ಕರ್ನಾಟಕ

karnataka

ETV Bharat / business

11 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ

ಅಕ್ಟೋಬರ್ 3 ರಿಂದ ಡೀಸೆಲ್ ಬೆಲೆ ಹಾಗೂ ಕಳೆದ 21 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

No change in petrol, diesel prices
11 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ

By

Published : Oct 13, 2020, 4:18 PM IST

ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಬೆಲೆಯಲ್ಲಿ ಸದ್ಯಕ್ಕೆ ಪರಿಷ್ಕರಣೆ ಮಾಡುವ ಅವಶ್ಯಕತೆ ಇಲ್ಲ ಎಂದು ಖಚಿತಪಡಿಸಿದ್ದರಿಂದ ಕಳೆದ 11 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಅಕ್ಟೋಬರ್ 3 ರಿಂದ ಇಂದಿನವರೆಗೂ ಡೀಸೆಲ್ ಬೆಲೆ ಅದೇ ಮಟ್ಟದಲ್ಲಿದ್ದು, ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆಗಳಾಗದೇ 21 ದಿನಗಳು ಕಳೆದಿವೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. (ಲೀಟರ್​ ಬೆಲೆ -ರೂಪಾಯಿಗಳಲ್ಲಿ)

ನಗರ ಪೆಟ್ರೋಲ್ ಡೀಸೆಲ್​
ದೆಹಲಿ 81.06 70.46
ಮುಂಬೈ 87.74 76.86
ಕೋಲ್ಕತ್ತಾ 82.59 73.99
ಬೆಂಗಳೂರು 83.69 74.63
ಚೆನ್ನೈ 84.14 75.95

ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಗ್ರಾಹಕರು ಇಂಧನ ಬೆಲೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಡೀಸೆಲ್​ ಬೆಲೆ ಕುಸಿದಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ABOUT THE AUTHOR

...view details