ನವದೆಹಲಿ: ಭಾರತೀಯ ರೈಲ್ವೆಯನ್ನು ಖಾಸಗೀಕರಣಕ್ಕೆ ಒಳಪಡಿಸುವುದಿಲ್ಲ. ಪ್ರಯಾಣಿಕರಿಗೆ ಉತ್ತಮವಾದ ಸೇವೆಗಳನ್ನು ಒದಗಿಸಲು ಕೇವಲ ವಾಣಿಜ್ಯಾತ್ಮಕ ಹೊರಗುತ್ತಿಗೆ ನೀಡುತ್ತೇವೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟ ಪಡಿಸಿದ್ದಾರೆ.
ರೈಲ್ವೆಯ ಅಭಿವೃದ್ಧಿ ಕಾರ್ಯಾಚರಣೆಗಾಗಿ ಮುಂದಿನ 12 ವರ್ಷಗಳಲ್ಲಿ ಅಂದಾಜು 50 ಲಕ್ಷ ಕೋಟಿ ರೂ. ನಿಧಿಯ ಅಗತ್ಯವಿದೆ. ಇದನ್ನು ಪೂರೈಸಲು ಸಾಧ್ಯವಾಗದ ಕಾರಣ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದರು.
ನಮ್ಮ ಉದ್ದೇಶವು ಪ್ರಯಾಣಿಕರಿಗೆ ಉತ್ತಮ ಸೇವೆಗಳು ಮತ್ತು ಗರಿಷ್ಠ ಸೌಲಭ್ಯಗಳನ್ನು ನೀಡುವುದು. ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವುದು ಅಲ್ಲ. ಭಾರತೀಯ ರೈಲ್ವೆ ಯಾವಾಗಲೂ ಭಾರತದ ಮತ್ತು ಭಾರತೀಯರ ಆಸ್ತಿಯಾಗಿ ಮುಂದುವರಿಯುತ್ತದೆ ಎಂದು ಮೇಲ್ಮನೆಯಲ್ಲಿ ಭರವಸೆ ನೀಡಿದರು.
ರಾಜ್ಯಸಭೆಯಲ್ಲಿ ರೈಲ್ವೆ ಖಾಸಗೀಕರಣ ಕುರಿತು ಮಾತನಾಡಿದ ರೈಲ್ವೆ ಸಚಿವ ಪ್ರತಿದಿನ ಸದಸ್ಯರು ಸಾಲು-ಸಾಲು ಬೇಡಿಕೆ ಮತ್ತು ಉತ್ತಮ ಸೇವೆಗಳು ಕಲ್ಪಿಸಿಯೆಂದು ಬರುತ್ತಾರೆ. ಮುಂದಿನ 12 ವರ್ಷಗಳವರೆಗೆ ಭಾರತ ಸರ್ಕಾರವು 50 ಲಕ್ಷ ಕೋಟಿ ರೂ. ನೀಡುವುದು ಸಾಧ್ಯತೆಯಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಬಜೆಟ್ ನಿರ್ಬಂಧಗಳು ಮತ್ತು ಇತರ ನೈಜ ಸಮಸ್ಯೆಗಳಿವೆ ಎದುರಾಗಿವೆ. ಹೊಸ ಸೌಲಭ್ಯಗಳು/ ರೇಕ್‌ಗಳನ್ನು ಒದಗಿಸಲು ಮತ್ತು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸಾವಿರಾರು ಹೊಸ ರೈಲುಗಳು ಪೂರೈಸುವ ಅಗತ್ಯವಿದೆ ಎಂದರು.