ನವದೆಹಲಿ: 'ಭಾರತೀಯ ರೈಲ್ವೆಯನ್ನು ಖಾಸಗೀಕರಣಕ್ಕೆ ಒಳಪಡಿಸುವ ಯೋಜನೆ ಇಲ್ಲ, ದೇಶದ ನಾಗರಿಕರ ಸ್ವತ್ತಾಗಿ ಉಳಿಯಲಿದೆ' ಎಂದು ಲೋಕಸಭೆಯಲ್ಲಿ ಕೆಲವು ಸದಸ್ಯರು ತೋರಿದ ರೈಲ್ವೆಯ ಕಾಳಜಿಗೆ ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯಲ್ ಅವರು ಪ್ರತಿಕ್ರಿಯಿಸಿದ ರೀತಿ ಇದು.
ರಾಷ್ಟ್ರೀಯ ಸಂಪರ್ಕ ಸಾಧನವಾದ ರೈಲ್ವೆ ಅಭಿವೃದ್ಧಿಗಾಗಿ ಮುಂದಿನ 12 ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದ್ದೇವೆ. ನಾನು ಸ್ಪಷ್ಟವಾಗಿ ಒಂದು ವಿಷಯನ್ನು ತಿಳಿಸಲು ಬಯಸುತ್ತೇನೆ. ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯೋಜನೆ ಆಗಲಿ ಅಥವಾ ಪ್ರಸ್ತಾವನೆ ಆಗಲಿ ನಮ್ಮ ಮುಂದೆ ಇಲ್ಲ. ಭಾರತೀಯ ರೈಲ್ವೆ ದೇಶದ ಜನರ ಸ್ವತ್ತಾಗಿ ಉಳಿಯಲಿದೆ ಎಂದು ಭರವಸೆ ನೀಡಿದರು.