ಬೆಂಗಳೂರು:ನೋಕಿಯಾ ತನ್ನ ಬ್ಲೂಟೂತ್ ನೆಕ್ಬ್ಯಾಂಡ್ ಮತ್ತು ವೈರ್ಲೆಸ್ ಇಯರ್ಫೋನ್ಗಳನ್ನು ಫ್ಲಿಪ್ಕಾರ್ಟ್ನಲ್ಲಿ ಲಾಂಚ್ ಮಾಡುವುದಾಗಿ ಘೋಷಿಸಿದ್ದು, ಈ ಮೂಲಕ ಫ್ಲಿಪ್ಕಾರ್ಟ್ ಆಡಿಯೋ ಮತ್ತು ವೈರ್ಲೆಸ್ ಸಾಧನಗಳ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲಿದೆ.
ನೆಕ್ಬ್ಯಾಂಡ್ನ ಬೆಲೆ 1,999 ರೂಪಾಯಿ ಇದ್ದರೆ, ಇಯರ್ಫೋನ್ ಬೆಲೆ 3,999 ರೂಪಾಯಿ ಇರಲಿದೆ. ಈ ಎರಡೂ ಉತ್ಪನ್ನಗಳು ಏಪ್ರಿಲ್ 9ರಿಂದ ಫ್ಲಿಪ್ಕಾರ್ಟ್ನಲ್ಲಿ ದೊರಕಲಿವೆ ಎಂದು ಸಂಸ್ಥೆ ತಿಳಿಸಿದೆ.
ನೋಕಿಯಾದ ಬ್ಲೂಟೂತ್ ನೆಕ್ಬ್ಯಾಂಡ್ ನೋಕಿಯಾ ಬ್ಲೂಟೂತ್ ಹೆಡ್ಸೆಟ್ ಆದ T-2000 ಮತ್ತು ವೈರ್ಲೆಸ್ ಇಯರ್ಫೋನ್ ಆದ T-3110 ಪ್ರಮುಖವಾಗಿ ನಗರ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ.
ಹೆಡ್ಸೆಟ್ ಕ್ವಾಲ್ಕಂ QCC3034 ಬ್ಲೂಟೂತ್ ಆಡಿಯೋ ಚಿಪ್ ಸೆಟ್ ಹೊಂದಿರುವುದರ ಜೊತೆಗೆ ಗದ್ದಲ ನಿರೋಧಕ ತಂತ್ರಜ್ಞಾನದೊಂದಿಗೆ ಹಿನ್ನೆಲೆಯಲ್ಲಿ ಬರುವ ಗದ್ದಲವನ್ನು ತಡೆಯುವ ಅಥವಾ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ:6ನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ, ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಬಿಎಸ್ವೈ ಮನವಿ
ನಮ್ಮ QCC3034 ಬ್ಲೂಟೂತ್ ಆಡಿಯೋ aptX ಆಡಿಯೋ ಟೆಕ್ನಾಲಜಿ ಹೊಂದಿದ್ದು, ಶಬ್ದದ ಗುಣಮಟ್ಟ, ಕಡಿಮೆ ವಿದ್ಯುತ್ ಬಳಕೆ, ಬಳಕೆದಾರ ಸ್ನೇಹಿ ಆಗಿರಲಿದೆ ಎಂದು ಕ್ವಾಲ್ಕಂ ಇಂಡಿಯಾದ ಬ್ಯುಸಿನೆಸ್ ಡೆವೆಲೆಪ್ಮೆಂಟ್ನ ಸೀನಿಯರ್ ಡೈರೆಕ್ಟರ್ ಉದಯ್ ದೊಡ್ಲ ಹೇಳಿದ್ದಾರೆ.
ನೋಕಿಯಾದ ಬ್ಲೂಟೂತ್ ನೆಕ್ಬ್ಯಾಂಡ್ ನೆಕ್ಬ್ಯಾಂಡ್ ಅತ್ಯಂತ ವೇಗವಾಗಿ ಚಾರ್ಜಿಂಗ್ ಆಗುವ ಫೀಚರ್ ಹೊಂದಿದೆ. ನೆಕ್ ಬ್ಯಾಂಡ್ನ 'ಹಾಪ್ ಮೋಡ್'ನಲ್ಲಿ ಬಳಸಿ ಒಂದು ಡಿವೈಸ್ನಿಂದ ಮತ್ತೊಂದು ಡಿವೈಸ್ಗೆ ಸುಲಭವಾಗಿ ಬದಲಾಗಬಹುದಾಗಿದೆ.
ನೋಕಿಯಾ ವೈರ್ಲೆಸ್ ಇಯರ್ಫೋನ್ ಆದ T3110 ಗದ್ದಲವನ್ನು ನಿವಾರಿಸುವ ಅಥವಾ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದು, IPX7 ತಂತ್ರಜ್ಞಾನವನ್ನು ಹೊಂದಿದೆ. ಎರಡೂ ಉತ್ಪನ್ನಗಳು ಬ್ಲೂಟೂತ್ನ 5.1 ಟೆಕ್ನಾಲಜಿ ಹೊಂದಿವೆ, ದಕ್ಷತೆ ಹೊಂದಿರುತ್ತವೆ.
ನೋಕಿಯಾದ ಉತ್ಪನ್ನಗಳನ್ನು ಪರಿಚಯಿಸಲು ನಮಗೆ ಖುಷಿಯಾಗುತ್ತದೆ. ಈ ಉತ್ಪನ್ನಗಳ ಕೆಟಗರಿ ಹೆಚ್ಚು ಬೇಡಿಕೆ ಹೊಂದಿದೆ ಎಂದು ಫ್ಲಿಪ್ಕಾರ್ಟ್ನ ಪ್ರೈವೇಟ್ ಬ್ರಾಂಡ್ಸ್ ವಿಭಾಗದ ಉಪಾಧ್ಯಕ್ಷ ಚಾಣಕ್ಯ ಗುಪ್ತ ಅಭಿಪ್ರಾಯಪಟ್ಟಿದ್ದಾರೆ.