ್‌ನಲ್ಲಿ ಒಟ್ಟು ಮಾರಾಟವು ಶೇ 42ರಷ್ಟು ಕುಸಿದು 9,84,395 ಯೂನಿಟ್​ಗೆ ತಲುಪಿದೆ.

ಒಕ್ಕೂಟದ ಅಧ್ಯಕ್ಷ ಆಶಿಶ್ ಹರ್ಷರಾಜ್ ಕೇಲ್ ಮಾತನಾಡಿ, ಒಟ್ಟಾರೆ ದುರ್ಬಲ ಆರ್ಥಿಕ ಮನೋಭಾವ ಮತ್ತು ಹೆಚ್ಚುತ್ತಿರುವ ಕೋವಿಡ್​-19 ರೋಗಿಗಳ ಸಂಖ್ಯೆಯು ಗ್ರಾಹಕರ ವಿಶ್ವಾಸದ ಮೇಲೆ ಪರಿಣಾಮ ಬೀರಿದೆ. ನಗರ ಪ್ರದೇಶಗಳಲ್ಲಿ ಇದರ ಪ್ರಭಾವ ವ್ಯಾಪಕವಾಗಿದೆ ಎಂದು ಹೇಳಿದರು.

ABOUT THE AUTHOR

...view details