ನವದೆಹಲಿ: ಇತ್ತೀಚೆಗೆ ಆರಂಭಿಸಲಾದ ಆತ್ಮನಿರ್ಭರ ಭಾರತಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದೇಶಾದ್ಯಂತ 728 ಜಿಲ್ಲೆಗಳನ್ನು ಒಳಗೊಂಡ 'ಒಂದು ಜಿಲ್ಲೆ ಒಂದು ಉತ್ಪನ್ನ ಆದ್ಯತೆ' ಎಂಬ ಯೋಜನೆಯನ್ನು ಕೇಂದ್ರ ಕೃಷಿ ಸಚಿವಾಲಯ ಅಂತಿಮಗೊಳಿಸಿದೆ. ಇದರ ಮೂಲಕ ಜಿಲ್ಲೆಗಳ ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯಗಳು ಕೃಷಿ, ತೋಟಗಾರಿಕಾ, ಪ್ರಾಣಿ, ಕೋಳಿ, ಹಾಲು, ಮೀನುಗಾರಿಕೆ, ಜಲಚರ ಸಾಕಣೆ ಮತ್ತು ಸಾಗರ ಕ್ಷೇತ್ರಗಳ ಉತ್ಪನ್ನಗಳ ಒಳಗೊಂಡ 'ಒನ್ ಡಿಸ್ಟ್ರಿಕ್ಟ್ ಒನ್ ಫೋಕಸ್ ಉತ್ಪನ್ನ' (ಒಡಿಒಎಫ್‌ಪಿ) ಯೋಜನೆ ಪಟ್ಟಿ ಅಂತಿಮಗೊಳಿಸಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (ಐಸಿಎಆರ್) ಈ ಪ್ರತಿಕ್ರಿಯೆ ಪಡೆದ ನಂತರ ಉತ್ಪನ್ನಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಇದು ದೇಶಾದ್ಯಂತ 728 ಜಿಲ್ಲೆಗಳನ್ನು ಒಳಗೊಂಡಿದೆ. ಸರ್ಕಾರದಿಂದ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಕ್ಕು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.