ಕರ್ನಾಟಕ

karnataka

ETV Bharat / business

ಚೀನಾದ ವಲಸೆ ಕಂಪನಿಗಳು ಭಾರತಕ್ಕೆ ಬಂದರೆ ಲಾಭವಿಲ್ಲ: ನೊಬೆಲ್ ಪುರಸ್ಕೃತ ಬ್ಯಾನರ್ಜಿ - ಕೋವಿಡ್​ 19 ಮೇಲೆ ಭಾರತದ ವೆಚ್ಚ

ಪಶ್ಚಿಮ ಬಂಗಾಳ ಖಾಸಗಿ ಸುದ್ದಿ ಚಾನೆಲ್​ನಲ್ಲಿ ಮಾತನಾಡಿದ ನೊಬೆಲ್​ ಪುರಸ್ಕೃತ ಅರ್ಥಶಾಸ್ತ್ರಜ್ಞ ಬ್ಯಾನರ್ಜಿ, ಕೋವಿಡ್ -19 ವೈರಸ್​ ಚೀನಾದ ಮೂಲದೆಂದು ಎಲ್ಲರೂ ದೂಷಿಸುತ್ತಿದ್ದಾರೆ. ವ್ಯವಹಾರಗಳು ಚೀನಾದಿಂದ ಸ್ಥಳಾಂತರಗೊಂಡು ಭಾರತಕ್ಕೆ ಬರುವುದರಿಂದ ದೇಶಕ್ಕೂ ಲಾಭದಾಯಕವಾಗಲಿದೆ ಎಂದು ಜನರು ಹೇಳುತ್ತಿದ್ದಾರೆ. ಆದರೆ, ಅದು ನಿಜವಲ್ಲ ಎಂದಿದ್ದಾರೆ.

Abhijit Banerjee
ಅಭಿಜಿತ್ ಬ್ಯಾನರ್ಜಿ

By

Published : May 12, 2020, 3:50 PM IST

ಕೋಲ್ಕತ್ತಾ: ಕೊರೊನಾ ವೈರಸ್​ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಚೀನಾದ ವ್ಯವಹಾರಗಳು ಭಾರತಕ್ಕೆ ವರ್ಗವಾದರೂ ದೇಶಕ್ಕೆ ಲಾಭವಾಗಲಿದೆ ಎಂಬ ಬಗ್ಗೆ ಖಚಿತತೆ ಇಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯ ಪಟ್ಟಿದ್ದಾರೆ.

ಪಶ್ಚಿಮ ಬಂಗಾಳ ಖಾಸಗಿ ಸುದ್ದಿ ಚಾನೆಲ್​ನಲ್ಲಿ ಮಾತನಾಡಿದ ಬ್ಯಾನರ್ಜಿ, ಕೋವಿಡ್ -19 ವೈರಸ್​ ಚೀನಾದ ಮೂಲದೆಂದು ಎಲ್ಲರೂ ದೂಷಿಸುತ್ತಿದ್ದಾರೆ. ವ್ಯವಹಾರಗಳು ಚೀನಾದಿಂದ ಸ್ಥಳಾಂತರಗೊಂಡು ಭಾರತಕ್ಕೆ ಬರುವುದರಿಂದ ದೇಶಕ್ಕೂ ಲಾಭದಾಯಕವಾಗಲಿದೆ ಎಂದು ಜನರು ಹೇಳುತ್ತಿದ್ದಾರೆ. ಆದರೆ, ಅದು ನಿಜವಲ್ಲ ಎಂದು ಅರ್ಥಶಾಸ್ತ್ರಜ್ಞ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಪ್ರತಿಕ್ರಿಯೆ ಮಾರ್ಗಸೂಚಿ ಸಿದ್ಧಪಡಿಸುವ ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ ಜಾಗತಿಕ ಸಲಹಾ ಮಂಡಳಿಯ ಸದಸ್ಯರೂ ಆಗಿರುವ ಬ್ಯಾನರ್ಜಿ, ಚೀನಾ ತನ್ನ ಕರೆನ್ಸಿಯ ಸವಕಳಿ ಮಾಡಿದರೆ ಏನಾಗುತ್ತದೆ. ಆ ಸಂದರ್ಭದಲ್ಲಿ, ಚೀನಾದ ಉತ್ಪನ್ನಗಳು ಅಗ್ಗವಾಗುತ್ತವೆ ಮತ್ತು ಜನರು ತಮ್ಮ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸುತ್ತಾರೆ ಎಂದರು.

ಪರಿಹಾರ ಪ್ಯಾಕೇಜ್‌ಗಾಗಿ ಕೇಂದ್ರವು ಖರ್ಚು ಮಾಡಲು ಯೋಜಿಸಿರುವ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಅನುಪಾತದ ಕುರಿತು ಮಾತನಾಡಿದ ಬ್ಯಾನರ್ಜಿ, ಅಮೆರಿಕ, ಇಂಗ್ಲೆಂಡ್ ಮತ್ತು ಜಪಾನ್‌ನಂತಹ ದೇಶಗಳು ಆಯಾ ಜಿಡಿಪಿಗಳಲ್ಲಿ ಹೆಚ್ಚಿನ ಪಾಲನ್ನು ಖರ್ಚು ಮಾಡುತ್ತಿವೆ. ಭಾರತ ತನ್ನ ಜಿಡಿಪಿಯ ಶೇ ಒಂದಕ್ಕಿಂತ ಕಡಿಮೆ 1.70 ಲಕ್ಷ ಕೋಟಿ ರೂ. ಖರ್ಚು ಮಾಡಲು ಯೋಜಿಸಿದೆ. ಜಿಡಿಪಿಯ ಹೆಚ್ಚಿನ ಪ್ರಮಾಣವನ್ನು ನಾವು ಖರ್ಚು ಮಾಡಬೇಕು ಎಂದು ಅವರು ಇದೇ ವೇಳೆ ಸಲಹೆ ನೀಡಿದರು.

ABOUT THE AUTHOR

...view details