ನವದೆಹಲಿ: ಇ-ಫೈಲಿಂಗ್ ಮೂಲಕ ಡಿಸೆಂಬರ್ 27ರ ವರೆಗೆ 4.67 ಕೋಟಿ ಮಂದಿ ಆದಾಯ ತೆರಿಗೆ ಸಲ್ಲಿಕೆ ಮಾಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದ್ದಾರೆ. ಕೊನೆಯದಿನವಾದ ಡಿ.31ರ ವೇಳೆಗೆ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಸಚಿವಾಲಯ ಹೇಳಿದೆ.
2022-22ನೇ ಸಾಲಿನಲ್ಲಿ 4.67 ಲಕ್ಷ ಮಂದಿ ಆದಾಯ ತೆರಿಗೆ ಸಲ್ಲಿಕೆ ಪೈಕಿ 53.6 ರಷ್ಟು(2.5 ಕೋಟಿ ಮಂದಿ) ಅವಧಿ 1ರಲ್ಲಿ, 8.9ರಷ್ಟು(41.7 ಲಕ್ಷ ಮಂದಿ) ಐಆರ್‌ಟಿ 2ರಲ್ಲಿ, 10.75 ರಷ್ಟು(50.25 ಲಕ್ಷ) ಐಆರ್‌ಟಿ 3ರಲ್ಲಿ, 25 ರಷ್ಟು (1.17 ಕೋಟಿ ಮಂದಿ) ಐಆರ್‌ಟಿ 4ರಲ್ಲಿ, ಐಆರ್‌ಟಿ 5ರಲ್ಲಿ 5.18 ಲಕ್ಷ ಮಂದಿ, ಐಆರ್‌ಟಿ 6ರಲ್ಲಿ 2.15 ಲಕ್ಷ ಮಂದಿ, ಹಾಗೂ ಐಆರ್‌ಟಿ 7ರಲ್ಲಿ 43 ಸಾವಿರ ಮಂದಿ ಆದಾಯ ತೆರಿಗೆ ಸಲ್ಲಿಸಿಕೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದೆ.
ಶೇಕಡಾ 48.19ರಷ್ಟು ತೆರಿಗೆ ಪಾವತಿದಾರರು ಆನ್‌ಲೈನ್ ವೇದಿಕೆ ಮೂಲಕ ಐಟಿ ಫೈಲ್ ಮಾಡಿದ್ದಾರೆ. ಉಳಿದ ಮಂದಿ ಐಟಿಆರ್‌ನ ಆಫ್‌ಲೈನ್ ಸಾಫ್ಟ್‌ವೇರ್‌ನಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ 3.91 ಕೋಟಿ ಮಂದಿಯ ತೆರಿಗೆ ಪಾವತಿ ಪರಿಶೀಲಿಸಲಾಗಿದೆ. 3.35 ಕೋಟಿ ಪಾವತಿದಾರರಿಗೆ ಆಧಾರ್ ಆಧಾರಿತ ಒಟಿಪಿ ಮೂಲಕ ಪರಿಶೀಲನೆ ನಡೆಸಲಾಗಿದೆ.
ಕಳೆದ ಮೂರು ದಿನಗಳಿಂದ ಇ-ಫೈಲ್ಲಿಂಗ್ ಪೋರ್ಟಲ್‌ನಲ್ಲಿ 27.7 ಲಕ್ಷ ಆಧಾರ್ ಒಟಿಪಿ ರಿಕ್ವೆಸ್ಟ್‌ಗಳನ್ನು ಜನರೇಟ್ ಮಾಡಲಾಗಿದೆ. ಆದಾಯ ತೆರಿಕೆ ಪಾವತಿದಾರರು ಆದಷ್ಟು ಬೇಗ ಬಾಕಿ ಪ್ರಕರಣಗಳನ್ನು ಇ-ಪರಿಶೀಲನೆ ಮೂಲಕ ಪೂರ್ಣಗೊಳಿಸಬೇಕು ಎಂದು ಆದಾಯ ತೆರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ:ಲಕ್ಷ ಲಕ್ಷ ವೇತನ ಬಂದ್ರೂ ಜೇಬಲ್ಲಿ 1 ರೂ. ಕೂಡ ಉಳಿಯುತ್ತಿಲ್ವಾ; ಹಣ ಉಳಿಸಲು ಇಲ್ಲಿವೆ ಟಿಪ್ಸ್..