ಕರ್ನಾಟಕ

karnataka

ETV Bharat / business

ಲಾಕ್​ಡೌನ್ ನಿಂದ ಮೃತ ವಲಸೆ ಕಾರ್ಮಿಕರು, ವೈದ್ಯರ ಬಗ್ಗೆ ಗೊತ್ತಿಲ್ಲ.. MSME ಸ್ಥಗಿತದ ಲೆಕ್ಕವೂ ಇಲ್ವಂತೆ - ಎಂಎಸ್​ಎಂಇ ವಲಯ

2014-15ನೇ ಸಾಲಿನಿಂದ 2019-20ರ ಹಣಕಾಸು ವರ್ಷದ ನಡುವೆ ಸ್ಥಗಿತಗೊಂಡ ಎಂಎಸ್‌ಎಂಇಗಳ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಆರ್ಥಿಕ ತೊಂದರೆಯಿಂದಾಗಿ 2020ರ ಮಾರ್ಚ್‌ನಿಂದ ಆಗಸ್ಟ್ ವರೆಗೆ ಸ್ಥಗಿತಗೊಂಡ MSME ಬಗೆಗೆ ಯಾವುದೇ ದಾಖಲೆಗಳು ನಮ್ಮಲ್ಲಿ ಲಭ್ಯವಿಲ್ಲ..

pandemic
ಸಾಂಕ್ರಾಮಿಕ

By

Published : Sep 19, 2020, 7:24 PM IST

ನವದೆಹಲಿ: ಕೋವಿಡ್​​-19 ಪ್ರೇರೇಪಿತ ರಾಷ್ಟ್ರವ್ಯಾಪಿ ಲಾಕ್​ಡೌನ್​ ವೇಳೆ ವಲಸೆ ಕಾರ್ಮಿಕರ ಸಾವು ಹಾಗೂ ಸೋಂಕಿನಿಂದ ಪ್ರಾಣ ಕಳೆದುಕೊಂಡ ವೈದ್ಯರ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೆಯ ಬಳಿಕ ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆ ಎಂಎಸ್​ಎಂಇಗಳ ಸ್ಥಗಿತಗೊಂಡಿದ್ದರ ಯಾವುದೇ ದಾಖಲೆಗಳು ಸರ್ಕಾರದ ಬಳಿ ಇಲ್ಲ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವ (ಎಂಎಸ್‌ಎಂಇ) ಪ್ರತಾಪ್ ಚಂದ್ರ ಸಾರಂಗಿ ಹೇಳಿದ್ದಾರೆ.

2014-15ನೇ ಸಾಲಿನಿಂದ 2019-20ರ ಹಣಕಾಸು ವರ್ಷದ ನಡುವೆ ಸ್ಥಗಿತಗೊಂಡ ಎಂಎಸ್‌ಎಂಇಗಳ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಆರ್ಥಿಕ ತೊಂದರೆಯಿಂದಾಗಿ 2020ರ ಮಾರ್ಚ್‌ನಿಂದ ಆಗಸ್ಟ್ ವರೆಗೆ ಸ್ಥಗಿತಗೊಂಡ MSME ಬಗೆಗೆ ಯಾವುದೇ ದಾಖಲೆಗಳು ನಮ್ಮಲ್ಲಿ ಲಭ್ಯವಿಲ್ಲ ಎಂದಿದ್ದಾರೆ.

ಆದರೆ, ಎಂಎಸ್‌ಎಂಇಗಳ ಪುನರುಜ್ಜೀವನಗೊಳಿಸಲು ಸರ್ಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದ ಅವರು, ಎಂಎಸ್‌ಎಂಇಗಳಿಗೆ 3 ಲಕ್ಷ ಕೋಟಿ ರೂ. ಮೇಲಾಧಾರ ಮುಕ್ತ ಸ್ವಯಂಚಾಲಿತ ಸಾಲ ಘೋಷಿಸಲಾಗಿದೆ. 50,000 ಕೋಟಿ ರೂ. ಎಂಎಸ್‌ಎಂಇ ಬಂಡವಾಳ ನೀಡಲಾಗಿದೆ ಎಂದರು. ಎಂಎಸ್‌ಎಂಇಗಳ ವರ್ಗೀಕರಣ ಮತ್ತು ಎಂಎಸ್‌ಎಂಇಗಳ ಹೊಸ ನೋಂದಣಿಗೆ ಪರಿಷ್ಕೃತ ಮಾನದಂಡಗಳನ್ನು ಸಚಿವರು ಪ್ರಸ್ತಾಪಿಸಿದರು.

ABOUT THE AUTHOR

...view details