ನವದೆಹಲಿ:ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಮಾಧ್ಯಮಗಳಲ್ಲಿ 124 ಕೋಟಿ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ ಎಂದು ಕೇಂದ್ರವು ರಾಜ್ಯಸಭೆಗೆ ತಿಳಿಸಿದೆ.
ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಬಿಜು ಜನತಾದಳ (ಬಿಜೆಡಿ) ಸಂಸದರಾದ ಭಾಸ್ಕರ್ ರಾವ್ ನೆಕ್ಕಂತಿ ಮತ್ತು ಪ್ರಶಾಂತ ನಂದಾ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿ ಈ ಮಾಹಿತಿ ನೀಡಿದರು.
ಭಾರತದಲ್ಲಿ ದೇಶೀಯ ಪ್ರವಾಸೋದ್ಯಮ ಉತ್ತೇಜಿಸಲು ಪ್ರವಾಸೋದ್ಯಮ ಸಚಿವಾಲಯವು ವಿವಿಧ ಮಾಧ್ಯಮ ಪ್ರಚಾರಗಳನ್ನು ನಡೆಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಮುದ್ರಣ ಮಾಧ್ಯಮ, ಟೆಲಿವಿಷನ್, ಆನ್‌ಲೈನ್, ರೆಡಿಯೋ, ಥಿಯೇಟರ್ ಮತ್ತು ಎಸ್‌ಎಂಎಸ್‌ಗಳಲ್ಲಿ ಪ್ರಚಾರ ನಡೆಸಲಾಯಿತು ಎಂದು ಪಟೇಲ್ ತಿಳಿಸಿದ್ದಾರೆ.