ನವದೆಹಲಿ:ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ದರ ಹಾಗೂ ವಾಯುಯಾನ ಟರ್ಬೈನ್ ಇಂಧನ (ATF) ದರವನ್ನು ತೈಲ ಮಾರುಕಟ್ಟೆ ಕಂಪನಿಗಳು ಹೆಚ್ಚಿಸಿದ್ದು, ಮೆಟ್ರೋ ಸಿಟಿಗಳಲ್ಲಿ ಇಂದಿನಿಂದ ಜಾರಿಗೆ ಬಂದಿದೆ.
ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಮೇಲೆ 11.50 ರೂ.ಹೆಚ್ಚಳವಾಗಿದ್ದು, ಸಿಲಿಂಡರ್ ಬೆಲೆ 593ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 584.50 ರೂ, 579 ರೂ, 569.50 ರೂ ನಿಂದ 616 ರೂ, 590.50 ರೂ ಹಾಗೂ 606.50 ರೂ.ಗೆ ಏರಿಕೆಯಾಗಿದೆ.
ಮೇ ತಿಂಗಳಲ್ಲಿ ದೆಹಲಿ ಮಾರುಕಟ್ಟೆಯಲ್ಲಿ 744 ರೂ. ಇದ್ದ ಸಿಲಿಂಡರ್ ಬೆಲೆಯನ್ನು 581.50 ರೂ.ಗೆ ಇಳಿಸಲಾಗಿತ್ತು. ಆದರೆ ಜೂನ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಇದರಿಂದ ಪ್ರತಿ ಸಿಲಿಂಡರ್‌ಗೆ 11.50 ರೂ. ಏರಿಸಲಾಗುವುದು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಇನ್ನು ರಾಷ್ಟ್ರ ರಾಜಧಾನಿಯಲ್ಲಿ ATF ದರ ಸಾವಿರ ಲೀಟರ್ಗೆ 11,030.62 ರೂ.ನಿಂದ to 33,575.37 ರೂ.ಗೆ ಹೆಚ್ಚಳವಾಗಿದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 38,543.48 ರೂ, 3,070.56 ರೂ. ಹಾಗೂ 34,569.30 ರೂಪಾಯಿಗೆ ಏರಿಕೆಯಾಗಿದೆ.