ಕರ್ನಾಟಕ

karnataka

ETV Bharat / business

ಕರ್ತಾರ್​ಪುರ ಕಾರಿಡಾರ್​ ಸಮಿತಿಯಲ್ಲಿ ಪಾಕ್ ನರಿ ಬುದ್ಧಿ... ಭಾರತ ತಿರುಗೇಟು

ಪಾಕಿಸ್ತಾನ ಸಚಿವ ಸಂಪುಟ 10 ಸದಸ್ಯರನ್ನೊಳಗೊಂಡ ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿಯನ್ನು ರಚಿಸಿತ್ತು. ಇದರಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಿರುವ ಪಾಕ್​ ನಡೆಗೆ ಭಾರತ ತೀವ್ರ ಅಸಮಾಧಾನ ಹೊರಹಾಕಿದೆ.

By

Published : Mar 29, 2019, 6:10 PM IST

ಗುರುದಾಸ್ ಪುರ

ಇಸ್ಲಮಾಬಾದ್​: ಪಾಕ್​- ಭಾರತ ಗಡಿಯಲ್ಲಿರುವ ಪಾಕಿಸ್ತಾನದ ಕರ್ತಾರ್​ಪುರ ಹಾಗೂ ಗುರುದಾಸ್​ ಪುರಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್​ಪುರ ಕಾರಿಡಾರ್​ಗೆ ಸಂಬಂಧಪಟ್ಟ ಸಮಿತಿಯಲ್ಲಿ ಖಲಿಸ್ಥಾನಿ ಪ್ರತ್ಯೇಕ ವಾದಿಗಳಿಗೆ ಪಾಕಿಸ್ತಾನ ಸ್ಥಾನ ನೀಡಿ, ತನ್ನ ನರಿ ಬುದ್ಧಿ ತೋರಿದೆ.

ಪಾಕ್​ನ ಉಪ ಹೈಕಮಿಷನರ್ ಸಯೀದ್ ಹೈದರ್ ಶಾ ಜೊತೆಗೆ ಮಾತನಾಡಿದ ಭಾರತವು, 'ಈ ಸಮಿತಿಯಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಲಾದ ವಿಷಯವನ್ನು ಪ್ರಸ್ತಾಪಿಸಿ, ತನ್ನ ವಿರೋಧ ವ್ಯಕ್ತಪಡಿಸಿದೆ.

ಕರ್ತಾರ್​ಪುರ ಕಾರಿಡಾರ್ ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಚರ್ಚಿಸುವುದಕ್ಕಾಗಿ ಭಾರತ-ಪಾಕಿಸ್ತಾನದ ಅಧಿಕಾರಿಗಳ ನಡುವಿನ ಸಭೆ ಏಪ್ರಿಲ್​ 2ರಂದು ನಡೆಯಬೇಕಿತ್ತು. ಆದರೆ, ಈಗ ಭಾರತ ನಿಗದಿಯಾಗಿದ್ದ ಸಭೆಯನ್ನು ಮುಂದೂಡಿದೆ. ಗುರುದ್ವಾರ ಕರ್ತಾರ್​ಪುರ ಸಾಹಿಬ್​ಗೆ ಭಾರತದ ಯಾತ್ರಾರ್ಥಿಗಳು ಬಯಸಿದಲ್ಲಿ ಕಾಲ್ನಡಿಗೆಯಲ್ಲೇ ಸುರಕ್ಷಿತವಾಗಿ ತೆರಳುವುದಕ್ಕೆ ಅವಕಾಶ ನೀಡಬೇಕೆಂದು ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಒತ್ತಡ ಹಾಕುತ್ತಿದೆ.

ನಿಗದಿಯಾಗಿದ್ದ ಸಭೆ ಮುಂದೂಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್​, ಭಾರತ ಸಭೆ ಮುಂದೂಡಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ. ಭಾರತದ ನಿರ್ಧಾರ 'ಅರ್ಥಮಾಡಿಕೊಳ್ಳಲು ಆಗದು' ಎಂದು ತಿಳಿಸಿದೆ.

ABOUT THE AUTHOR

...view details