ಕರ್ನಾಟಕ

karnataka

ETV Bharat / business

ಭಾರತದಲ್ಲಿ ವ್ಯವಹಾರ ನಡೆಸುವುದು ತುಂಬಾನೇ ಕಷ್ಟವಾಗ್ತಿದೆ... ಮೋದಿಗೆ 'ಮೂಡಿಸ್​' ಎಚ್ಚರಿಕೆ - ದೂರಸಂಪರ್ಕ ಇಲಾಖೆ

ಡಿಒಟಿಯ ಬೇಡಿಕೆಯು ಒಐಎಲ್​ಗೆ ಕ್ರೆಡಿಟ್ ಋಣಾತ್ಮಕವಾಗಿದೆ. ಭಾರತದಲ್ಲಿ ಅನಿರೀಕ್ಷಿತ ನಿಯಂತ್ರಣ ವಾತಾವರಣಕ್ಕೆ ಸಂಬಂಧಿಸಿದ ಅಪಾಯಗಳನ್ನು ಇದು ಎತ್ತಿ ತೋರಿಸುತ್ತದೆ. ಟೆಲಿಕಾಂ ಮತ್ತು ಇತರ ಕ್ಷೇತ್ರಗಳಲ್ಲಿನ ಹಲವು ಕಂಪನಿಗಳು 'ತೆರಿಗೆ ಮತ್ತು ಲಾಭಾಂಶದ ಬೇಡಿಕೆ'ಗಳಿಂದ ಪ್ರಭಾವಿತವಾಗಿವೆ ಎಂದು ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಅಭಿಪ್ರಾಯಪಟ್ಟಿದೆ.

Moodys
ಮೂಡಿಸ್

By

Published : Jan 23, 2020, 3:21 PM IST

ನವದೆಹಲಿ: ದೂರಸಂಪರ್ಕ ಇಲಾಖೆ (ಡಿಒಟಿ) ಎತ್ತಿದ 48,000 ಕೋಟಿ ರೂ.ಗಳ ಬೇಡಿಕೆ ವಿರುದ್ಧ ಆಯಿಲ್ ಇಂಡಿಯಾ (ಒಐಎಲ್) ಬುಧವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಹೊಂದಾಣಿಕೆಯ ಒಟ್ಟು ಆದಾಯದ (ಎಜಿಆರ್) ಬಾಕಿ ಮೊತ್ತ ₹ 48,000 ಕೋಟಿ ಕೋರಿ ಡಿಒಟಿ, ಒಐಎಲ್​ಗೆ ಬೇಡಿಕೆ ನೋಟಿಸ್ ನೀಡಿದೆ.

ಪರವಾನಗಿ ಶುಲ್ಕ, ದಂಡ ಮತ್ತು ಬಡ್ಡಿ ಸೇರಿದಂತೆ 2007-08ರ ಆರ್ಥಿಕ ವರ್ಷದಿಂದ ( ಎಫ್​ವೈ 2008) 2019ರವರೆಗೆ ನೋಟಿಸ್‌ಗಳನ್ನು ಒಐಎಲ್ ಸ್ವೀಕರಿಸಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಒಐಎಲ್ ಈ ವಿಷಯವನ್ನು ಡಿಒಟಿ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್‌ಇ) ಸೇರಿದಂತೆ ಟೆಲಿಕಾಂ ಅಲ್ಲದ ಕಂಪನಿಗಳಿಗೆ ಎಜಿಆರ್ ಅನ್ವಯಿಸದಿರುವಿಕೆಯ ಬಗ್ಗೆ ವಿವರಿಸಿದೆ.

ಡಿಒಟಿಯ ಬೇಡಿಕೆಯು ಒಐಎಲ್​ಗೆ ಕ್ರೆಡಿಟ್ ಋಣಾತ್ಮಕವಾಗಿದೆ. ಭಾರತದಲ್ಲಿ ಅನಿರೀಕ್ಷಿತ ನಿಯಂತ್ರಣ ವಾತಾವರಣಕ್ಕೆ ಸಂಬಂಧಿಸಿದ ಅಪಾಯಗಳನ್ನು ಇದು ಎತ್ತಿ ತೋರಿಸುತ್ತದೆ. ಟೆಲಿಕಾಂ ಮತ್ತು ಇತರ ಕ್ಷೇತ್ರಗಳಲ್ಲಿನ ಹಲವು ಕಂಪನಿಗಳು 'ತೆರಿಗೆ ಮತ್ತು ಲಾಭಾಂಶದ ಬೇಡಿಕೆ'ಗಳಿಂದ ಪ್ರಭಾವಿತವಾಗಿವೆ ಎಂದು ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಅಭಿಪ್ರಾಯಪಟ್ಟಿದೆ.

ಸರ್ಕಾರವು ತನ್ನ ಹಣಕಾಸಿನ ಕೊರತೆಯ ಗುರಿಯನ್ನು ಶೇ 3.3ರಷ್ಟ ಅನ್ನು 2020ರ ಹಣಕಾಸು ವರ್ಷಕ್ಕೆ ಕಳೆದುಕೊಳ್ಳಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಒಐಎಲ್​​ನಿಂದ ಯಾವುದೇ ಸಂಭಾವ್ಯ ಪಾವತಿ ಮತ್ತು ಗಡವು ಬಗ್ಗೆ ಅನಿಶ್ಚಿತತೆಯಿದೆ. ಈ ವಿವಾದ ಬಗೆಹರಿಯುವವರೆಗೂ ಕಂಪನಿಯ ರೇಟಿಂಗ್‌ಗಳಲ್ಲಿ ಹೆಚ್ಚಿನ ಬದಲಾವಣೆ ಆಗಲಿದೆ. ಕಂಪನಿಯು ಬಾಕಿ ಪಾವತಿಸಬೇಕಾದ ಸನ್ನಿವೇಶದಲ್ಲಿದ್ದು, ಈ ಪಾವತಿಯು ಐಒಎಲ್​​ ರೇಟಿಂಗ್‌ ಮೇಲೆ ಒತ್ತಡ ಬೀಳಲಿದೆ ಎಂದು ಮೂಡಿಸ್ ಹೇಳಿದೆ.

ABOUT THE AUTHOR

...view details