ಕರ್ನಾಟಕ

karnataka

ETV Bharat / business

ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಳ್ಳುವವರಿಗೆ ಕಹಿ ಸುದ್ದಿ ; ಶೀಘ್ರದಲ್ಲೇ ಈ ಸೇವೆಯೂ ಜಿಎಸ್‌ಟಿ ವ್ಯಾಪ್ತಿಗೆ! - ಜಿಎಸ್‌ಟಿ ಕೌನ್ಸಿಲ್ ಸಭೆ

ಜಿಎಸ್‌ಟಿ ಕೌನ್ಸಿಲ್‌ನ ಫಿಟ್‌ಮೆಂಟ್ ಸಮಿತಿಯು ಈ ಸಲಹೆಯನ್ನು ನೀಡಿದೆ. ರೆಸ್ಟೋರೆಂಟ್‌ ಸೇವೆಯ ಅಡಿಯಲ್ಲಿ ಬರುವ ಕ್ಲೌಡ್ ಕಿಚನ್‌ಗಳು/ಸೆಂಟ್ರಲ್ ಕಿಚನ್‌ಗಳಿಂದ ಆಹಾರ, ಡೋರ್ ಡೆಲಿವರಿ ಹಾಗೂ ಇಲ್ಲಿಂದ ತೆಗೆದುಕೊಂಡು ಹೋಗುವ ಸೇವೆಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಸಮಿತಿ ಪ್ರಸ್ತಾಪಿಸಿದೆ..

Online food delivery services may attract GST soon. Check details
ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಳ್ಳುವವರಿಗೆ ಕಹಿ ಸುದ್ದಿ; ಶೀಘ್ರದಲ್ಲೇ ಈ ಸೇವೆಯೂ ಜಿಎಸ್‌ಟಿ ವ್ಯಾಪ್ತಿಗೆ!

By

Published : Sep 15, 2021, 4:47 PM IST

ನವದೆಹಲಿ :ಮನೆಯಲ್ಲಿ ಅಡುಗೆ ಮಾಡಲು ಸಮಯವೇ ಇಲ್ಲದ ಅದೆಷ್ಟೋ ಮಂದಿ ತಿಂಡಿ, ಉಪಹಾರಗಳಿಗೆ ಜೊಮ್ಯಾಟೊ ಹಾಗೂ ಸ್ವಿಗ್ಗಿಯಂತ ಆನ್‌ಲೈನ್‌ ಆರ್ಡರ್‌ ಮೊರೆ ಹೋಗುತ್ತಿದ್ದರು.

ಇಂತವರಿಗೆ ಇದೀಗ ಕೇಂದ್ರ ಸರ್ಕಾರ ಕಹಿ ಸುದ್ದಿ ನೀಡಿದೆ. ಆ್ಯಪ್ ಆಧಾರಿತ ಇ-ಕಾಮರ್ಸ್ ಆಪರೇಟರ್‌ (ಇಸಿಒ) ನೀಡುವ ಆಹಾರ ವಿತರಣಾ ಸೇವೆಗಳನ್ನು ಶೀಘ್ರದಲ್ಲೇ ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸೆಪ್ಟೆಂಬರ್ 17ರಂದು ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರೆಸ್ಟೋರೆಂಟ್‌ಗಳಿಂದ ಆಹಾರ ವಿತರಣೆ ಮಾಡುವ ಇಸಿಒಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೊ ಸೇವೆಗಳ ಮೇಲೆ ಜಿಎಸ್‌ಟಿ ವಿಧಿಸುವ ಪ್ರಸ್ತಾವನೆಯನ್ನು ಚರ್ಚಿಸಲಾಗುತ್ತದೆ.

ಜಿಎಸ್‌ಟಿ ಕೌನ್ಸಿಲ್‌ನ ಫಿಟ್‌ಮೆಂಟ್ ಸಮಿತಿಯು ಈ ಸಲಹೆಯನ್ನು ನೀಡಿದೆ. ರೆಸ್ಟೋರೆಂಟ್‌ ಸೇವೆಯ ಅಡಿಯಲ್ಲಿ ಬರುವ ಕ್ಲೌಡ್ ಕಿಚನ್‌ಗಳು/ಸೆಂಟ್ರಲ್ ಕಿಚನ್‌ಗಳಿಂದ ಆಹಾರ, ಡೋರ್ ಡೆಲಿವರಿ ಹಾಗೂ ಇಲ್ಲಿಂದ ತೆಗೆದುಕೊಂಡು ಹೋಗುವ ಸೇವೆಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಸಮಿತಿ ಪ್ರಸ್ತಾಪಿಸಿದೆ.

ಇ-ಕಾರ್ಮರ್ಸ್‌ ಆಪರೇಟರ್‌ಗಳನ್ನು ಡೀಮ್ಡ್ ಪೂರೈಕೆದಾರರು ಎಂದು ಎರಡು ವಿಭಾಗಗಳನ್ನ ವಿಂಗಡಿಸಲಾಗಿದೆ. ಇನ್‌ಪುಟ್‌ ಕ್ರೆಡಿಟ್‌ ಇಲ್ಲದೆ ರೆಸ್ಟೋರೆಂಟ್‌ನಿಂದ ಇಸಿಒಗೆ ಶೇ.5ರಷ್ಟು ತೆರಿಗೆ ಹಾಗೂ ಇನ್‌ಪುಟ್‌ ಕ್ರಿಡಿಟ್‌ನೊಂದಿಗೆ ಶೇ.18ರಷ್ಟು ತೆರಿಗೆ. ಇಸಿಒನಿಂದ ಗ್ರಾಹಕರಿಗೆ ನಿಯಮಿತ ಇನ್‌ಪುಟ್‌ ಕ್ರಿಡಿಟ್‌ನೊಂದಿಗೆ ಶೇ.5ರಷ್ಟು ತೆರಿಗೆ ವಿಧಿಸಬೇಕೆಂದು ಪ್ರಸ್ತಾಪದ ಸುತ್ತೋಲೆಯಲ್ಲಿ ತಿಳಿಸಿದೆ.

ABOUT THE AUTHOR

...view details