ಕರ್ನಾಟಕ

karnataka

ETV Bharat / business

ಪೆಟ್ರೋಲ್, ಡೀಸೆಲ್​ ಮೇಲೆ ಸುಂಕ ಹೆಚ್ಚಿಸಿ ತೈಲ ವಿತರಕರ ಜೇಬಿಗೆ ಕೈಹಾಕಿದ ಕೇಂದ್ರ - ತೈಲ ಮಾರಾಟ ಕಂಪನಿಗಳು

ಇತ್ತೀಚಿನ ಸುಂಕದ ಏರಿಕೆಯು ಪರೋಕ್ಷ ಸಾಧನಗಳ ಮೂಲಕ ಸರ್ಕಾರವು ಇನ್ನೂ ಒಎಂಸಿಗಳನ್ನು ನಿಯಂತ್ರಿಸಲು ಸಮರ್ಥವಾಗಿದೆ ಎಂಬ ಅಂಶ ತಿಳಿಸುತ್ತದೆ. ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪುವಲ್ಲಿ ಹಿನ್ನಡೆ ಆಗಿದ್ದರಿಂದ, ಕೊರತೆಯ ಅಂತರ ಸರಿದೂಗಿಸಲು ಸುಂಕ ಸಹ ಏರಿಕೆ ಮಾಡಿದೆ ಎಂದು ಇಂಡಿಯಾ ರೇಟಿಂಗ್ಸ್ ಹೇಳಿದೆ.

petrol
ಪೆಟ್ರೋಲ್

By

Published : May 9, 2020, 7:14 PM IST

ಮುಂಬೈ: ಇಂಧನದ ಮೇಲಿನ ಹೆಚ್ಚುವರಿ ಕಸ್ಟಮ್ಸ್ ಮತ್ತು ಅಬಕಾರಿ ಸುಂಕದ ಏರಿಕೆಯು ಮೂರು ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಆದಾಯ ಗಳಿಕೆಗೆ ಹಿನ್ನಡೆ ಆಗಲಿದ್ದು, ಇವುಗಳ ಹತೋಟಿ ಮೇಲೂ ಪರಿಣಾಮ ಬೀರುತ್ತದೆ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಹೇಳಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಸರ್ಕಾರಿ ಸ್ವಾಮ್ಯದ ತೈಲ ವಿತರಕ ಕಂಪನಿಗಳು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಕಸ್ಟಮ್ಸ್ ಸುಂಕದಲ್ಲಿ 8 ರೂ. ಮತ್ತು ಪೆಟ್ರೋಲ್ ಮೇಲಿನ ವಿಶೇಷ ಅಬಕಾರಿ ಸುಂಕ ಲೀಟರ್​ಗೆ 2 ರೂ ಮತ್ತು ಡೀಸೆಲ್ ಲೀ.ಗೆ 5 ರೂ. ಹೆಚ್ಚಳದೊಂದಿಗೆ ಕೇಂದ್ರ, ಒಟ್ಟು ತೆರಿಗೆ ಸಂಗ್ರಹ 10 ರೂ. ಪೆಟ್ರೋಲ್ ಮತ್ತು ಡೀಸೆಲ್​ 13 ರೂ.ಗೆ ಏರಿಕೆ ಮಾಡಿದೆ.

ಈ ಸುಂಕದ ಏರಿಕೆಯು ಪರೋಕ್ಷ ಸಾಧನಗಳ ಮೂಲಕ ಸರ್ಕಾರವು ಇನ್ನೂ ಒಎಂಸಿಗಳನ್ನು ನಿಯಂತ್ರಿಸಲು ಸಮರ್ಥವಾಗಿದೆ ಎಂಬ ಅಂಶ ತಿಳಿಸುತ್ತದೆ. ಮಾರ್ಚ್ 23ರಂದು ಹೆಚ್ಚುವರಿ ಕಸ್ಟಮ್ಸ್ ಸುಂಕ ಮತ್ತು ಅಬಕಾರಿ ಸುಂಕ ಹೆಚ್ಚಿಸಲು ಸರ್ಕಾರ ವಿಶೇಷ ನಿಬಂಧನೆ ಜಾರಿಗೊಳಿಸಿತು ಎಂದು ರಿಸರ್ಚ್​ ಹೇಳಿದೆ.

ಜಿಎಸ್‌ಟಿ ಮತ್ತು ನೇರ ತೆರಿಗೆ ಸಂಗ್ರಹ ಗುರಿಯು ಕ್ರಮವಾಗಿ ಶೇ 3.4ರಷ್ಟು ಮತ್ತು ಶೇ12.2ರಷ್ಟು ಕಡಿಮೆ ಆಗಿದೆ. ಕೊರತೆಯ ಸಂಪನ್ಮೂಲವನ್ನು ಸರಿದೂಗಿಸಲು ಸರ್ಕಾರ, ಈ ತೀರ್ಮಾನ ತೆಗೆದುಕೊಂಡಿದೆ.

ಇದೇ ರೀತಿಯ ಪರಿಸ್ಥಿತಿ ರಾಜ್ಯ ಮಟ್ಟದಲ್ಲಿ ಗೋಚರಿಸುತ್ತದೆ. ರಾಜ್ಯಗಳು ದೆಹಲಿಯಂತಹ ತೆರಿಗೆ ಸಂಗ್ರಹ ಹೆಚ್ಚಿಸುವ ಸಾಧನವಾಗಿ ಪೆಟ್ರೋಲ್ ಮತ್ತು ಡೀಸೆಲ್​ನತ್ತ ದೃಷ್ಟಿ ನೆಟ್ಟಿವೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಮೇ 5ರಿಂದ ಕ್ರಮವಾಗಿ ಶೇ 30ರಷ್ಟು ಮತ್ತು ಶೇ 16.75ರಷ್ಟು ಹೆಚ್ಚಿದೆ.

ABOUT THE AUTHOR

...view details