ಕರ್ನಾಟಕ

karnataka

ETV Bharat / business

ಕೆಲವು ಪತ್ರಿಕೆಗಳನ್ನು ಓದಿದರೆ ದೇಶದಲ್ಲಿ ಪ್ರತಿಪಕ್ಷಗಳೇ ಇಲ್ಲ ಎಂಬ ಭಾವನೆ ಬರ್ತಿದೆ: ಪಿ.ಚಿದಂಬರಂ ಅಸಮಾಧಾನ

ದೇಶದಲ್ಲಿ ದುರ್ಬಲ ವಿರೋಧವಿದ್ದರೂ ಆರ್ಥಿಕತೆಯ ಬಗ್ಗೆ ಯಾವುದೇ ದೃಷ್ಟಿಕೋನವನ್ನು ಹೊಂದಿಲ್ಲ ಎಂದು ಬಜೆಟ್‌ ಬಗ್ಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮಾರ್ಮಿಕವಾಗಿ ನುಡಿದ್ದಾರೆ.

Opposition has no views on economy P Chidambaram
ಆರ್ಥಿಕತೆಯ ಬಗ್ಗೆ ವಿರೋಧ ಪಕ್ಷಗಳು ಯಾವುದೇ ದೃಷ್ಟಿಕೋನ ಹೊಂದಿಲ್ಲ - ಪಿ.ಚಿದಂಬರಂ

By

Published : Feb 1, 2022, 10:51 AM IST

ನವದೆಹಲಿ: ಆರ್ಥಿಕ ಸಮೀಕ್ಷೆಯ ನಂತರ ಬೆಳಗ್ಗೆ, ಕೆಲವು ಪತ್ರಿಕೆಗಳನ್ನು ಓದಿದರೆ, ನೀವು ಭಾರತದಲ್ಲಿ ವಿರೋಧ ಪಕ್ಷವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತೀರಿ. ದುರ್ಬಲ ವಿರೋಧವಿದ್ದರೂ ಆರ್ಥಿಕತೆಯ ಬಗ್ಗೆ ಯಾವುದೇ ದೃಷ್ಟಿಕೋನವನ್ನು ಹೊಂದಿಲ್ಲ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ ಒಂದು ದಿನದ ನಂತರ ಚಿದಂಬರಂ ಅವರು ಇಂತಹ ಪ್ರತಿಕ್ರಿಯೆ ನೀಡಿದ್ದಾರೆ. ಚಾರ್ಲ್ಸ್ ಡಿಕನ್ಸ್ ಅವರ ಕಾದಂಬರಿ 'ಎ ಟೇಲ್ ಆಫ್ ಟು ಸಿಟೀಸ್' ನಿಂದ ಒಂದು ವಾಕ್ಯವೊಂದನ್ನು ಉಲ್ಲೇಖಿಸಿದ ಚಿದಂಬರಂ, ಇದು ಅತ್ಯುತ್ತಮ ಸಮಯ, ಇದು ಕೆಟ್ಟ ಸಮಯ ಎಂದು ಹೇಳಿದ್ದಾರೆ.

31.3.2022 ರಂದು ಇದ್ದ ಜಿಡಿಪಿ ದರ 2020ರ ಮಾರ್ಚ್‌ 31ಕ್ಕೆ ಅದೇ ಮಟ್ಟದಲ್ಲಿರುತ್ತದೆ. ಇದರರ್ಥ ನಾವು 31-3-2020 ರಂದು ಇದ್ದ ಸ್ಥಳಕ್ಕೆ ಹಿಂತಿರುಗಲು ಎರಡು ವರ್ಷಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಈ ವರ್ಷ ಸಾಂಪ್ರದಾಯಿಕ ಬಹಿ - ಖಾತಾಕ್ಕಿಂತ ಭಿನ್ನವಾಗಿ ಎರಡನೇ ಬಾರಿಗೆ ಕೇಂದ್ರ ಬಜೆಟ್ ಅನ್ನು ಕಾಗದರಹಿತ ರೂಪದಲ್ಲಿ ನೀಡಲಾಗುತ್ತಿದೆ.

ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಒಟ್ಟು 9 ಬಾರಿ ಬಜೆಟ್‌ ಮಂಡಿಸುವ ಮೂಲಕ ದೇಶದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದವರಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರು ಒಟ್ಟು 10 ಬಾರಿ ಬಜೆಟ್‌ ಮಂಡಿಸಿದ ಖ್ಯಾತಿ ಹೊಂದಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details