ಕರ್ನಾಟಕ

karnataka

ETV Bharat / business

2026ರ ವೇಳೆಗೆ ಭಾರತದಲ್ಲಿ 500 ಬಿಲಿಯನ್​ ಡಾಲರ್​ ಆನ್​ಲೈನ್​ ವಹಿವಾಟು ಸಾಧ್ಯತೆ: ವರದಿ - ರೆಡ್​ಸೀರ್ ವರದಿ

2026ರ ವೇಳೆಗೆ ಆನ್​ಲೈನ್​ ಖರೀದಿದಾರರಲ್ಲಿ 2.5 ರಷ್ಟು ಹೆಚ್ಚಳ ಕಾಣುವುದರೊಂದಿಗೆ(online shopping explodes in India)ದೇಶದಲ್ಲಿ ಇ -ಕಾಮರ್ಸ್​ ಕಂಪನಿಗಳ ಮೂಲಕ 500 ಬಿಲಿಯನ್​ ಡಾಲರ್​ ವಹಿವಾಟು ನಡೆಯಲಿದೆ ಎಂದು ಬೆಂಗಳೂರು ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್​ಸೀರ್​ನ ಹೊಸ ವರದಿ (Red Seer report)ತಿಳಿಸಿದೆ.

online shopping
ಆನ್​ಲೈನ್​ ವಹಿವಾಟು

By

Published : Nov 15, 2021, 2:28 PM IST

ನವದೆಹಲಿ:ಸ್ಮಾರ್ಟ್‌ಫೋನ್ ಮತ್ತು ಇಂಟರ್​ನೆಟ್​ ಬಳಕೆದಾರರ ಹೆಚ್ಚಳದೊಂದಿಗೆ ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. 2026ರ ವೇಳೆಗೆ ಆನ್​ಲೈನ್​ ಖರೀದಿದಾರರಲ್ಲಿ 2.5 ರಷ್ಟು ಹೆಚ್ಚಳ ಕಾಣುವುದರೊಂದಿಗೆ (online shopping explodes in India)ದೇಶದಲ್ಲಿ ಇ-ಕಾಮರ್ಸ್​ ಕಂಪನಿಗಳ ಮೂಲಕ 500 ಬಿಲಿಯನ್​ ಡಾಲರ್​ ವಹಿವಾಟು ನಡೆಯಲಿದೆ ಎಂದು ಬೆಂಗಳೂರು ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್​ಸೀರ್​ನ ಹೊಸ ವರದಿ (Red Seer report)ತಿಳಿಸಿದೆ.

ಮುಂದಿನ 5 ವರ್ಷಗಳಲ್ಲಿ ಭಾರತದ ಪ್ರಮುಖ ನಗರಗಳಲ್ಲಿ 24 ಮಿಲಿಯನ್​(24 ಕೋಟಿ) ಆನ್​ಲೈನ್​ ಖರೀದಿದಾರರು (ಪ್ರಸ್ತುತ 16 ಮಿಲಿಯನ್​ ಖರೀದಿದಾರರಿದ್ದಾರೆ) ಹುಟ್ಟಿಕೊಳ್ಳುವ ನಿರೀಕ್ಷೆ ಇದೆ. ಜೊತೆಗೆ ಪ್ರತಿಯೊಂದು ಕುಟುಂಬದ ಖರೀದಿಯಲ್ಲಿ 13 ಸಾವಿರ ಡಾಲರ್​ನಿಂದ 20 ಸಾವಿರ ಡಾಲರ್​ವರೆಗೆ(14 ಲಕ್ಷ ರೂಪಾಯಿ) ಪ್ರಗತಿ ಕಾಣಲಿದೆ. ಇದು ಕ್ರಮೇಣ 480 ಶತಕೋಟಿ ದಾಟಲಿದೆ ಎಂದು ವರದಿ ಅಂದಾಜಿಸಿದೆ.

ಮೊದಲ ಸ್ಥಾನದಲ್ಲಿ ಅಮೆರಿಕ

125 ಮಿಲಿಯನ್​ ಆನ್​ಲೈನ್​ ಖರೀದಿದಾರರಿರುವ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 2026ರ ವೇಳೆಗೆ ಭಾರತ 24 ಮಿಲಿಯನ್ ಖರೀದಿದಾರರನ್ನು ಕಾಣುವ ಮೂಲಕ ಎರಡನೇ ಸ್ಥಾನ ತಲುಪಲಿದೆ ಎಂಬುದು ವರದಿಯಲ್ಲಿನ ಗಮನಾರ್ಹ ಅಂಶವಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಆನ್​ಲೈನ್​ ಖರೀದಾರರ ಪ್ರಸರಣ ಸಂಖ್ಯೆ ತೀವ್ರ ಗತಿಯಲ್ಲಿ ಏರುತ್ತಿದೆ. ಅಲ್ಲದೇ, ಪಟ್ಟಣ ನಿವಾಸಿಗಳ ಜೀವನ ಶೈಲಿಯೂ ಬದಲಾಗುತ್ತಿದೆ. ಇದರಿಂದಾಗಿ ಆನ್​ಲೈನ್​ ಖರೀದಿಯಲ್ಲಿ ಮುಂದಿನ ದಿನಮಾನಗಳಲ್ಲಿ ಭಾರಿ ಪ್ರಮಾಣದಲ್ಲಿ ಪ್ರಗತಿ ಕಾಣಲಿದೆ ಎಂದು ರೆಡ್​ಸೀರ್​ ವರದಿ ಉಲ್ಲೇಖಿಸಿದೆ.

ಶೇಕಡಾ 45ರಷ್ಟು ಆನ್​ಲೈನ್​ ವ್ಯವಹಾರಕ್ಕೆ ವೆಚ್ಚ

ಭಾರತದ 50 ಪ್ರಮುಖ ನಗರಗಳ ಶೇಕಡಾ 32ರಷ್ಟು ಜನಸಂಖ್ಯೆ ಶೇಕಡಾ 45ರಷ್ಟು ಪ್ರಮಾಣದಲ್ಲಿ ಆನ್​ಲೈನ್​ ಖರೀದಿಯಲ್ಲೇ ತಮ್ಮ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ಇದು ಭಾರತದ ಆನ್​ಲೈನ್​ ಖರೀದಿದಾರರ ಸಂಖ್ಯೆಯಲ್ಲಿ ಹೆಚ್ಚಳ ಕಾಣುವುದಕ್ಕೆ ಕಾರಣವಾಗಿದೆ.

ಇನ್ನೊಂದು ಅಂಶದ ಪ್ರಕಾರ, ಆನ್​ಲೈನ್​ ಬಳಕೆದಾರರಲ್ಲಿ ಹೆಚ್ಚಳ ಕಾಣುತ್ತಿದ್ದರೂ, ದೇಶದ ಕೆಲ ಪ್ರಮುಖ ನಗರಗಳಲ್ಲಿ ಇನ್ನೂವರೆಗೂ ಖರೀದಿದಾರರ ಕೊರತೆ ಇದೆ ಎಂದು ವರದಿ ಕಂಡುಕೊಂಡಿದೆ.

ಆದಾಗ್ಯೂ, ಮುಂದಿನ 5 ವರ್ಷಗಳಲ್ಲಿ ಪ್ರತಿ ಕುಟುಂಬದ ಆದಾಯ ಮತ್ತು ಖರೀದಿ ವೆಚ್ಚ ಬದಲಾಗಲಿದೆ. ಇದು ಮುಂದಿನ ದಿನಮಾನಗಳಲ್ಲಿ ಅಮೆರಿಕಾ ಮತ್ತು ಜರ್ಮನಿ ದೇಶಗಳ ಸಾಲಿಗೆ ಸೇರಲಿದೆ ಎಂದು ವರದಿ ತಿಳಿಸಿದೆ.

ಆನ್​ಲೈನ್​ ಖರೀದಿದಾರರ ಹೆಚ್ಚಳಕ್ಕೆ ಕೊರೋನಾ ಸಾಂಕ್ರಾಮಿಕ ರೋಗ ಕಾರಣವಾಗಿದೆ ಎಂದು ಹೇಳಬಹುದು. ಜನರು ತಮ್ಮ ಅಗತ್ಯತೆಗಳನ್ನು ಇ-ಕಾಮರ್ಸ್​ ಕಂಪನಿಗಳ ಮೂಲಕ ಪೂರೈಸಿಕೊಳ್ಳಲು ಮುಂದಾಗಿರುವುದು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂಬುದು ವರದಿಯ ಅಂಬೋಣವಾಗಿದೆ.

ABOUT THE AUTHOR

...view details