ನವದೆಹಲಿ: ಅಕ್ಟೋಬರ್‌ನಲ್ಲಿ ಪ್ರಯಾಣಿಕ ವಾಹನಗಳ (ಪಿವಿ) ಚಿಲ್ಲರೆ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ .8.8ರಷ್ಟು ಕುಸಿತ ಕಂಡಿದ್ದು, 2,49,860 ಯುನಿಟ್‌ಗಳಿಗೆ ತಲುಪಿದೆ ಎಂದು ಆಟೊಮೊಬೈಲ್ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.
ಒಟ್ಟು 1,464 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿಒ) ಪೈಕಿ 1,257 ಕಚೇರಿಗಳಿಂದ ವಾಹನ ನೋಂದಣಿ ಡೇಟಾ ಸಂಗ್ರಹಿಸಿದ ಎಫ್‌ಎಡಿಎ, ಪಿವಿ ಮಾರಾಟವು 2019ರ ಅಕ್ಟೋಬರ್‌ನಲ್ಲಿ 2,73,980 ಯುನಿಟ್‌ಗಳಾಗಿತ್ತು. ಇದಕ್ಕೆ ಹೋಲಿಸಿದರೆ ಶೇ 8.8ರಷ್ಟು ಕ್ಷೀಣಿಸಿದೆ ಎಂದರು.
ದ್ವಿಚಕ್ರ ವಾಹನಗಳ ಮಾರಾಟವು ಕಳೆದ ತಿಂಗಳು ಶೇ 26.82ರಷ್ಟು ಕುಸಿದು 10,41,682ಕ್ಕೆ ತಲುಪಿದೆ. 2019ರ ಅಕ್ಟೋಬರ್‌ನಲ್ಲಿ 14,23,394 ಯುನಿಟ್‌ಗಳಷ್ಟಿತ್ತು.
ವಾಣಿಜ್ಯ ವಾಹನಗಳ ಮಾರಾಟ ಕೂಡ ಶೇ ರಷ್ಟು ಕುಸಿದು 44,480ಕ್ಕೆ ತಲುಪಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 63,837 ಯುನಿಟ್‌ಗಳಷ್ಟು ಆಗಿತ್ತು. ತ್ರಿಚಕ್ರ ಮಾರಾಟವು ಕಳೆದ ತಿಂಗಳು ಶೇ 64.5ರಷ್ಟು ಕುಸಿದು 22,381ಕ್ಕೆ ತಲುಪಿದೆ.
ಟ್ರ್ಯಾಕ್ಟರ್ ಮಾರಾಟವು ಕಳೆದ ತಿಂಗಳು 55,146ಕ್ಕೆ ತಲುಪಿದ್ದು, ಶೇ 55ರಷ್ಟು ಮಾರಾಟ ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 35,456 ಯುನಿಟ್ ಮಾರಾಟವಾಗಿದ್ದವು.
ಮಾರಾಟದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಿದ ಫಡಾ ಅಧ್ಯಕ್ಷ ವಿಂಕೇಶ್ ಗುಲಾಟಿ, ನವರಾತ್ರಿ ಅವಧಿಯು ಸದೃಢ ವಾಹನ ನೋಂದಣಿಗೆ ಸಾಕ್ಷಿಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಮಾರಾಟ ಕೆಂಪು ಬಣ್ಣಕ್ಕೆ ಹೋಗಲು ಸಾಧ್ಯವಿಲ್ಲ. ನವರಾತ್ರಿ ಮತ್ತು ದೀಪಾವಳಿ ಎರಡೂ ಒಂದೇ ತಿಂಗಳಲ್ಲಿ ಇದ್ದವು ಎಂದರು.
ಸಣ್ಣ ಸರಕು ವಾಹನಗಳು ಸ್ಥಳೀಯ ಸರಕುಗಳ ಸಾಗಣೆಯಿಂದಾಗಿ ಕೋವಿಡ್‌ಗೆ ಮುಂಚಿನ ಮಟ್ಟಕ್ಕೆ ಸದೃಢವಾದ ಬೇಡಿಕೆ ಕಂಡಿದೆ. ಆದರೆ, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ ವಿಭಾಗದ ಕುಸಿತವು ಮುಂದುವರೆದಿದೆ ಎಂದರು.
ಪ್ರೋತ್ಸಾಹಕ ಆಧಾರಿತ ಸ್ಕ್ರ್ಯಾಪೇಜ್ ನೀತಿಯನ್ನು ತುರ್ತಾಗಿ ಘೋಷಿಸುವಂತೆ ಫಡಾ, ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ. ಮೂಲಸೌಕರ್ಯ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಂತೆ ವಿನಂತಿ ಮಾಡಿಕೊಳ್ಳುತ್ತೇನೆ. ಇದು ಬೇಡಿಕೆ ಉತ್ಪಾದನೆಗೆ ಸಹಾಯ ಮಾಡುತ್ತದೆ ಜೊತೆಗೆ ಹೆಚ್ಚಿನ ವಾಹನಗಳ ಉತ್ಪಾದನೆಗೆ ಕಾರಣವಾಗುತ್ತದೆ ಎಂದು ಹೇಳಿದರು.