ಕರ್ನಾಟಕ

karnataka

By

Published : May 5, 2021, 5:36 PM IST

ETV Bharat / business

KYC ನವೀಕರಣಕ್ಕೆ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದ ಆರ್​ಬಿಐ: ಇನ್ಮುಂದೆ ವಿಡಿಯೋ ಕೆವೈಸಿ

ಕೋವಿಡ್ ಸೋಂಕಿನ ಚಿಕಿತ್ಸೆಗಾಗಿ ಅನೇಕರಿಗೆ ಹಣದ ಅಗತ್ಯವಿದೆ. ಆದರೆ, ಕೆವೈಸಿ ಕಾರಣ ಹೇಳಿ ಅವರ ಖಾತೆಯನ್ನು ಫ್ರೀಜ್​ ಮಾಡಲಾಗಿದೆ. ಇದರಿಂದಾಗಿ ಖಾತೆದಾರರಿಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಖಾತೆ ಫ್ರೀಜ್​ ಮಾಡಲು ಮೊದಲು ಯಾವುದೇ ಮಾಹಿತಿ ನೀಡಲಾಗುವುದಿಲ್ಲ. ಖಾತೆಗಳ ಕೆವೈಸಿ ನವೀಕರಿಸಲು ನಾಲ್ಕು- ಐದು ದಿನಗಳು ಅಥವಾ ಕೆಲವೊಮ್ಮೆ ಒಂದು ವಾರ ತೆಗೆದುಕೊಳ್ಳುತ್ತದೆ.

RBI
RBI

ಮುಂಬೈ:ಕೋವಿಡ್​-19 ಎರಡನೇ ಅಲೆಯಿಂದಾಗಿ ಡಿಸೆಂಬರ್ 31ರವರೆಗೆ ಬಾಕಿ ಇರುವ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ನವೀಕರಣದೊಂದಿಗೆ ಖಾತೆಗಳ ಮೇಲೆ ಯಾವುದೇ ದಂಡನಾತ್ಮಕ ಕ್ರಮ ತೆಗೆದುಕೊಳ್ಳದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.

ಆರ್‌ಒಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿ ನಡೆಸಿ, ಕೋವಿಡ್​-19 ಪ್ರಕರಣಗಳ ಎರಡನೇ ಅಲೆಯನ್ನು ನಿಭಾಯಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ದೇಶದ ವಿವಿಧ ಭಾಗಗಳಲ್ಲಿನ ಕೋವಿಡ್​ ಸಂಬಂಧಿತ ನಿರ್ಬಂಧಗಳನ್ನು ಗಮನದಲ್ಲಿ ಇಟ್ಟುಕೊಂಡು, ಆವರ್ತಕ ಕೆವೈಸಿ ನವೀಕರಣವು ಬಾಕಿ / ಬಾಕಿ ಇರುವ ಗ್ರಾಹಕರ ಖಾತೆಗಳಿಗೆ, ಗ್ರಾಹಕ ಖಾತೆಗಳ ಕಾರ್ಯಾಚರಣೆಗಳಿಗೆ ಯಾವುದೇ ದಂಡದ ನಿರ್ಬಂಧ ಇರಬಾರದು ಎಂದು ನಿಯಂತ್ರಿತ ಘಟಕಗಳಿಗೆ ಸೂಚಿಸಲಾಗಿದೆ. ಬೇರೆ ಯಾವುದೇ ಕಾರಣಗಳಿಂದ 2021ರ ಡಿಸೆಂಬರ್ 31ರವರೆಗೆ ಯಾವುದೇ ಖಾತೆಗಳನ್ನು ಫ್ರೀಜ್​ ಮಾಡಬಾರದು ಎಂದರು.

ನಿಗದಿತ ಸಮಯದಲ್ಲಿ ಕೆವೈಸಿ ಆಗದ ಹೋದಲ್ಲಿ ಡಿಸೆಂಬರ್​​ 31ರ ತನಕ ಯಾವುದೇ ಖಾತೆಯನ್ನು ಫ್ರೀಜ್​ ಮಾಡಬಾರದು. ಕೆವೈಸಿ ನೆಪ ಹೇಳಿ ಸೂಚಿತ ಅವಧಿಗೆ ಬ್ಯಾಂಕ್​ಗಳು ಯಾರೊಬ್ಬರು ಖಾತೆಯನ್ನು ಫ್ರೀಜ್​ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆರ್​​ಬಿಐ ತಿಳಿಸಿದೆ.

ಕೋವಿಡ್ ಸೋಂಕಿನ ಚಿಕಿತ್ಸೆಗಾಗಿ ಅನೇಕರಿಗೆ ಹಣದ ಅಗತ್ಯವಿದೆ. ಆದರೆ, ಕೆವೈಸಿ ಕಾರಣ ಹೇಳಿ ಅವರ ಖಾತೆಯನ್ನು ಫ್ರೀಜ್​ ಮಾಡಲಾಗಿದೆ. ಇದರಿಂದಾಗಿ ಖಾತೆದಾರರಿಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಖಾತೆ ಫ್ರೀಜ್​ ಮಾಡಲು ಮೊದಲು ಯಾವುದೇ ಮಾಹಿತಿ ನೀಡಲಾಗುವುದಿಲ್ಲ. ಖಾತೆಗಳ ಕೆವೈಸಿ ನವೀಕರಿಸಲು ನಾಲ್ಕು-ಐದು ದಿನಗಳು ಅಥವಾ ಕೆಲವೊಮ್ಮೆ ಒಂದು ವಾರ ತೆಗೆದುಕೊಳ್ಳುತ್ತದೆ.

ಕೇಂದ್ರೀಯ ಬ್ಯಾಂಕ್​ನ ಈ ನಿರ್ಧಾರದಿಂದ ಬ್ಯಾಂಕ್​ ಗ್ರಾಹಕರಿಗೆ ಹೆಚ್ಚುವರಿ ಸಮಯ ಸಿಕ್ಕಂತಾಗಿದೆ. ವಿಡಿಯೋ ಕೆವೈಸಿಯ ವ್ಯಾಪ್ತಿಯನ್ನು ವಿಸ್ತರಣೆಯಾಗಿದೆ. ಗ್ರಾಹಕರು ತಮ್ಮ ಕೆವೈಸಿಯನ್ನು ನವೀಕರಿಸಿಕೊಳ್ಳಬೇಕು. ನವೀಕರಣಕ್ಕೆ ಎಲ್ಲ ಡಿಜಿಟಲ್​ ಮಾರ್ಗವನ್ನು ಬಳಸಬಹುದಾಗಿದೆ.

ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ಕೆವೈಸಿ ನವೀಕರಿಸಲು ಅನೇಕ ಬ್ಯಾಂಕ್​ಗಳು ತಮ್ಮ ಶಾಖೆಗೆ ಭೇಟಿ ನೀಡುವಂತೆ ಗ್ರಾಹಕರನ್ನು ಕೇಳಿಕೊಳ್ಳುತ್ತಿರುವುದರಿಂದ ಖಾತೆದಾರರಿಗೆ ಈ ಘೋಷಣೆ ಒಂದು ದೊಡ್ಡ ಪರಿಹಾರವಾಗಿದೆ. ಹೆಚ್ಚು ಅಪಾಯದ ಗ್ರಾಹಕರಿಗೆ ನವೀಕರಣ ಕನಿಷ್ಠ ಎರಡು ವರ್ಷಗಳಿಗೊಮ್ಮೆ, ಮಧ್ಯಮ- ಅಪಾಯದ ಗ್ರಾಹಕರಿಗೆ ಎಂಟು ವರ್ಷಗಳಿಗೊಮ್ಮೆ ಮತ್ತು ಕಡಿಮೆ -ಅಪಾಯದ ಗ್ರಾಹಕರಿಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಬೇಕಾಗುತ್ತದೆ.

ಕಳೆದ ವಾರ ದೇಶದ ಅತಿದೊಡ್ಡ ಸಾಲದಾತ ಎಸ್‌ಬಿಐ ಗ್ರಾಹಕರಿಂದ ಪಡೆದ ದಾಖಲೆಗಳ ಆಧಾರದ ಮೇಲೆ ಪೋಸ್ಟ್ ಅಥವಾ ನೋಂದಾಯಿತ ಇಮೇಲ್ ಮೂಲಕ ಕೆವೈಸಿ ನವೀಕರಿಸುವುದಾಗಿ ತಿಳಿಸಿತ್ತು. ಈಗ ಸಾಂಕ್ರಾಮಿಕ ರೋಗದ ನಡುವೆ ಬ್ಯಾಂಕಿನ ಶಾಖೆಗೆ ಭೇಟಿ ನೀಡಬೇಕಾಗಿಲ್ಲ.

ABOUT THE AUTHOR

...view details