ಕರ್ನಾಟಕ

karnataka

ETV Bharat / business

ಟ್ರಂಪ್​ಗೆ ಕೊರೊನಾ ಪಾಸಿಟಿವ್​: ಕಚ್ಚಾ ತೈಲ, ಷೇರುಪೇಟೆಗೆ ಭೀತಿ ಏಕೆ? - ಟ್ರಂಪ್​​ಗೆ ಕೋವಿಡ್ ಪಾಸಿಟಿವ್

ಅಧ್ಯಕ್ಷರಿಗೆ ಕೊರೊನಾ ಇರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಬ್ರೆಂಟ್ ಕಚ್ಚಾ ಬೆಲೆ ಇಳಿಕೆಯಾಯಿತು. 78 ಸೆಂಟ್ಸ್ ಅಥವಾ ಶೇ 1.9ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ ಜಿಎಂಟಿ 05.16 ವೇಳೆಗೆ 40.53 ಡಾಲರ್​ನಲ್ಲಿತ್ತು. ಯುಎಸ್​ ತೈಲವು 79 ಸೆಂಟ್ಸ್ ಅಥವಾ ಶೇ 2ರಷ್ಟು ಇಳಿದು 37.93 ಡಾಲರ್​ಗೆ ತಲುಪಿದೆ.

Trump Covid Positive
ಟ್ರಂಪ್​​ಗೆ ಕೋವಿಡ್ ಪಾಸಿಟಿವ್

By

Published : Oct 2, 2020, 9:46 PM IST

ನ್ಯೂಯಾರ್ಕ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ವೈರಸ್​ ದೃಢಪಟ್ಟಿರುವುದು ಪರೀಕ್ಷೆ ಮೂಲಕ ತಿಳಿಯುತ್ತಿದ್ದಂತೆ ತೈಲ ಬೆಲೆಗಳು ಶುಕ್ರವಾರ ಶೇ 2ರಷ್ಟು ಇಳಿಕೆ ದಾಖಲಿಸಿದವು.

ಅಮೆರಿಕದ ಪ್ರಚೋದಕ ಪ್ಯಾಕೇಜ್ ಬೇಡಿಕೆಯ ಬಗ್ಗೆ ನಿರಂತರ ಚಿಂತನೆ ಹಾಗೂ ಸಮಾಲೋಚನೆ ನಡೆಯುತ್ತಿರುವ ಮಧ್ಯೆ ಟ್ರಂಪ್ ಅವರಿಗೆ ಕೋವಿಡ್​-19 ಇರುವುದು ಖಚಿತವಾಗಿದೆ.

ಅಧ್ಯಕ್ಷರಿಗೆ ಕೊರೊನಾ ಇರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಬ್ರೆಂಟ್ ಕಚ್ಚಾ ಬೆಲೆ ಇಳಿಕೆಯಾಯಿತು. 78 ಸೆಂಟ್ಸ್ ಅಥವಾ ಶೇ 1.9ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ ಜಿಎಂಟಿ 05.16 ವೇಳೆಗೆ 40.53 ಡಾಲರ್​ನಲ್ಲಿತ್ತು. ಯುಎಸ್​ ತೈಲವು 79 ಸೆಂಟ್ಸ್ ಅಥವಾ ಶೇ 2ರಷ್ಟು ಇಳಿದು 37.93 ಡಾಲರ್​ಗೆ ತಲುಪಿದೆ.

ಅಮೆರಿಕದ ತೈಲವು ಈ ವಾರ ಶೇ 5ಕ್ಕಿಂತಲೂ ಅಧಿಕ ಕುಸಿತವಾಗಿದೆ. ಆದರೆ ಬ್ರೆಂಟ್ ಸತತ ಎರಡನೇ ವಾರದಲ್ಲಿಯೂ ಇಳಿಕೆ ಕಂಡಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ ಅಮೆರಿಕದ ನೂತನ ಉತ್ತೇಜಕ ಪ್ಯಾಕೇಜ್‌ ಒಂದು ಕೊರತೆಯಾಗಿ ಕಂಡುಬರುತ್ತದೆ. ಇದು ಆಸ್ತಿ ವರ್ಗಗಳಲ್ಲಿ ನಿರಾಶೆಯನ್ನು ಪ್ರತಿಬಿಂಬಿಸುತ್ತದೆ. ಜಾಗತಿಕ ಬಳಕೆಯ ಚಿತ್ರಣದಲ್ಲಿ ಹೆಚ್ಚುತ್ತಿರುವ ಒಪೆಕ್ ಉತ್ಪಾದನೆಯಿಂದ ಆತಂಕಗಳು ಹೆಚ್ಚಾಗುತ್ತಿವೆ. ಹೀಗಾಗಿ, ತೈಲದ ಉಲ್ಬಣವು ಯಾವಾಗಲೂ ಸೀಮಿತವಾಗಿರುತ್ತದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್​ ಅವರಿಗೆ ಸೋಂಕು ಇದೆ ಎಂಬುದು ದೃಢ ಆಗುತ್ತಿದ್ದಂತೆ ವಾಲ್​ಸ್ಟ್ರೀಟ್​ನ ಸ್ಟಾಕ್ ಮಾರುಕಟ್ಟೆ ಸಹ ಕುಸಿತಕ್ಕೆ ಒಳಗಾಯಿತು.

ವಹಿವಾಟಿನ ಮೊದಲ ಕೆಲವು ನಿಮಿಷಗಳ ನಂತರ ಎಸ್&ಪಿ 500 ಶೇ 0.9ರಷ್ಟು ಕಡಿಮೆಯಾಯಿತು. ವಿಶ್ವದಾದ್ಯಂತದ ಷೇರುಗಳು ಕುಸಿದವು. ಖಜಾನೆ ಮತ್ತು ತೈಲ ಹೂಡಿಕೆದಾರರು ಅಪಾಯಕಾರಿ ಹೂಡಿಕೆಗಳಿಂದ ಹೊರಬಂದು ಸುರಕ್ಷಿತ ಹೂಡಿಕೆಯತ್ತ ಮುಖಮಾಡಿದರು. ಇದು ಹೂಡಿಕೆದಾರರ ಭಯವನ್ನು ಹೆಚ್ಚಿಸಿತು. ಆದರೆ, ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಗಳಳು ಕೊರೊನಾ ವೈರಸ್​ ಭಯದಿಂದ ವಹಿವಾಟಿನ ಮಾರಾಟದ ನಡುವೆಯೂ ಇಂತಹ ಅಸ್ತವ್ಯಸ್ತಗಳು ಸಂಭವಿಸಿವೆ.

ಬೆಳಗ್ಗೆ 9:42ರ ವೇಳೆಗೆ ಡೌ ಜೋನ್ಸ್ ಕೈಗಾರಿಕಾ ಸರಾಸರಿಯು 192 ಅಂಕ ಅಥವಾ ಶೇ 0.7ರಷ್ಟು ಕುಸಿದು 27,624 ಅಂಕಗಳ ಮಟ್ಟಕ್ಕೆ ಇಳಿದಿದೆ. ನಾಸ್ಡಾಕ್ ಕಾಂಪೊಸಿಟ್​ ಶೇ 1.3ರಷ್ಟು ಕುಗ್ಗಿದೆ.

ABOUT THE AUTHOR

...view details